ಬೆಂಗಳೂರು,ಏಪ್ರಿಲ್,14,2026 (www.justkannada.in): ಕೇಂದ್ರ ಸರ್ಕಾರದ ಜಿಡಿಪಿಗಿಂತ ರಾಜ್ಯದ ಜಿಡಿಪಿ ಉತ್ತಮವಾಗಿದೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಜಿಡಿಪಿ ಮೇಲೆ ರಾಜ್ಯದ ಅಭಿವೃದ್ದಿ ಲೆಕ್ಕ ಹಾಕಲು ಆಗಲ್ಲ. ಕೇಂದ್ರದ ಜಿಡಿಪಿಗಿಂತ ರಾಜ್ಯದ ಜಿಡಿಪಿ ಉತ್ತಮ ಎಂದಿದ್ದಾರೆ. ಕೆಲವು ವಾಸ್ತವ ಅಂಶ, ನಿಜಾಂಶ ಇದೆ. ಅದನ್ನ ನೋಡಬೇಕು ಎಂದರು.
ನಾನು ಎರಡು ಸಲ ಸಿಎಂ ಆಗಿದ್ದವನು ನಾನು ಸತ್ಯ ಹೇಳಲು ಹೊರಟರೆ ವಿಲನ್ ಆಗಿಬಿಡುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುವ ವ್ಯವಸ್ಥೆ ಬರಬೇಕು. ಅದರ ಬಗ್ಗೆ ಪಕ್ಷದ ಕಾರ್ಯಕರ್ತರು ಗಮನ ಕೊಡಬೇಕು ಯಾರು ಸಿಎಂ ಆಗಬೇಕು ಅನ್ನೋದು ನಂತರ ನೋಡೋಣ ಎಂದು ಹೆಚ್ ಡಿಕೆ ತಿಳಿಸಿದರು.
Key words: Union Minister, HDK, CM, state, GDP, better
The post ಕೇಂದ್ರದ ಜಿಡಿಪಿಗಿಂತ ರಾಜ್ಯದ GDP ಉತ್ತಮ ಎಂದ ಸಿಎಂಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




