26
August, 2026

A News 365Times Venture

26
Wednesday
August, 2026

A News 365Times Venture

ಕೆರೆಯಲ್ಲಿ ಒಂದೇ ಕುಟುಂಬದ 6 ಜನರ ಶವ ಪತ್ತೆ..

Date:

ವಿಜಯಪುರ, ಆಗಸ್ಟ್,26,2026 (www.justkannada.in): ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ 6 ಜನರ ಶವ ಪತ್ತೆಯಾಗಿದೆ.

ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ತನ್ನ ಐವರು ಮಕ್ಕಳೊಂದಿಗೆ ಭೂತನಾಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ತಾಯಿ ಶೋಭಾ ಜಾಲಗೇರಿ (45) ಹಾಗೂ ಅವರ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್‌ (10), ಸಾನಿಕಾ (7) ಮತ್ತು ವಿಕಾಸ್‌ (5) ಮೃತಪಟ್ಟವರು  ಎಂದು ಗುರುತಿಸಲಾಗಿದೆ.

ಮೃತರು ವಿಜಯಪುರ ಜಿಲ್ಲೆಯ ತೊರವಿ ಗ್ರಾಮದವರು ಎನ್ನಲಾಗಿದೆ. ಶೋಭಾ ಹಾಗೂ ಅವರ ಪತಿ ಭೀಮರಾಯ ಜಾಲಗೇರಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಶೋಭಾ, ಆ.24ರಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಐವರು ಮಕ್ಕಳೊಂದಿಗೆ ಮನೆಯಿಂದ ಬಂದಿದ್ದರು.

ಈ ಮಧ್ಯೆ ಇದೀಗ ತಾಯಿ ಮತ್ತು ಐವರು ಮಕ್ಕಳ ಶವ ಭೂತನಾಳ ಕೆರೆಯಲ್ಲಿ ಪತ್ತೆಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: Vijayapur,  Bodies of 6 members, same family, found , lake

The post ಕೆರೆಯಲ್ಲಿ ಒಂದೇ ಕುಟುಂಬದ 6 ಜನರ ಶವ ಪತ್ತೆ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುಗೆ ಅಭಿಮಾನದ ಬೀಳ್ಕೊಡುಗೆ

ಮೈಸೂರು,ಆಗಸ್ಟ್,26,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಸತತ ಹಲವು ವರ್ಷಗಳ...

ಎಲ್ಲಾ ಸಚಿವರು ಶಾಸಕರು ಕಾರ್ಯಕರ್ತರು ಪಕ್ಷದ ಶಿಸ್ತಿನ ಸಿಪಾಯಿಗಳು- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್​​ 26,2026 (ww.justkannada.in):  ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಗರಣ ಹಿನ್ನೆಲೆಯಲ್ಲಿ...

1,252 ಕೋಟಿ ರೂ. ವೆಚ್ಚದಲ್ಲಿ 8,355 ಹೊಸ ಶಾಲಾ ಕೊಠಡಿಗಳ ನಿರ್ಮಾಣ: ಶಾಲೆಗಳ ಕಟ್ಟಡ ದುರಸ್ತಿಗೆ ಸೂಚನೆ-ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆಗಸ್ಟ್, 24,2026 (www.justkannada.in): ಕಳೆದ ಮೂರು ವರ್ಷಗಳಲ್ಲಿ 10,241 ಶಾಲೆಗಳನ್ನು...

ಮೃತ ಅಗ್ನಿವೀರ್ ನಂದನ್ ಕುಟುಂಬಕ್ಕೆ ಶಾಸಕ ಹರೀಶ್ ಗೌಡ  2 ಲಕ್ಷ ರೂ. ನೆರವು

ಮೈಸೂರು, ಆಗಸ್ಟ್,24, 2026 (www.justkannada.in):  ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ...