14
May, 2026

A News 365Times Venture

14
Thursday
May, 2026

A News 365Times Venture

ಟಿ.ಡಿ ರಾಜೇಗೌಡಗೆ ಬಿಗ್ ರಿಲೀಫ್ ; ಮರು ಮತಎಣಿಕೆ ಆದೇಶ, ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ

Date:

ಚಿಕ್ಕಮಗಳೂರು,ಮೇ,11,2026 (www.justkannada.in):  ಶೃಂಗೇರಿ ವಿಧಾನಸಭಾ ಕ್ಷೇತ್ರದ  ಮರುಮತ ಎಣಿಕೆ ಸಂಬಂಧ ಹೈಕೋರ್ಟ್ ಆದೇಶ ಮತ್ತು ಅದರ ನಂತರದ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು ಈ ಮೂಲಕ ಕಾಂಗ್ರೆಸ್ ನ ಟಿ.ಡಿ ರಾಜೇಗೌಡರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ   ಮರು ಎಣಿಕೆಗೆ ಆದೇಶಿಸಿದ್ದ ಹೈಕೋರ್ಟ್ ತೀರ್ಪಿನ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ಈಗ ತಡೆಯಾಜ್ಞೆ ನೀಡಿದೆ. ಮರು ಮತ ಎಣಿಕೆಗೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ  ಟಿಡಿ ರಾಜೇಗೌಡ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ  ಸುಪ್ರೀಂಕೋರ್ಟ್ ಇದೀಗ ಹೈಕೋರ್ಟ್ ಆದೇಶ ಮತ್ತು ನಂತರದ  ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿದೆ.

ಈ ಮೂಲಕ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ದೊಡ್ಡ ಮಟ್ಟದ ಜಯ ಸಿಕ್ಕಿದ್ದು, ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಮರು ಎಣಿಕೆಗೆ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆದ ಮರು ಎಣಿಕೆಯಲ್ಲಿ ರಾಜೇಗೌಡ ಅವರ 255 ಮತಗಳು ಅಮಾನ್ಯಗೊಂಡಿದ್ದವು. ಡಿ.ಎನ್. ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಟಿಡಿ ರಾಜೇಗೌಡರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Key words: TD Rajegowda, Recounting votes, order, results, stays,  Supreme Court

The post ಟಿ.ಡಿ ರಾಜೇಗೌಡಗೆ ಬಿಗ್ ರಿಲೀಫ್ ; ಮರು ಮತಎಣಿಕೆ ಆದೇಶ, ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯುತ್ ಮಾರ್ಗಗಳ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,14,2026 (www.justkannada.in): ಮೈಸೂರು ನಗರ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಒಳ ಭಾಗದಲ್ಲಿ...

 ಕೇರಳದ ನೂತನ ಸಿಎಂ ಆಗಿ ವಿ.ಡಿ ಸತೀಶನ್  ಆಯ್ಕೆ

ತಿರವನಂತಪುರಂ,ಮೇ,14,2026 (www.justkannada.in):  ಕೇರಳ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್  ಆಯ್ಕೆಯಾಗಿದ್ದಾರೆ. ಕೇರಳ...

ಹಿಜಾಬ್ ಗೆ ಅವಕಾಶ : ಉಪಚುನಾವಣೆಯ ನೋವು ಮರೆಯಲು ಮುಸ್ಲೀಮರ ತುಷ್ಟೀಕರಣ-ಶಾಸಕ ಸುನೀಲ್ ಕುಮಾರ್

ಬೆಂಗಳೂರು,ಮೇ,14,2026 (www.justkannada.in): ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿರುವ ರಾಜ್ಯ...

ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ : ಡಾ.ಈ.ಸಿ.ನಿಂಗರಾಜ್ ಗೌಡ.

ಮೈಸೂರು,ಮೇ,13,2026 (www.justkannada.in): ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಈಗಿನ ವಿದ್ಯಾರ್ಥಿಗಳ ಪ್ರತಿಭೆಯೇ...