29
September, 2026

A News 365Times Venture

29
Tuesday
September, 2026

A News 365Times Venture

‘ಪ್ರಗತಿ 50’ ಯೋಜನೆಗೆ ಬೆಂಗಳೂರು, ಮೈಸೂರು ಆಯ್ಕೆ ಹೆಮ್ಮೆಯ ವಿಷಯ-ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

Date:

ಬೆಂಗಳೂರು, ಸೆಪ್ಟೆಂಬರ್, 29,2026 (www.justkannada.in): ದೇಶದ ಆಯ್ದ 50 ನಗರಗಳನ್ನು ಮಾದರಿ ಸ್ವಚ್ಛ ನಗರಗಳಾಗಿ ರೂಪಿಸುವ ‘ಪ್ರಗತಿ 50’ (PRAGATI 50) ಉಪಕ್ರಮಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಈ ಮಹತ್ವದ ಯೋಜನೆಗೆ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ನಗರಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ವಚ್ಛ ಭಾರತ ಮಿಷನ್–ನಗರ 2.0ರ ಹೊಸ ಕಾರ್ಯಕ್ರಮಗಳನ್ನು ಬಲಪಡಿಸುವ ಕುರಿತು ನಡೆದ ವೀಡಿಯೊ ಸಂವಾದ ಸಭೆಯಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ‘ಪ್ರಗತಿ 50’ ಉಪಕ್ರಮಕ್ಕೆ ಚಾಲನೆ ನೀಡಿರುವುದನ್ನು ಸ್ವಾಗತಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ರಾಜ್ಯದ ಬೆಂಗಳೂರು ಮತ್ತು ಮೈಸೂರು ನಗರಗಳು ಯೋಜನೆಗೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ರಾಜ್ಯದ ನಗರಾಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳು ಹಾಗೂ ಪ್ರಮುಖ ಬೇಡಿಕೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಿದರು.

ಮಾದರಿ ನಗರಗಳ ಅಭಿವೃದ್ಧಿ ಸೇರಿದಂತೆ ವಿವಿಧ ಪ್ರಮುಖ ನಗರಾಭಿವೃದ್ಧಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಅನುದಾನದ ಪಾಲು ಅತ್ಯಂತ ಅಗತ್ಯವಾಗಿದ್ದು, ಬಾಕಿ ಇರುವ ಕೇಂದ್ರದ ಪಾಲಿನ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಭೆಯಲ್ಲಿ ಮನವಿ ಮಾಡಿದರು.

ರಾಜ್ಯದ ನಗರಾಭಿವೃದ್ಧಿ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಸೇರಿದಂತೆ ಇತರ ಅಭಿವೃದ್ಧಿ ವಿಷಯಗಳ ಕುರಿತು ಪ್ರತ್ಯೇಕವಾಗಿ ಚರ್ಚಿಸಲು ಕೇಂದ್ರ ಸಚಿವರೊಂದಿಗೆ ಭೇಟಿಗೆ ಸಮಯ ಕೋರಲಾಗಿದ್ದು, ಶೀಘ್ರದಲ್ಲೇ ಭೇಟಿಗೆ ಸಮಯ ನಿಗದಿಪಡಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು.

ಉನ್ನತ ಮಟ್ಟದ ವೀಡಿಯೊ ಸಂವಾದ ಸಭೆಯಲ್ಲಿ ವಿವಿಧ ರಾಜ್ಯಗಳ ನಗರಾಭಿವೃದ್ಧಿ ಸಚಿವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಸತ್ಯೇಂದ್ರ ಸಿಂಗ್ ಹಾಗೂ ಸ್ವಚ್ಛ ಭಾರತ ಮಿಷನ್ ರಾಷ್ಟ್ರೀಯ ನಿರ್ದೇಶಕರಾದ ಡಾ. ಶಾಲಿನಿ ಪಾಂಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉಪ್ಪು ಸೇವನೆ ಕುರಿತು ಮಾರ್ಗಸೂಚಿ: ನಿಯಮ ಪಾಲಿಸಲು ಸಚಿವ ಯು.ಟಿ ಖಾದರ್ ಮನವಿ

ಬೆಂಗಳೂರು, ಸೆಪ್ಟಂಬರ್, 29,2026 (www.justkannada.in): ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ...

ಅ.5ರೊಳಗೆ ಯುಜಿ ಕೇಬಲ್ ಕಾಮಗಾರಿ ಪೂರ್ಣಗೊಳಿಸಿ- ರಮೇಶ್ ಬಂಡಿಸಿದ್ದೇಗೌಡ ಕಟ್ಟುನಿಟ್ಟಿನ ಸೂಚನೆ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್ ಕೇಬಲ್...

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ...

ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

ಮೈಸೂರು, ಸೆಪ್ಟಂಬರ್,29, 2026 (www.justkannada.in): ದಸರಾ ವಸ್ತುಪ್ರದರ್ಶನದ ಆವರಣದಲ್ಲಿದ್ದ ವರನಟ ಡಾ.ರಾಜ್‌...