ಬೆಂಗಳೂರು,ಜೂನ್,19,2026 (www.justkannada.in): ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ. ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿಲ್ಲ ಎಂದು ಶಾಸಕ ಭೈರತಿ ಬಸವರಾಜು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಭೈರತಿ ಬಸವರಾಜು, ಪಕ್ಷ ಯಾರಿಗೆ ಮತ ಹಾಕಲು ಹೇಳುತ್ತೋ ಅವರಿಗೆ ಮತ ಹಾಕಿದ್ದೇನೆ. ನಾನು ಯಾವುದೇ ಅಡ್ಡ ಮತದಾನ ಮಾಡಿಲ್ಲ. ನನ್ನ ವಿರುದ್ದ ಅಪಪ್ರಚಾರ ಮಾಡಲಾಗಿದೆ. ನನಗೆ ಅಡ್ಡ ಮತದಾನ ಮಾಡುವ ಅವಶ್ಯಕತೆ ಇಲ್ಲ. ನಾನು ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತ ಎಂದರು.
ನನ್ನ ಮೇಲೆ ಎಷ್ಟೇ ಕೇಸ್ ಇರಲಿ ಏನೇ ಇರಲಿ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಯಾವುದೇ ಆಮಿಷಗಳಿಗೆ ಒಳಗಾಗುವ ವ್ಯಕ್ತಿ ಅಲ್ಲ. ಅಡ್ಡಮತದಾನ ಮಾಡಿದವರ ವಿರುದ್ದ ಕ್ರಮ ಆಗಬೇಕು ಎಂದು ಭೈರತಿ ಬಸವರಾಜು ಆಗ್ರಹಿಸಿದರು.
Key words: honest, BJP, worker, not, cross-vote, MLA, Bhairati Basavaraju
The post ನಾನು ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತ: ಅಡ್ಡಮತದಾನ ಮಾಡಿಲ್ಲ- ಶಾಸಕ ಭೈರತಿ ಬಸವರಾಜು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




