2
May, 2026

A News 365Times Venture

2
Saturday
May, 2026

A News 365Times Venture

ಬಿಎಸ್ ವೈ ಅಭಿಮಾನೋತ್ಸವದಿಂದ  ರಾಜಕೀಯ ಲಾಭದಾಸೆ ನನಗೆ ಇಲ್ಲ- ಬಿವೈ ವಿಜಯೇಂದ್ರ

Date:

ಮೈಸೂರು,ಮೇ,2,2026 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜಕಾರಣಕ್ಕೆ ಕಾಲಿಟ್ಟು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಚಿತ್ರದುರ್ಗದಲ್ಲಿ ಮೇ 9ರಂದು ‘ಬಿಎಸ್‌ವೈ ಅಭಿಮಾನೋತ್ಸವ’ ಹಮ್ಮಿಕೊಳ್ಳಲಾಗಿದೆ.

ಈ ಸಂಬಂಧ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಎಸ್ ವೈ ಅಭಿಮಾನೋತ್ಸವದಿಂದ ರಾಜಕೀಯ ಲಾಭ ಪಡೆಯುವ ಆಸೆ ನನಗೂ ಇಲ್ಲ, ಪಕ್ಷಕ್ಕೂ ಇಲ್ಲ’ ಎಂದು ಹೇಳಿದ್ದಾರೆ.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾದ ಬಿವೈ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೆಲವರು ಅದೃಷ್ಟದಿಂದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರಲ್ಲ. ಸತತ ಹೋರಾಟದಿಂದ ಆ ಸ್ಥಾನ ಗಳಿಸಿದವರು. 50 ವರ್ಷಗಳ ರಾಜಕಾರಣದಲ್ಲಿ 45 ವರ್ಷ ಹೋರಾಟವನ್ನೇ ಮಾಡಿದ್ದಾರೆ. ಇದನ್ನು ಸ್ಮರಿಸುವ ಕಾರಣದಿಂದ ನಾವು ಸಮಾವೇಶ ನಡೆಸುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ರಾಜಕಾರಣಿಗಳು ರಾಜ್ಯದ ಬಹುತೇಕ ಮಠಾಧೀಶರೂ ಭಾಗವಹಿಸುತ್ತಾರೆ‌. ಸಮಾವೇಶದ ಸಂದೇಶ ಏನೆಂಬುದು ಅದು ಮುಗಿದ ಬಳಿಕ ಗೊತ್ತಾಗಲಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words: BSY Abhimanotsav, Mysore, suttur math, BY Vijayendra

The post ಬಿಎಸ್ ವೈ ಅಭಿಮಾನೋತ್ಸವದಿಂದ  ರಾಜಕೀಯ ಲಾಭದಾಸೆ ನನಗೆ ಇಲ್ಲ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮುಖ್ಯಪೇದೆ ಹಲ್ಲೆ, ಕಣ್ಣಿನ ದೃಷ್ಠಿ ಕಳೆದುಕೊಂಡ ವ್ಯಕ್ತಿ: ಇನ್ನೂ ಪ್ರಕರಣ ದಾಖಲಿಸದ ಪೊಲೀಸರು

ಮೈಸೂರು.ಮೇ,2,2026 (www.justkannada.in):  ಮದ್ಯ ತರಲು ಬಾರ್ ಗೆ ಹೋದ ವೇಳೆ ಮಫ್ತಿಯಲ್ಲಿದ್ದ...

50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸರ್ವೇ ಸೂಪರ್ ವೈಸರ್

ದಾವಣಗೆರೆ,ಮೇ,2,2026 (www.justkannada.in):  50 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೇ ಸುರ್ವೈಸರ್...

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ದುರಂತ: ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು,ಮೇ,2,2026 (www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಗೆ  ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್...

ವಾರಕ್ಕೆ 75 ಗಂಟೆ ಕೆಲಸ ಮಾಡಿ ಅಂದ್ರೆ ನಾವೇನ್ ಪ್ರಾಣಿಗಳಾ..? MLC ಬಿ.ಕೆ ಹರಿಪ್ರಸಾದ್ ಆಕ್ರೋಶ

ಬೆಂಗಳೂರು,ಮೇ,1,2026 (www.justkannada.in): ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ...