ಬೆಂಗಳೂರು,ಜುಲೈ,21,2026 (www.justkannada.in): ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ನಿರ್ವಹಣೆ ಮಾಡಲು ಸರ್ಕಾರದ ಬಳಿ ಹಣವಿದೆ. ಆದರೆ ಬಿಜೆಪಿ ಹಣವಿಲ್ಲ ಎಂದು ರಾಜಕೀಯಕ್ಕಾಗಿ ಆರೋಪ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಬರ ಪರಿಸ್ಥಿತಿ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇವೆ. ಎಲ್ಲಾ ತಾಲ್ಲೂಕುಗಳಿಂದಲೂ ಬರ ಕುರಿತು ವರದಿ ಕೇಳಿದ್ದೇವೆ ಬರಗಾಲದ ಕುರಿತು ವರದಿ ಬಂದ ಮೇಲೆ ಚಿತ್ರಣ ಸಿಗಲಿದೆ ಎಂದರು.
ರಾಜ್ಯ ಸರ್ಕಾರದ ಬಳಿ ಹಣ ಇದೆ. ಆದರೆ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿ ಸುಳ್ಳ ಹೇಳುತ್ತಿದೆ ಕುಡಿಯುವ ನೀರಿಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 329 ಕೋಟಿ ರೂ. ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಇದೆ. ಬರ ಪರಿಹಾರ ಕೆಲಸಗಳಿಗೆ ಪ್ರತಿ ತಾಲ್ಲೂಕಿಗೂ 1 ಕೋಟಿ ರೂ ಘೋಷಣೆ ಮಾಡಿದ್ದೇವೆ. ಇದೆಲ್ಲವನ್ನೂ ಸರ್ಕಾರದ ಬಳಿ ಹಣ ಇಲ್ಲದೇ ಮಾಡೋಕೆ ಆಗುತ್ತಾ? ರಾಜಕೀಯ ಕಾರಣಕ್ಕೆ ಬಿಜೆಪಿ ಆರೋಪ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
Key words: money, drought, BJP, politics, DCM, Parameshwar
The post ಬರ ನಿರ್ವಹಣೆಗೆ ಹಣವಿದೆ: ರಾಜಕೀಯಕ್ಕಾಗಿ ಬಿಜೆಪಿ ಆರೋಪ- ಡಿಸಿಎಂ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




