5
September, 2026

A News 365Times Venture

5
Saturday
September, 2026

A News 365Times Venture

ಕರ್ನಾಟಕ–ಫಿನ್‌ಲ್ಯಾಂಡ್‌ ಕೌಶಲ್ಯಾಭಿವೃದ್ಧಿಗೆ ಹೊಸ ಬಲ: ವಿದ್ಯಾರ್ಥಿ, ಶಿಕ್ಷಕರಿಗೆ ಜಾಗತಿಕ ಅವಕಾಶ

Date:

ಬೆಂಗಳೂರು, ಸೆಪ್ಟಂಬರ್,4,2026 (www.justkannada.in):  ಕರ್ನಾಟಕದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಸರ್ಕಾರಿ ಟೂಲ್‌ರೂಂ ತರಬೇತಿ ಕೇಂದ್ರ (GTTC) ಹಾಗೂ ಫಿನ್‌ ಲ್ಯಾಂಡ್‌ ನ Ylä-Savon koulutuskuntayhtymä (YSAO) ನಡುವಿನ ಕೌಶಲ್ಯಾಭಿವೃದ್ಧಿ ಸಹಕಾರವನ್ನು ಬಲಪಡಿಸಲಾಗಿದೆ.

ಈ ಸಹಯೋಗದ ಮೂಲಕ ಕರ್ನಾಟಕದ ಯುವಜನರಿಗೆ ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತರಬೇತಿ, ಕೈಗಾರಿಕಾ ಅನುಭವ ಮತ್ತು ಜಾಗತಿಕ ಉದ್ಯೋಗಾವಕಾಶಗಳ ದಾರಿ ತೆರೆಯುವ ಉದ್ದೇಶ ಹೊಂದಲಾಗಿದೆ. GTTCಯ ತಾಂತ್ರಿಕ ಮೂಲಸೌಕರ್ಯ, ಕೈಗಾರಿಕಾ ಸಂಪರ್ಕ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರದ ಪರಿಣತಿಯನ್ನು ಫಿನ್‌ ಲ್ಯಾಂಡ್‌ ನ ಕೌಶಲ್ಯಾಧಾರಿತ ವೃತ್ತಿಪರ ಶಿಕ್ಷಣ ವ್ಯವಸ್ಥೆ, ಆಧುನಿಕ ಬೋಧನಾ ವಿಧಾನಗಳು ಮತ್ತು ಕೆಲಸದ ಸ್ಥಳ ಆಧಾರಿತ ತರಬೇತಿಯೊಂದಿಗೆ ಸಂಯೋಜಿಸಲಾಗುತ್ತದೆ.

ಶಿಕ್ಷಕರಿಗೆ ವಿಶೇಷ ತರಬೇತಿ

ಸಹಯೋಗದ ಪ್ರಮುಖ ಅಂಶವಾಗಿ GTTCಯ ಬೋಧಕ ಸಿಬ್ಬಂದಿ ಮತ್ತು ನಿರ್ವಹಣಾ ತಂಡಕ್ಕೆ ಫಿನ್‌ಲ್ಯಾಂಡ್‌ ನಲ್ಲಿ ತರಬೇತಿ ಹಾಗೂ ಅಂತರರಾಷ್ಟ್ರೀಯ ಅನುಭವ ಒದಗಿಸುವ ಯೋಜನೆ ರೂಪಿಸಲಾಗಿದೆ. ತರಬೇತಿ ಪಡೆದ ಶಿಕ್ಷಕರನ್ನು ಮುಂದಿನ ಹಂತದಲ್ಲಿ ಮಾಸ್ಟರ್ ಟ್ರೈನರ್‌ ಗಳಾಗಿ ಬಳಸಿಕೊಂಡು, ಫಿನ್‌ಲ್ಯಾಂಡ್‌ನಿಂದ ಕಲಿತ ಹೊಸ ಬೋಧನಾ ವಿಧಾನ ಮತ್ತು ಉತ್ತಮ ಪದ್ಧತಿಗಳನ್ನು GTTCಯ ವಿವಿಧ ಕೇಂದ್ರಗಳಿಗೆ ವಿಸ್ತರಿಸುವ ಉದ್ದೇಶವಿದೆ.

ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣದ ಅವಕಾಶ

ಪ್ರಿಸಿಷನ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಫಿಟ್ಟಿಂಗ್, ಮೆಕಾಟ್ರಾನಿಕ್ಸ್ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿನಿಮಯ, ಪ್ರಾಯೋಗಿಕ ತರಬೇತಿ, ಕೈಗಾರಿಕಾ ಭೇಟಿಗಳು ಹಾಗೂ ಅಂತರರಾಷ್ಟ್ರೀಯ ಅನುಭವ ಕಲ್ಪಿಸುವ ಸಾಧ್ಯತೆಗಳ ಕುರಿತು ಸಹಕಾರ ನಡೆಯಲಿದೆ.

ಅರ್ಹತೆ ಹೊಂದಿರುವ GTTC ವಿದ್ಯಾರ್ಥಿಗಳಿಗೆ ಫಿನ್‌ ಲ್ಯಾಂಡ್‌ ನಲ್ಲಿ ವೃತ್ತಿಪರ ವಿದ್ಯಾರ್ಹತೆ ಮತ್ತು ಉನ್ನತ ಶಿಕ್ಷಣ ಮುಂದುವರಿಸುವ ಮಾರ್ಗಗಳನ್ನು ರೂಪಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಇದರಲ್ಲಿ ಪ್ರವೇಶ, ನಿಯಂತ್ರಣ, ವಲಸೆ ನಿಯಮಗಳು ಹಾಗೂ ಸಂಸ್ಥೆಗಳ ಅಗತ್ಯತೆಗಳಿಗೆ ಅನುಗುಣವಾಗಿ ಕ್ರೆಡಿಟ್ ಮಾನ್ಯತೆ ಅಥವಾ ವರ್ಗಾವಣೆಯ ಅವಕಾಶಗಳನ್ನೂ ಪರಿಶೀಲಿಸಲಾಗುವುದು.

ಭವಿಷ್ಯದ ಕೌಶಲ್ಯಗಳಿಗೆ ಆದ್ಯತೆ

ಮುಂದಿನ ಹಂತದಲ್ಲಿ ಬೆಂಗಳೂರಿನ GTTCಯಲ್ಲಿ ‘ಕರ್ನಾಟಕ–ಫಿನ್‌ ಲ್ಯಾಂಡ್ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್’ ಸ್ಥಾಪಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಕೈಗಾರಿಕಾ ಬೇಡಿಕೆ ಮತ್ತು ಪ್ರತ್ಯೇಕ ಕಾರ್ಯಕ್ರಮ ಒಪ್ಪಂದಗಳ ಆಧಾರದ ಮೇಲೆ ಈ ಕೇಂದ್ರವನ್ನು ರೂಪಿಸುವ ಉದ್ದೇಶವಿದೆ.

ಕೇಂದ್ರದಡಿ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಪ್ರಿಸಿಷನ್ ಎಂಜಿನಿಯರಿಂಗ್, ಆಟೊಮೇಷನ್ ಮತ್ತು ರೋಬೋಟಿಕ್ಸ್, ಮೆಕಾಟ್ರಾನಿಕ್ಸ್, ಇಂಡಸ್ಟ್ರಿ 4.0, ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಗ್ರೀನ್ ಸ್ಕಿಲ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಿಗೆ ತರಬೇತಿ ನೀಡುವ ಸಾಧ್ಯತೆ ಇದೆ.

ಕರ್ನಾಟಕದ ಕೌಶಲ್ಯಾಭಿವೃದ್ಧಿ ವ್ಯವಸ್ಥೆ, GTTCಯ ತಾಂತ್ರಿಕ ಸಾಮರ್ಥ್ಯ, ಫಿನ್‌ಲ್ಯಾಂಡ್‌ನ ವೃತ್ತಿಪರ ಶಿಕ್ಷಣ ಪರಿಣತಿ ಮತ್ತು ಕೈಗಾರಿಕಾ ಅಗತ್ಯಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸಿ, ಭವಿಷ್ಯಕ್ಕೆ ಸಿದ್ಧವಾಗಿರುವ ಉದ್ಯೋಗಪರ ಕೌಶಲ್ಯ ಮಾದರಿ ರೂಪಿಸುವುದು ಸಹಯೋಗದ ಪ್ರಮುಖ ಗುರಿಯಾಗಿದೆ.

ಕರ್ನಾಟಕ–ಫಿನ್‌ಲ್ಯಾಂಡ್ ನಡುವಿನ ಈ ಸಹಕಾರವು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗದೆ ಕೌಶಲ್ಯ, ತಂತ್ರಜ್ಞಾನ, ಕೈಗಾರಿಕೆ ಮತ್ತು ಉದ್ಯೋಗದ ನಡುವೆ ಅಂತರರಾಷ್ಟ್ರೀಯ ಸೇತುವೆ ನಿರ್ಮಿಸುವ ನಿರೀಕ್ಷೆ ಮೂಡಿಸಿದೆ.

ಕರ್ನಾಟಕದ ತಾಂತ್ರಿಕ ಯುವಕರಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗಾವಕಾಶ

ಕರ್ನಾಟಕ ಸರ್ಕಾರದ Government Tool Room & Training Centre (GTTC) ಹಾಗೂ ಆಸ್ಟ್ರೇಲಿಯಾದ NEPEAN Group ಸಹಯೋಗದಡಿ ರಾಜ್ಯದ ನುರಿತ ತಾಂತ್ರಿಕ ಯುವಕರಿಗೆ ಅಂತರರಾಷ್ಟ್ರೀಯ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಈ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ಈ ಸಹಯೋಗದ ಭಾಗವಾಗಿ, NEPEAN Groupನ ಅಂಗಸಂಸ್ಥೆಯಾದ PROK ಸಂಸ್ಥೆಯ ಸಿಡ್ನಿಯ Ingleburn ಉತ್ಪಾದನಾ ಘಟಕದಲ್ಲಿ ಉದ್ಯೋಗಕ್ಕಾಗಿ ಕರ್ನಾಟಕದ 7 ನುರಿತ ತಂತ್ರಜ್ಞರು ಆಯ್ಕೆಯಾಗಿದ್ದಾರೆ.

ಪ್ರತಿ ಅಭ್ಯರ್ಥಿಗೆ ವಾರ್ಷಿಕ ವೇತನ ಪ್ಯಾಕೇಜ್: ಸುಮಾರು ₹56 ಲಕ್ಷ

ಅಭಿವೃದ್ಧಿ ಹೊಂದಿದ ಉತ್ಪಾದನಾ ತಂತ್ರಜ್ಞಾನಗಳಲ್ಲಿ ತರಬೇತಿ ಪಡೆದ ನುರಿತ ತಾಂತ್ರಿಕ ಮಾನವ ಸಂಪನ್ಮೂಲಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಈ ನೇಮಕಾತಿ ಮತ್ತೊಮ್ಮೆ ತೋರಿಸಿದೆ.

 

ENGLISH SUMMARY…

Karnataka–Finland Skill Partnership Strengthened

Bengaluru, Sept. 4: The Government Toolroom Training Centre (GTTC), Karnataka, and Finland’s YSAO have strengthened their cooperation in technical and vocational education.

The partnership will focus on faculty development, student mobility, international exposure and pathways for higher vocational education in Finland.

It will also promote Finnish competence-based education, work-based learning and industry-oriented training in Karnataka.

A proposed “Karnataka–Finland Centre for Future Skills” at GTTC Bengaluru may focus on advanced manufacturing, robotics, mechatronics, Industry 4.0, digital manufacturing, green skills and EV technologies.

The initiative aims to create global career opportunities for Karnataka’s youth and build a future-ready, industry-skilled workforce.

Key words: Karnataka–Finland, Skill ,Partnership, Strengthened

The post ಕರ್ನಾಟಕ–ಫಿನ್‌ಲ್ಯಾಂಡ್‌ ಕೌಶಲ್ಯಾಭಿವೃದ್ಧಿಗೆ ಹೊಸ ಬಲ: ವಿದ್ಯಾರ್ಥಿ, ಶಿಕ್ಷಕರಿಗೆ ಜಾಗತಿಕ ಅವಕಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಾಲಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್,4,2026 (www.justkannada.in):  “ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ...

ಸಿಎಂ ಡಿಕೆಶಿಗಿಂತ ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯ

ಬೆಂಗಳೂರು,ಸೆಪ್ಟಂಬರ್,4,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ಗಿಂತ  ಸೂಪರ್ ಸಿಎಂ  ಇದ್ದಾರೆ...

ಮೈಸೂರು ದಸರಾ 2026: ಯುವದಸರಾ ಉದ್ಘಾಟಿಸಲಿದ್ದಾರೆ ‘ಇಂಡಿಯನ್ ಮೈಕೆಲ್ ಜಾಕ್ಸನ್’ ಪ್ರಭುದೇವ

ಮೈಸೂರು,ಸೆಪ್ಟಂಬರ್,4,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಭರ್ಜರಿ ಸಿದ್ಧತೆಗಳು...

ಬಸವರಾಜ ಕನ್ನಾಳೆ ಬಾಲ್ಕಿಯ ಬಿಜೆಪಿ ಕಾರ್ಯಕರ್ತ: ನನ್ನ ವಿರುದ್ದ ಸ್ಪರ್ಧೆಗೆ ಸಿದ್ದತೆ ನಡೆಸಿದ್ದ- ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು,ಸೆಪ್ಟಂಬರ್,4,2026 (www.justkannada.in):  ಕೆಪಿಎಸ್ ಸಿ ಹಗರಣದಲ್ಲಿ ಬಂಧಿತನಾಗಿರುವ ಬಸವರಾಜ ಕನ್ನಾಳೆ ಬಾಲ್ಕಿಯ...