ಕೊಪ್ಪಳ,ಸೆಪ್ಟಂಬರ್,5,2026 (www.justkannada.in): ನಮ್ಮ ಪಾದಯಾತ್ರೆ ಜನಾಂದೋಲನವಾಗಿ ಪರಿವರ್ತನೆಯಾಗಿದೆ ಪಾದಯಾತ್ರೆ ಯಶಸ್ಸು ನೋಡಿ ಸಿಎಂ ಡಿಕೆ ಶಿವಕುಮಾರ್ ಹತಾಶರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಇಂದು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿವೈ ವಿಜಯೇಂದ್ರ, ಸರ್ಕಾರದ ಗ್ಯಾರಂಟಿಗಳ ಬಗ್ಗ ಬಿಜೆಪಿ ವಿರೋಧ ಮಾಡುತ್ತಿಲ್ಲ ನಿಮಗಿಂತ ಒಳ್ಳೆಯ ಗ್ಯಾರಂಟಿಗಳನ್ನು ಬಿಜೆಪಿ ಕೊಟ್ಟಿದೆ ಗ್ಯಾರಂಟಿಗೆ ನೀವು ದುಡ್ಡು ಎಲ್ಲಿಂದ ತರುತ್ತೀದ್ದೀರಿ? ಗ್ಯಾರಂಟಿಗೆ ಹಣ ಹೊಂದಿಸುವ ಬಗ್ಗೆ ಶ್ವೇತಪತ್ರ ಹೊರಡಿಸಿ. ಈಗ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದೀರಿ. ಇದ್ದಷ್ಟು ದಿನ ಒಳ್ಳೇ ಕೆಲಸ ಮಾಡಲಿ ಎಂದು ವಿನಂತಿಸುತ್ತೇನೆ ನೀವು ಅಕಾಶದಲ್ಲಿ ನಕ್ಷತ್ರದ ತೋರಿಸುವುದು ನಮಗೆ ಗೊತ್ತು ಸಿಎಂ ಅವರೇ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಬೇಡ. ನಿಮ್ಮದು ಯಾವ ಸೀಮೆಯ ಬಲಿಷ್ಠ ಸರ್ಕಾರ? ಜನರಿಗೆ ನೆರವಾಗದ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದು ವಾಗ್ದಾಳಿ ನಡೆಸಿದರು.
ನಮ್ಮ ಹೋರಾಟದ ಫಲವಾಗಿ ಸಿಎಂ ಡಿಕೆ ಶಿವಕುಮಾರ್ ಅವರ ಜೀವನದಲ್ಲಿ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ. ಹಸಿರು ಶಾಲು ಧರಿಸಿ ಉತ್ತರ ಕರ್ನಾಟಕಕ್ಕೆ ಬಂದಿದ್ದಾರೆ ಸಿಎಂ ಸ್ಥಾನಕ್ಕೆ ಗೌರವ ಕೊಡಬೇಕು ಎಂದು ಎಚ್ಚರಿಸಿದ್ದಾರೆ ಗೌರವಾನ್ವಿತ ಸಿಎಂ ಸ್ಥಾನಕ್ಕೆ ನಾವು ಅಗೌರವ ತೋರಿಲ್ಲ ಸರ್ಕಾರ ಗಾಳಿಯಲ್ಲಿ ಗೋಪುರ ಕಟ್ಟುವ ಕೆಲಸ ಮಾಡುತ್ತಿದೆ ಇದು ಜಾಹೀರಾತಿನ ಸರ್ಕಾರ ಎಂದು ಗುಡುಗಿದರು.
ಗೃಹಲಕ್ಷ್ಮೀ ಯೋಜನೆ 5ಸಾವಿರ ಕೋಟಿ ಹಗರಣದ ಬಗ್ಗೆ ಸಿಎಂ ಮತ್ತು ಸಚಿವರಿಂದ ಸ್ಪಷ್ಟೀಕರಣ ಬಂದಿಲ್ಲ. ಇಷ್ಟು ದೊಡ್ಡ ಅವ್ಯವಹಾರ ಆಗಿದ್ದರೂ ಕತ್ತೆ ಕಾಯುತ್ತಿದ್ದೀರಾ? ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರು ಕತ್ತೆ ಕಾಯುತ್ತಿದ್ದಾರಾ? ಎಂದು ವಿಜಯೇಂದ್ರ ಹರಿಹಾಯ್ದರು.
Key words: padayatre, turned, mass movement, BJP, BY Vijayendra
The post ಪಾದಯಾತ್ರೆ ಜನಾಂದೋಲನವಾಗಿ ಪರಿವರ್ತನೆ: ಸಿಎಂ ಹತಾಶರಾಗಿದ್ದಾರೆ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




