ಹಾಸನ,ಏಪ್ರಿಲ್,23,2026 (www.justkannada.in): ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆಯಾಗುತ್ತಾರೆಯೇ ಎಂಬ ವದಂತಿ ಹಬ್ಬಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅಧಿಕಾರಕ್ಕಾಗಿ ಆ ಜನರನ್ನ ಸೇರಿಸಿಕೊಳ್ಳಬೇಕಾಗಿಲ್ಲ. ಯಾವುದೇ ಕಾರಣಕ್ಕೂ ಆ ವಿಷಯ ನಮ್ಮ ಮುಂದೆ ಹೇಳಬೇಡಿ ಎಂದರು.
ನಮಗೆ ಅವರ ಅವಶ್ಯಕತೆ ಇಲ್ಲ. ಈಗಾಗಲೇ ಅನುಭವಿಸಿದ್ದೇವೆ ರಾಜಕೀಯದಲ್ಲಿ ಶಕ್ತಿ ಬರುತ್ತೆ ಅಂತ ಅಂತಹ ವಿಚಾರಕ್ಕೆ ಕೈ ಹಾಕಲ್ಲ. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಹೆಚ್ ಡಿಕೆ ಹೇಳಿದರು.
Key words: Jameer, joining, JDS, Union Minister, HDK
The post ಜಮೀರ್ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ: ಕೇಂದ್ರ ಸಚಿವ HDK ಗರಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




