ಚಾಮರಾಜನಗರ,ಜೂನ್,8,2026 (www.justkannada.in): ಮೊದಲ ಹಂತ ಬಳಿಕ ಇದೀಗ 2ನೇ ಹಂತದಲ್ಲಿ ಉಳಿದ ಸಚಿವ ಸ್ಥಾನ ತುಂಬಲು ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿಎಂ ಡಿಕೆ ಶಿವಕುಮಾರ್ ಕಸರತ್ತು ನಡೆಸಲಿದ್ದು ಶಾಸಕರ ಲಾಬಿ ಹೆಚ್ಚಾಗಿದೆ. ಈ ನಡುವೆ ಶಾಸಕ ಪುಟ್ಟರಂಗಶೆಟ್ಟಿ ಸಹ ತಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ನನಗೆ ಮೊದಲ ಹಂತದಲ್ಲೆ ಸಚಿವ ಸ್ಥಾನ ಸಿಗಬೇಕಿತ್ತು. 2ನೇ ಹಂತದಲ್ಲಿ ಸಿಗುವ ವಿಶ್ವಾಸವಿದೆ. ರಾಜ್ಯಸಭೆ ಚುನಾವಣೆ ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ.
ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಜಾತಿವಾರು ತೆಗೆದುಕೊಂಡು ನನಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಗೂ ಮನವಿ ಮಾಡುತ್ತೇನೆ ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.
Key words: confident, ministerial position, MLA, Puttarangashetty
The post ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ-ಶಾಸಕ ಪುಟ್ಟರಂಗಶೆಟ್ಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




