4
May, 2026

A News 365Times Venture

4
Monday
May, 2026

A News 365Times Venture

ತಮಿಳುನಾಡು ಎಲೆಕ್ಷನ್ ರಿಸಲ್ಟ್ : ಮೈತ್ರಿಗೆ ಮುಂದಾಗುತ್ತಾ TVK– Congress..?

Date:

 ಚೆನ್ನೈ,ಮೇ,4,2026 (www.justkannada.in):  ತಮಿಳುನಾಡಿನ ವಿಧಾನಸಭಾ ಫಲಿತಾಂಶ ಹೊರಬಿದ್ದಿದ್ದು ನಟ-ರಾಜಕೀಯ ನಾಯಕ ವಿಜಯ್ ದಳಪತಿ ನೇತೃತ್ವದ ಟಿವಿಕೆ 110 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಹೊಸ ಅಲೆ ಸೃಷ್ಟಿಸಿದೆ.  ಆದರೆ ಅಧಿಕಾರಕ್ಕೇರಲು ಬೇಕಾದ ಸರಳ ಬಹುಮತ ಪಡೆಯಲು ವಿಫಲವಾಗಿರುವ ಟಿವಿಕೆ ಇದೀಗ ಯಾವ ಪಕ್ಷದ ಜೊತೆ ಮೈತ್ರಿಗೆ ಮುಂದಾಗಲಿದೆ ಎಂಬ ಕುತೂಹಲ ಉಂಟಾಗಿದೆ.

ತಮಿಳುನಾಡಿನಲ್ಲಿ ಅಧಿಕಾರಕ್ಕೇರಲು ಮ್ಯಾಜಿಕ್ ನಂಬರ್ 118 ಆಗಿದೆ. ಹೀಗಾಗಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಮೈತ್ರಿ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪ್ರಯತ್ನಿಸಿದ ಅನುಭವದ ಹಿನ್ನಲೆಯಲ್ಲಿ, ಇದೇ ಮಾದರಿಯ ರಾಜಕೀಯ ಸಮೀಕರಣ ತಮಿಳುನಾಡಿನಲ್ಲೂ ಮರುಕಳಿಸುವ ಸಾಧ್ಯತೆ ಕುರಿತು ವಿಶ್ಲೇಷಣೆ ನಡೆಯುತ್ತಿದೆ. ಆದರೆ ಕರ್ನಾಟಕದ ಮೈತ್ರಿ ನಾಯಕತ್ವದ ಭಿನ್ನಾಭಿಪ್ರಾಯ ಹಾಗೂ ಒಳಜಗಳಗಳಿಂದ ಹೆಚ್ಚು ಕಾಲ ಉಳಿಯಲಿಲ್ಲ ಎಂಬುದೂ ಗಮನಾರ್ಹ.

ಪ್ರಸ್ತುತ ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪ್ರಮುಖ ರಾಜಕೀಯ ಶಕ್ತಿಗಳಾಗಿದ್ದು, ಕಾಂಗ್ರೆಸ್ ಈಗಾಗಲೇ ಡಿಎಂಕೆ  ನೇತೃತ್ವದ ಮೈತ್ರಿಯ ಭಾಗವಾಗಿದೆ. ಈ ಹಿನ್ನೆಲೆದಲ್ಲಿ ಟಿವಿಕೆ ಜೊತೆ ಮೈತ್ರಿ ಕೈಗೊಳ್ಳುವ ಸಾಧ್ಯತೆ ಇದ್ದರೆ, ಅದು ರಾಜ್ಯದ ರಾಜಕೀಯ ಸಮೀಕರಣದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಬಹುದಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ದೊಡ್ಡ ಮಟ್ಟದ ಬೆಂಬಲದ ಕೊರತೆ ಇದ್ದು, TVKಗೆ ಸಂಘಟನಾ ಬಲ ಇನ್ನೂ ಆರಂಭಿಕ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಎರಡೂ ಪಕ್ಷಗಳ ಮೈತ್ರಿ ಪರಸ್ಪರ ಪೂರಕವಾಗುವ ಸಾಧ್ಯತೆ ಇದೆ. ವಿಶೇಷವಾಗಿ ವಿಜಯ್ ಅವರ ಯುವಜನರಲ್ಲಿ ಇರುವ ಪ್ರಭಾವ ಕಾಂಗ್ರೆಸ್‌ ಗೆ ಹೆಚ್ಚುವರಿ ಲಾಭ ತರುವ ಸಾಧ್ಯತೆ ಇದೆ.

ಆದರೆ ಈ ಮೈತ್ರಿಗೆ ಸವಾಲುಗಳೂ ಕಡಿಮೆ ಇಲ್ಲ. ಕಾಂಗ್ರೆಸ್ ಈಗಾಗಲೇ DMK ಮೈತ್ರಿಯಲ್ಲಿರುವುದರಿಂದ, ಹೊಸ ಮೈತ್ರಿ ರೂಪುಗೊಂಡರೆ ರಾಜಕೀಯ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯೂ ಪ್ರಮುಖವಾಗುತ್ತದೆ. ನೆಲಮಟ್ಟದ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವುದು ಮತ್ತೊಂದು ಸವಾಲಾಗಿದೆ.

ಒಟ್ಟಾರೆ, ಟಿವಿಕೆ- ಕಾಂಗ್ರೆಸ್ ಮೈತ್ರಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪರ್ಯಾಯವಾಗಿ ಹೊರಹೊಮ್ಮುವ ಸಾಧ್ಯತೆ ಇದ್ದರೂ, ಅದು ಯಶಸ್ವಿಯಾಗಲು ಸ್ಪಷ್ಟ ನಾಯಕತ್ವ ಮತ್ತು ಸಾಮಾನ್ಯ ಕಾರ್ಯಯೋಜನೆ ಅಗತ್ಯವೆಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕರ್ನಾಟಕದ ಅನುಭವದ ಬೆಳಕಿನಲ್ಲಿ ಈ ಮೈತ್ರಿಯ ಭವಿಷ್ಯ ಅನಿಶ್ಚಿತವಾಗಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ನೋಡುವುದಾದರೇ 234 ಕ್ಷೇತ್ರಗಳ  ಪೈಕಿ ಎಐಎಡಿಎಂಕೆ 53 ಕ್ಷೇತ್ರಗಳಲ್ಲಿ ಡಿಎಂಕೆ 71 ಕ್ಷೇತ್ರಗಳಲ್ಲಿ ಟಿವಿಕೆ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

Key words: Tamil Nadu, Election Results, TVK-Congress, alliance

The post ತಮಿಳುನಾಡು ಎಲೆಕ್ಷನ್ ರಿಸಲ್ಟ್ : ಮೈತ್ರಿಗೆ ಮುಂದಾಗುತ್ತಾ TVK– Congress..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆಲುವು: ಮತದಾರರಿಗೆ  ಧನ್ಯವಾದ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮೇ,4,2026 (www.justkannada.in): ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್...

ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಬೆಂಗಳೂರು,ಮೇ,4,2026 (www.justkannada.in):  ಗೆಲ್ಲುವ ಕಡೆ ಜಮೀರ್ ರನ್ನು ಸೋಲುವ ಕಡೆ ಡಿಕೆ...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ...

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...