13
June, 2026

A News 365Times Venture

13
Saturday
June, 2026

A News 365Times Venture

ನಮ್ಮ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ಸಚಿವ ಸತೀಶ್ ಜಾರಕಿಹೊಳಿ

Date:

ಬೆಂಗಳೂರು,ಜೂನ್,13,2026 (www.justkannada.in): ಎಸ್‌ ಟಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಮತ್ತಷ್ಟು ಪ್ರಾತಿನಿಧ್ಯ ನೀಡಬೇಕು. ನಮ್ಮ ಸಮುದಾಯಕ್ಕೆ  ಮತ್ತೆರಡು ಸಚಿವ ಸ್ಥಾನಗಳನ್ನು ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಈ ಹಿಂದೆ ಎಸ್‌ಟಿ ಸಮುದಾಯದ ಮೂವರು ಸಚಿವರಿದ್ದರು.ಈಗ  ನಮ್ಮ ಸಮುದಾಯಕ್ಕೆ ಮತ್ತೆರಡು ಖಾತೆಗಳನ್ನ ನೀಡಬೇಕು.  ಇದೇನೂ ನಮ್ಮ ಹೆಚ್ಚುವರಿ ಬೇಡಿಕೆಯಲ್ಲ, ಹಳೆಯ ಪ್ರಾತಿನಿಧ್ಯದ ಮುಂದುವರಿಕೆಯಷ್ಟೇ ಎಂದರು.

ಸಿಎಲ್ ಪಿ ಸಭೆ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳೀ, ಈ ಸಭೆಯನ್ನು ಕೇವಲ ಶಾಸಕರಿಗೆ ತರಬೇತಿ ನೀಡಲು ಕರೆಯಲಾಗಿದೆ. ಮತದಾನ ಮಾಡುವಾಗ ಶಾಸಕರಿಂದ ಯಾವುದೇ ತಪ್ಪುಗಳಾಗಬಾರದು. ಅದಕ್ಕಾಗಿ ಸರಿಯಾಗಿ  ಅಭ್ಯಾಸ ಮಾಡಬೇಕಾಗುತ್ತದೆ. ಎರಡು-ಮೂರು ಮತಗಳು ತಪ್ಪಾದರೂ ಅಭ್ಯರ್ಥಿ ಔಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುರಕ್ಷತೆ ಮತ್ತು ಸ್ಟ್ರಾಟಜಿ  ರೂಪಿಸಲು ಶಾಸಕರನ್ನು ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.

Key words: our community, two,ministerial posts, Minister, Satish Jarkiholi

The post ನಮ್ಮ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಡದಿ ಟೌನ್ ಶೀಪ್ ಯೋಜನೆ ಕುಮಾರಸ್ವಾಮಿ ಅವರದ್ದೇ – ಡಿ.ಕೆ ಸುರೇಶ್

ಬೆಂಗಳೂರು,ಜೂನ್,13,2026 (www.justkannada.in):  ಬಿಡದಿಯ ಟೌನ್ ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ...

‘ಉತ್ತರಕುಮಾರನ ಪೌರುಷ’ ಸಾಕು ಮಾಡಿ: ಕಸದ ಟೆಂಡರ್‌ ಭ್ರಷ್ಟಚಾರ CBI ತನಿಖೆಗೆ ವಹಿಸಿ- ಆರ್.ಅಶೋಕ್

ಬೆಂಗಳೂರು,ಜೂನ್,13,2026 (www.justkannada.in): ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ...

 ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಮಾಜಿ ಸಂಸದ ಡಿ.ಕೆ ಸುರೇಶ್

ಬೆಂಗಳೂರು,ಜೂನ್,13,2026 (www.justkannada.in):  ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಮಾಜಿ ಸಿಎಂ...

ಪ್ಯಾರಾ ಈಜು ರಾಷ್ಟ್ರ ಮಟ್ಟದ ಸ್ಪರ್ಧೆ: ಮೈಸೂರಿನ ರುತ್ವಗೆ ಮೂರು ಚಿನ್ನ

ಮೈಸೂರು,ಜೂನ್,13,2026 (www.justkannada.in):  ಬೆಂಗಳೂರಿನ ವೈಟ್‌ ಫಿಲ್ಡ್‌ ನ ಝೀ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ...