16
April, 2026

A News 365Times Venture

16
Thursday
April, 2026

A News 365Times Venture

ಡಾ. ಜಿ. ಪರಮೇಶ್ವರ್ ಧೀಮಂತ ಆಡಳಿತಗಾರ, ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು – ಹೆಚ್.ಎ ವೆಂಕಟೇಶ್

Date:

ಮೈಸೂರು,ಆಗಸ್ಟ್,6,2025 (www.justkannada.in):  ಗೃಹ ಸಚಿವ ಡಾ. ಜಿ. ಪರಮೇಶ್ವರ್ ಧೀಮಂತ ಆಡಳಿತಗಾರ, ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್  ನುಡಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ಹುಟ್ಟುಹಬ್ಬವನ್ನು ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ಹಂಚುವುದರ ಮೂಲಕ ಮೈಸೂರು ಜಿಲ್ಲೆ ಡಾ. ಜಿ. ಪರಮೇಶ್ವರ್ ಅಭಿಮಾನಿಗಳ ಸಂಘದಿಂದ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್. ಎ. ವೆಂಕಟೇಶ್ , ಕೆಲವು ವಿಶೇಷ ವ್ಯಕ್ತಿತ್ವಗಳು ತಮ್ಮ ದೂರದೃಷ್ಟಿ ನಾಯಕತ್ವ ನಡವಳಿಕೆ, ಸೌಜನ್ಯ,  ಸಾಮರಸ್ಯ ಮತ್ತು ಸಾಮರ್ಥ್ಯದ ಕಾರಣಕ್ಕೆ ಗಮನಸೆಳೆಯುತ್ತವೆ. ಡಾ. ಪರಮೇಶ್ವರ್ ಸಹ ಇಂತಹ ಹಲವಾರು ವಿಶೇಷಣಗಳಿಂದ ಭೂಷಿತರಾದವರು. ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುವ ವ್ಯಕ್ತಿತ್ವವಾಗಿರುವ ಪರಮೇಶ್ವರ ಅವರು ತಮಗೆ ವಹಿಸಿದ ಎಲ್ಲಾ ಖಾತೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು.

ಉನ್ನತ ಶಿಕ್ಷಣ ಸಚಿವರಾಗಿ ಇವರು ಕೈಗೊಂಡ ಕ್ರಾಂತಿಕಾರಿ ನಿಲುವುಗಳ ಕಾರಣಕ್ಕೆ  ರಾಜ್ಯ ಶೈಕ್ಷಣಿಕವಾಗಿ ಬಹಳಷ್ಟು ಸಾಧನೆ ಮಾಡಲು ಅವಕಾಶ ಸಿಕ್ಕಿತ್ತು. ಬೌದ್ಧಿಕ ಸಾಮರ್ಥ್ಯದ ಬಳಕೆಗೆ ಡಾ. ಪರಮೇಶ್ವರ್ ವಿಶಾಲ ಅವಕಾಶ ಕಲ್ಪಿಸಿ ಹೊಸ ಮನ್ವಂತರದ ಸೃಷ್ಟಿಗೆ ಕಾರಣರಾದರು. ಇದರ ಪರಿಣಾಮವಾಗಿಯೇ ತಾಂತ್ರಿಕ, ಆರೋಗ್ಯ ಮತ್ತು ವ್ಯವಹಾರ ಅಧ್ಯಯನ ಕ್ಷೇತ್ರದಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗಿಂತ ನಾವು ಮುಂದಿದ್ದೇವೆ. ಮೂಲತಹ ಕೃಷಿ ತಜ್ಞರಾದರೂ ಆಡಳಿತದಲ್ಲಿ ಇವರು ಎತ್ತಿದ ಕೈ. ಗೃಹ ಸಚಿವರಾಗಿ ಸೂಕ್ಷ್ಮ ಪರಿಸ್ಥಿತಿಗಳನ್ನು ಸಮತೋಲಿತ ಮಾದರಿಯಲ್ಲಿ ನಿರ್ವಹಿಸಿ ಹೆಸರು ಪಡೆದಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ಬಣ್ಣಿಸಿದರು.

ಧೀಮಂತ ಆಡಳಿತಗಾರರಾಗಿರುವ ಡಾ. ಪರಮೇಶ್ವರ್ ಸಂಪುಟದ  ಹಲವು ಸಚಿವ ಸ್ಥಾನಗಳು, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಂತಹ ಮಹತ್ವದ ಹುದ್ದೆಯನ್ನು ನಿಭಾಯಿಸಿದ್ದಾರೆ. ಮುಂದೆ  ಅತ್ಯುನ್ನತ ರಾಜಕೀಯ ಸ್ಥಾನಮಾನ ಮತ್ತು ಆಡಳಿತದ  ನಾಯಕತ್ವ ಇವರಿಗೆ ದಕ್ಕಲಿ ಎಂಬುದು ನಮ್ಮ ಆಶಯ.

ಸಮಾಜದ ತಳ ಸಮುದಾಯದಿಂದ ಬಂದು, ಹಲವಾರು ಅಡೆತಡೆಗಳನ್ನು ದಾಟಿ ಬಹು ಎತ್ತರಕ್ಕೆ ಬೆಳೆದಿರುವ ಡಾ. ಪರಮೇಶ್ವರ್ ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು. ಇವರ ಭವಿಷ್ಯದ ಬೆಳವಣಿಗೆ ಉತ್ತರೋತ್ತರವಾಗಿರಲಿ ಎಂದು ನುಡಿದರು.

ಮೈಸೂರು ಜಿಲ್ಲಾ ಡಾ ಜಿ ಪರಮೇಶ್ವರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ. ಮಂಜುನಾಥ ಮಾತನಾಡಿ ಪರಮೇಶ್ವರ ಅವರಿಗೆ ರಾಜಕೀಯವಾಗಿ ಇನ್ನು ಹೆಚ್ಚು ಉತ್ತಮ ಸ್ಥಾನ ಸಿಗಲಿ ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ವೈ. ಎಸ್. ನಾಗರಾಜ್, ಡಾ.ಎಸ್ ಮರಿದೇವಯ್ಯ, ಮಣಿಕಂಠ, ಮಹೇಂದ್ರ ಕುಮಾರ್, ಕೋಟಿ ಮಂಜು, ಬಿ .ಎಲ್. ಪುಟ್ಟಸ್ವಾಮಿ( ವಿಕ್ರಾಂತ್), ಜೆ .ಪುನೀತ್ ಮತ್ತಿತರ ಮುಖಂಡರು ಹಾಜರಿದ್ದರು.

Key words: Dr.G. Parameshwar, Birthday, Mysore, H.A. Venkatesh

The post ಡಾ. ಜಿ. ಪರಮೇಶ್ವರ್ ಧೀಮಂತ ಆಡಳಿತಗಾರ, ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು – ಹೆಚ್.ಎ ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು

ಮೈಸೂರು,ಏಪ್ರಿಲ್ ,15,2026 (www.justkannada.in): ತಮ್ಮ ವಿರುದ್ದ ಕುಟುಂಬ ರಾಜಕಾರಣ ಆರೋಪ ಮಾಡಿದ್ದ...

ಕೃಷಿ ಪ್ರಾಯೋಗಿಕ (Agriculture Practical) ಪರೀಕ್ಷೆ: ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ಕಾರ್ಯಾಗಾರ.

  ಮೈಸೂರು, ಏ.೧೫,೨೦೨೬: ಕೃಷಿ ಪ್ರಾಯೋಗಿಕ (Agriculture Practical) ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ...

ಮುಂದಿನ ಟಾರ್ಗೆಟ್ ನಾನೇ ಎಂದು ಪ್ರಚಾರ: ಸಿದ್ದರಾಮಯ್ಯ, ಡಿಕೆಶಿ ಜೊತೆ ಚರ್ಚೆ ಮಾಡ್ತೇನೆ- ಸಚಿವ ಜಮೀರ್

ಬೆಂಗಳೂರು,ಏಪ್ರಿಲ್,15,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ...

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ: MLC ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು, ಏಪ್ರಿಲ್,15,2026 (www.justkannada.in): ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಜನರಿಗೆ ಕುಡಿಯುವ...