30
April, 2026

A News 365Times Venture

30
Thursday
April, 2026

A News 365Times Venture

ತಂತ್ರಜ್ಞಾನದ ಜತೆ ಇಂಗ್ಲಿಷ್ ಭಾಷೆ ಕೌಶಲ್ಯ ಇದ್ದರೆ ವಿಪುಲ ಉದ್ಯೋಗ ಅವಕಾಶ- ಗೋವಿಂದರಾಜು

Date:

ಮೈಸೂರು,ಮೇ,15,2025 (www.justkannada.in): ತಂತ್ರಜ್ಞಾನದ ಕುರಿತು ಅರಿವಿನ ಜತೆಗೆ ಇಂಗ್ಲಿಷ್ ಭಾಷೆ ಕೌಶಲ್ಯ ವೃದ್ಧಿಸಿಕೊಂಡರೆ ಹೇರಳ ಉದ್ಯೋಗ ಅವಕಾಶ ಸಿಗಲಿವೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಇಂಗ್ಲಿಷ್ ಸಹ ಪ್ರಾಧ್ಯಪಕ ಗೋವಿಂದರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷ್ಣರಾಜ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಅಭಿವೃದ್ಧಿ ಕೋಶ ಮತ್ತು ಇಂಗ್ಲಿಷ್ ವಿಭಾಗದ ವತಿಯಿಂದ  ಏರ್ಪಡಿಸಿದ್ದ,” ಇಂದಿನ ದಿನಮಾನದಲ್ಲಿ ಇಂಗ್ಲಿಷ್ ಸಂವಹನ ಕೌಶಲ್ಯದ ಪಾತ್ರ”, ಎಂಬ ವಿಷಯದ ಕುರಿತು  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಹಾಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯದ ಪರಿಣಿತಿ ಅಗತ್ಯವಾಗಿದೆ ಎಂದು ಹೇಳಿದರು.

ಹೊಸ ಯುಗದ ಆವಿಷ್ಕಾರವಾದ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ ಜಿ.ಪಿ.ಟಿಯಂತಹ  ಮುಂದುವರಿದ ತಂತ್ರಜ್ಞಾನವು ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳನ್ನು ಒಡ್ದುತ್ತಿವೆ. ಹಾಗಾಗಿ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಅಥವಾ ಯಾವುದೇ ವಿಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಇಂಗ್ಲಿಷ್ ಭಾಷೆ ಸಂವಹನ ಕೌಶಲ್ಯವನ್ನು ಹೆಚ್ಚು ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡ ಭಾಷೆ ಜತೆಗೆ ಇಂಗ್ಲಿಷ್ ಭಾಷೆ ಮತ್ತು ಅದರೊಂದಿಗೆ ತಂತ್ರಜ್ಞಾನ ಇದ್ದರೆ, ಉದ್ಯೋಗ ದೊರೆಯುವುದಲ್ಲದೆ, ಅಲ್ಲಿ ಗುರುತಿಸಿಕೊಳ್ಳಬಹುದು ಎಂದರು.

ಉದ್ಯೋಗ ಕ್ಷೇತ್ರದಲ್ಲಿ ಬಹು ಮುಖ್ಯ ಭಾಗವೇ ಇಂಗ್ಲಿಷ್ ಭಾಷೆ ಸಂವಹನ ಆಗಿರುವಾಗ, ಭಾಷೆ ಮಡಿವಂತಿಕೆ ಅಗತ್ಯ ಇಲ್ಲ ಎಂದ ಅವರು, ಉದ್ಯೋಗ ಪುರುಷ ಲಕ್ಷಣ ಅಲ್ಲ, ಮನುಷ್ಯ ಲಕ್ಷಣ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪುಟ್ಟಸ್ವಾಮಿ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ದೀಪು ಕುಮಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ಪಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ, ಚಂದ್ರಶೇಖರ ಬಿ, ಸಹಾಯಕ ಪ್ರಾಧ್ಯಪಕ ಶಿವಾಜಿ, ಅಧ್ಯಪಕರು, ಅಧ್ಯಾಪಕೇತ ರರು, ವಿದ್ಯಾರ್ಥಿಗಳು ಇದ್ದರು.

Key words: job opportunities, English language, skills, technology

The post ತಂತ್ರಜ್ಞಾನದ ಜತೆ ಇಂಗ್ಲಿಷ್ ಭಾಷೆ ಕೌಶಲ್ಯ ಇದ್ದರೆ ವಿಪುಲ ಉದ್ಯೋಗ ಅವಕಾಶ- ಗೋವಿಂದರಾಜು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು: ಬೌರಿಂಗ್ ಅವಘಡ ಎಚ್ಚರಿಕೆ ಗಂಟೆ – ಕೆ.ವಿ. ಮಲ್ಲೇಶ್

ಮೈಸೂರು,ಏಪ್ರಿಲ್,30,2026 (www.justkannada.in):  ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7 ಮಂದಿ...

KSDL ಸಾಧನೆ: ಸಚಿವ ಎಂ.ಬಿ ಪಾಟೀಲ್ ಗೆ ಕಾರ್ಮಿಕರ ಸಂಘದಿಂದ ಅಭಿನಂದನೆ

ಬೆಂಗಳೂರು,ಏಪ್ರಿಲ್,30,226 (www.justkannada.in):  ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು...

ಸಚಿವರ ಸಭೆ: ಮೂರು ನಗರಗಳಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆಗೆ ತೀರ್ಮಾನ

ಬೆಂಗಳೂರು,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ  ಡೇಟಾ ಕೇಂದ್ರಗಳು (ಸಸ್ಟೇನಬಲ್...

ಶೀಲ ಶಂಕಿಸಿ ಪತ್ನಿ ಕೊಂದಿದ್ದ ಆಪರಾಧಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ.

ಮಂಡ್ಯ. ಏಪ್ರಿಲ್, 30,2026 (www.justkannada.in):  ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದಿದ್ದ ಅಪರಾಧಿಗೆ...