30
April, 2026

A News 365Times Venture

30
Thursday
April, 2026

A News 365Times Venture

ಪಾಕ್ ವಿರುದ್ದ ಪ್ರಧಾನಿ ಮೋದಿ ಏನೇ ನಿರ್ಧಾರ ತೆಗೆದುಕೊಂಡರೂ ಸ್ವಾಗತ- ಸಚಿವ ಸಂತೋಷ್ ಲಾಡ್

Date:

ಮೈಸೂರು,ಏಪ್ರಿಲ್,30,2025 (www.justkannada.in):  ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ವಿರುದ್ಧ ಪ್ರಧಾನಿ ಮೋದಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಾಗತ ಪಾಕ್ ಗೆ ನುಗ್ಗಿ ಹೊಡಿಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ  ಕಾರ್ಮಿಕ ಸಚಿವ ಸಂತೋಷ್ ಲಾಡ್, ಈ ಹಿಂದೆ ಇಂದಿರಾ ಗಾಂಧಿ ಈ ಹಿಂದೆ ಮಂಡಿಯೂರಿ ಕೂರುವಂತೆ ಮಾಡಿದ್ದರು. 1971 ರಲ್ಲಿ ಯುದ್ಧದ ಸಂದರ್ಭದಲ್ಲಿ ಯಾವ ರೀತಿ ಕ್ರಮ ಆಗಿತ್ತು ನೆನಪಿಸಬೇಕು. ಅದೇ ರೀತಿ ಈಗಲೂ ಮಾಡಲಿ. ಪ್ರಧಾನಿ ಮೋದಿ ಯಾವುದೇ ನಿರ್ಧಾರ ಕೈಗೊಂಡರೂ ನಾವು ಸ್ವಾಗತ ಮಾಡುತ್ತೇವೆ ಎಂದರು.

ಯಾರೇ ಪಾಕ್ ಪರ ಘೋಷಣೆ ಕೂಗಿದ್ರೂ ಶಿಕ್ಷೆ ಆಗಲಿ

ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಅದಕ್ಕೆ ಕಾನೂನು ಪ್ರಕಾರ ಕ್ರಮ ಆಗತ್ತೆ. ಯಾರು  ಘೋಷಣೆ ಕೂಗಿದ್ದಾರೆ ಅವರನ್ನು ಯಾರು ಸಪೋರ್ಟ್ ಮಾಡಲ್ಲ. ಯಾರೇ ಪಾಕ್ ಪರ ಘೋಷಣೆ ಕೂಗಿದರೂ ಶಿಕ್ಷೆ ಆಗಲಿ. ನನ್ನ ಕುಟುಂಬದವರು ಆದರೂ ಪರವಾಗಿಲ್ಲ ಶಿಕ್ಷೆ ಆಗಲಿ. ಇಂತಹ ಘಟನೆಗಳು ಯಾಕೆ ಜಾಸ್ತಿಯಾಗುತ್ತಿದೆ . ಯಾಕೆ ಘೋಷಣೆ ಕೂಗುತ್ತಿದ್ದಾರೆ ಗೊತ್ತಿಲ್ಲ. ನಾವಂತೂ ಘೋಷಣೆ ಕೂಗುವವರ ಪರವಿಲ್ಲ. ದೇಶದ ನಾನಾ ಭಾಗಗಳಲ್ಲೂ ಇತರ ಘಟನೆಗಳು ನಡೆದಿವೆ. ಯಾಕೆ ನಡೆಯುತ್ತಿದೆ ಅನ್ನೋದಕ್ಕೆ ನಾನು ಹೊಣೆಗಾರ ಅಲ್ಲ. ಅದಕ್ಕೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ? ಎಂದು ಪ್ರಶ್ನಿಸಿದರು.

Key words: PM, Modi, decision, Against ,PAK, welcome, Minister, Santosh Lad

The post ಪಾಕ್ ವಿರುದ್ದ ಪ್ರಧಾನಿ ಮೋದಿ ಏನೇ ನಿರ್ಧಾರ ತೆಗೆದುಕೊಂಡರೂ ಸ್ವಾಗತ- ಸಚಿವ ಸಂತೋಷ್ ಲಾಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ನಾಯಕರು ಸೈಲೆಂಟಾಗಿಲ್ಲ, ಶಿಸ್ತು ಅಂದುಕೊಳ್ಳಿ-  ಸಚಿವ ಶಿವರಾಜ್ ತಂಗಡಗಿ

ಚಿತ್ರದುರ್ಗ,ಏಪ್ರಿಲ್,30,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್...

ಮೈಸೂರು: ಬೌರಿಂಗ್ ಅವಘಡ ಎಚ್ಚರಿಕೆ ಗಂಟೆ – ಕೆ.ವಿ. ಮಲ್ಲೇಶ್

ಮೈಸೂರು,ಏಪ್ರಿಲ್,30,2026 (www.justkannada.in):  ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7 ಮಂದಿ...

KSDL ಸಾಧನೆ: ಸಚಿವ ಎಂ.ಬಿ ಪಾಟೀಲ್ ಗೆ ಕಾರ್ಮಿಕರ ಸಂಘದಿಂದ ಅಭಿನಂದನೆ

ಬೆಂಗಳೂರು,ಏಪ್ರಿಲ್,30,226 (www.justkannada.in):  ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು...

ಸಚಿವರ ಸಭೆ: ಮೂರು ನಗರಗಳಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆಗೆ ತೀರ್ಮಾನ

ಬೆಂಗಳೂರು,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ  ಡೇಟಾ ಕೇಂದ್ರಗಳು (ಸಸ್ಟೇನಬಲ್...