21
September, 2026

A News 365Times Venture

21
Monday
September, 2026

A News 365Times Venture

ಕಬಿನಿ ನಾಲೆಗಳಿಗೆ  ನೀರು ಹರಿಸುವಂತೆ ರೈತರಿಂದ  ಬೃಹತ್ ಪ್ರತಿಭಟನೆ, ಆಕ್ರೋಶ

Date:

ಮೈಸೂರು,ಸೆಪ್ಟಂಬರ್‌, 21,2026 (www.justkannada.in): ಕಬಿನಿ  ಜಲಾಶಯದಿಂದ ನಾಲೆಗಳಿಗೆ  ನೀರು ಹರಿಸುವಂತೆ ಆಗ್ರಹಿಸಿ ರೈತರು  ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ  ವ್ಯಕ್ತಪಡಿಸಿದರು.

ಕಬಿನಿ ಅಚ್ಚುಕಟ್ಟು ಭಾಗದ  ರೈತರು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ  ಗನ್ ಹೌಸ್  ಸರ್ಕಲ್ ಬಳಿ ಜಮಾಯಿಸಿ  ಕಾಡ ಕಚೇರಿಗೆ ಮುತ್ತಿಗೆ ಹಾಕಿ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದರು.

ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ,  ಕಬಿನಿ ಜಲಾಶಯ ಎರಡು ತಿಂಗಳ ಹಿಂದೆ  ಭರ್ತಿಯಾಗಿದ್ದರೂ ರೈತರಿಗೆ ಮೋಸ ಮಾಡಿ ರಾಜ್ಯ ಸರ್ಕಾರ ತಮಿಳುನಾಡಿನ ಮುಖ್ಯಮಂತ್ರಿಗಳ ಸ್ನೇಹಕ್ಕಾಗಿ  ನೀರು ಹರಿಸಿದೆ. ಈ ಮೂಲಕ ಕಬಿನಿ ಜಲಾಶಯ ಖಾಲಿ ಮಾಡಿ ಕಾವೇರಿ ಅಚ್ಚು ಕಟ್ಟು ರೈತರನ್ನು ಬಲಿ ಕೊಟ್ಟಿದೆ .      ಈಗ ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆಗಳನ್ನ ಬರಪೀಡಿತ ಪ್ರದೇಶ ಎಂದೂ ಘೋಷಣೆ ಮಾಡಿ. ರೈತರ ಕಣ್ಣಿಗೆ ಮಣೆರೆಚುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆ ಸ್ಥಳಕ್ಕೆ ಬಂದ ಅಧೀಕ್ಷಕ  ಅಭಿಯಂತರ ರಘು ಮೂರ್ತಿ ಅವರು ಮಾತನಾಡಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ರೈತರು ಅಧಿಕಾರಿಯನ್ನ ತರಾಟೆ ತೆಗೆದುಕೊಂಡರು. ನಂತರ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಮುಖ್ಯ ಇಂಜಿನಿಯರ್ ಗಣೇಶ್ ಅಧಿಕ್ಷಕ ಅಭಿಯಂತರ ರಘುಮೂರ್ತಿ ಹಾಗೂ ಇತರ ಅಧಿಕಾರಿಗಳ ಸಮ್ಮುಖದ ಸಭೆ ನಡೆದು ನಾಲೆಗಳಿಗೆ  ಸೆಪ್ಟಂಬರ್‌ 27ರಿಂದ ಎರಡನೇ ಕಟ್ಟು  ನೀರು ಹರಿಸಲಾಗುವುದು . ಈಗ ಉಳಿಕೆ  ಮಾಡಿದ ನೀರೆನ್ನ ಮೂರನೇ ಕಟ್ಟು ನೀರಿಗೆ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಚಳುವಳಿಯನ್ನು ಕೈಬಿಡಲಾಯಿತು .

ಪ್ರತಿಭಟನೆಯಲ್ಲಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಕೆ.ಜಿ.ಗುರುಸ್ವಾಮಿ, ಕಬಿನಿ  ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ  ಗೌರಿಶಂಕರ್,  ಸಿದ್ದೇಶ್, , ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

Key words: protest, farmers, demanding, release, water, Kabini canals.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರಿನಲ್ಲಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಆರಂಭ

ಮೈಸೂರು,ಸೆಪ್ಟಂಬರ್‌,21,2026 (www.justkannada.in) : ಮಹಾರಾಜ ಎಜುಕೇಶನ್ ಟ್ರಸ್ಟ್‌ (ರಿ) ವತಿಯಿಂದ ಮೈಸೂರಿನಲ್ಲಿ...

ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಪತ್ರಕರ್ತರಿಂದ ಒತ್ತಾಯ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in):  ರಾಜ್ಯದ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

ಬಿಜೆಪಿಯವರು ಕಾಗದ, ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ- ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in): ಬಿಜೆಪಿಯವರು ಕಾಗದ, ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ...

ಸಮಸ್ಯೆ ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ: ರೈತರು, ಜನರ ರಕ್ಷಣೆಗೆ ಬದ್ಧ-ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್‌,21,2026 (www.justkannada.in): ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ....