25
August, 2026

A News 365Times Venture

25
Tuesday
August, 2026

A News 365Times Venture

ತಮಿಳುನಾಡಿಗೆ ಹರಿದ ಬರೊಬ್ಬರಿ 33 TMC ನೀರು: ಬರಿದಾದ ಕಾವೇರಿ ಜಲಾನಯನ ಪ್ರದೇಶಗಳು  

Date:

ಮೈಸೂರು,ಆಗಸ್ಟ್,25,2026 (www.justkannada.in):  ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮುಂಗಾರು ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಗಳು ಭರ್ತಿಯಾಗದೇ ಸಂಕಷ್ಟ ಎದುರಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಬರೋಬ್ಬರಿ 33 ಟಿಎಂಸಿ ನೀರು ಹರಿಸಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿಯ ಶಿಫಾರಸ್ಸು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ  ಮಾಡುತ್ತಿರುವ ರಾಜ್ಯ ಸರ್ಕಾರ ಕೆ‌ಆರ್ ಎಸ್ ಡ್ಯಾಂನಿಂದ 7 ಟಿಎಂಸಿ, ಕಬಿನಿ ಜಲಾಶಯದಿಂದ ಬರೊಬ್ಬರಿ 26 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಈವರೆಗೆ 33 ಟಿಎಂಸಿ ನೀರು ಬಿಡುಗಡೆ ಮಾಡಿದ್ದು,  ಪ್ರತಿ ನಿತ್ಯ ಸಾವಿರಾರು ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶಗಳು ಬರಿದಾಗುತ್ತಿದ್ದು ಸಂಕಷ್ಟದ ಪರಿಸ್ಥಿತಿ ಎದುರಾಗುವ ಆತಂಕವಿದೆ.

ಈಗಾಗಲೇ ಉತ್ತಮ ಮಳೆಯಿಂದಾಗಿ ಭರ್ತಿಯಾಗಿದ್ದ ಕಬಿನಿ ಜಲಾಶಯ 12 ಅಡಿ ಖಾಲಿಯಾಗಿದ್ದು, ಭರ್ತಿಯಾಗಬೇಕಿದ್ದ ಕೆ ಆರ್ ಎಸ್ ನಿಂದ 7 ಟಿಎಂಸಿ ನೀರು ಖಾಲಿಯಾಗಿದೆ. ನೀರು ಹರಿಸದಿದ್ದಿದ್ದರೆ ಕೆಆರ್ ಎಸ್ ಜಲಾಶಯ  120 ಅಡಿ ತಲುಪುತಿತ್ತು. ಕಬಿನಿ ಡ್ಯಾಂಗೆ ಎಂದಿನಂತೆ ಬಾಗಿನ ಅರ್ಪಣೆ ಮಾಡಬಹುದಿತ್ತು.

Key words:  33 TMC, water, Tamil Nadu, Cauvery River, KRS, Kabini

The post ತಮಿಳುನಾಡಿಗೆ ಹರಿದ ಬರೊಬ್ಬರಿ 33 TMC ನೀರು: ಬರಿದಾದ ಕಾವೇರಿ ಜಲಾನಯನ ಪ್ರದೇಶಗಳು   appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

225 ಗ್ರೇಡ್-1 ಪಂಚಾಯತ್ ಕಾರ್ಯದರ್ಶಿಗಳಿಗೆ PDO ಹುದ್ದೆಗೆ ಬಡ್ತಿ: ಕೌನ್ಸಿಲಿಂಗ್

ಬೆಂಗಳೂರು,ಆಗಸ್ಟ್,25,2026 (www.justkannada.in): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮಹತ್ವದ ಬಡ್ತಿ...

JustKannada ವರದಿಗೆ ಪಾಲಿಕೆ ಆಯುಕ್ತೆಯ ತಕ್ಷಣದ ಸ್ಪಂದನೆ: 24 ಗಂಟೆಯೊಳಗೆ ಅಪಾಯಕಾರಿ ಕೊಂಬೆ ತೆರವು

ಮೈಸೂರು. ಆಗಸ್ಟ್,25,2026 (www.justkannada.in): ನಗರದ ಚಾಮರಾಜಪುರಂ ಬಜ್ಜಣ್ಣ ಲೇನ್‌ ನ ಕೊಪ್ಪಲು...

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆ: CWRC ಆದೇಶ ಎತ್ತಿಹಿಡಿದ CWMA

ನವದೆಹಲಿ, ಆಗಸ್ಟ್, 25,2026 (www.justkannada.in):  ಕಾವೇರಿ ನದಿ ನೀರು ವಿವಾದಕ್ಕೆ  ಸಂಬಂಧಿಸಿದಂತೆ...

KPSC ಹಗರಣ ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹ: ಸಿಎಂ ಗೃಹ ಕಚೇರಿ ಮುಂದೆ ABVP ಪ್ರತಿಭಟನೆ..

ಬೆಂಗಳೂರು,ಆಗಸ್ಟ್,25,2026 (www.justkannada.in): ಕೆಪಿಎಸ್ ಸಿಯಲ್ಲಿ ನಡೆದಿದೆ ಎನ್ನಲಾದ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ...