1
September, 2026

A News 365Times Venture

1
Tuesday
September, 2026

A News 365Times Venture

ಬಿಜೆಪಿಯವರು ಪಾದಯಾತ್ರೆ ಮಾಡೋದು ಒಳ್ಳೆಯದೇ- ಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಸೆಪ್ಟಂಬರ್,1,2026 (www.justkannada.in): ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು (BJP Bellary Chalo) ಖಂಡಿಸಿ ಇಂದಿನಿಂದ 10 ದಿನಗಳ ಕಾಲʼಬಿಜೆಪಿ ಬಳ್ಳಾರಿ ಚಲೋʼ ಪಾದಯಾತ್ರೆಗೆ ಹಮ್ಮಿಕೊಂಡಿದ್ದು ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್,  ಬಿಜೆಪಿಯವರು ನಮಗೆ ಒಳ್ಳೆಯ ಅವಕಾಶ ಕೊಡುತ್ತಿದ್ದಾರೆ. ಬಿಜೆಪಿಯವರು ಪಾದಯಾತ್ರೆ ಮಾಡೋದು ಒಳ್ಳೆಯದೇ.  ಪ್ರತಿತಂತ್ರಕ್ಕೆ ನಮ್ಮ  ಪಕ್ಷ ನಾವೇನು ಕಡಿಮೆ ಇಲ್ಲ. ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟವರು ನಾವು. ಸ್ವಾತಂತ್ರ್ಯ ಹೋರಾಟದಲ್ಲಿ ಇವರ್ಯಾರು ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕು ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಈಗಾಗಲೇ 102 ತಾಲ್ಲೂಕು ಬರ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ ಅನೇಕ ತಾಲ್ಲೂಕುಗಳ ಸಮೀಕ್ಷೆ ನಡೆಯುತ್ತಿದೆ.   ವಾರ ಹಾಗೂ 15 ದಿನಕ್ಕೆ ವರದಿ ತರಿಸಿಕೊಂಡು ಘೋಷಿಸಬೇಕಿದೆ ಟೆಕ್ನಿಕಲ್ ಆಗಿ ಏನು ಆಗಬೇಕು ಎಂದು ಪರಿಶೀಲನೆ ಮಾಡುತ್ತೇವೆ. ಧಾರವಾಡ , ಗದಗದಲ್ಲಿ ಮಾಹಿತಿ ಕೊರತೆ ಬಗ್ಗೆ ತಿಳಿಸುತ್ತಾ ಇದ್ದರು.  ಅದಕ್ಕಾಗಿ ಬಾಗಲಕೋಟೆಗೂ ಹೋಗುತಿದ್ದೇನೆ ಬರಗಾಲ ಇರುವ ತಾಲ್ಲೂಕು ಜಿಲ್ಲೆಗಳಲ್ಲಿ ಪರಿಶೀಲನೆ ಮಾಡುತ್ತೇನೆ. ಈಗ ನಮ್ಮ ಕನಕಪುರವ್ನೇ ಬರ ಎಂದು ಘೋಷಣೆ ಮಾಡಿಲ್ಲ.  ತಲೆಕೆಡಿಸಿಕೊಳ್ಳಲು ಆಗುತ್ತಾ ಅದಕ್ಕೆ ಒಂದು ನಿಯಮ ಇದೆ ಕೇಂದ್ರ ಸರ್ಕಾರದ ನಿಯಮ ಇದೆ ಅದರ ಪ್ರಕಾರವೇ ಆಗುತ್ತೆ ಸ್ವಲ್ಪ ತಾಳ್ಮೆಯಿಂದ ಇರಬೇಕು ಎಂದು ತಿಳಿಸಿದರು.

Key words:  BJP, Padayatre, CM,  DK Shivakumar

The post ಬಿಜೆಪಿಯವರು ಪಾದಯಾತ್ರೆ ಮಾಡೋದು ಒಳ್ಳೆಯದೇ- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್: ಬಿ.ಸಿ ಪಾಟೀಲ್ ಆಕ್ಷೇಪ

ಬೆಂಗಳೂರು,ಸೆಪ್ಟಂಬರ್,1,2026 (www.justkannada.in):  ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್ ನೀಡಿದ್ದಕ್ಕೆ...

ಮಾಫಿ ಸಾಕ್ಷಿಗೆ ಸಮ್ಮತಿ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್

ಬೆಂಗಳೂರು,ಸೆಪ್ಟಂಬರ್,1,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ14 ಪ್ರದೋಷ್ ಮಾಫಿ...

ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’- ಸಚಿವ ರಾಯರೆಡ್ಡಿ ಹೇಳಿಕೆಗೆ ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು,ಆಗಸ್ಟ್,31,2026 (www.justkannada.in):  ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿಕೆ ನೀಡಿರುವ ಉನ್ನತ...

ರೈಲು ಡಿಕ್ಕಿಯಾಗಿ  ವೃದ್ಧೆ, ಮೊಮ್ಮಕ್ಕಳು ದುರ್ಮರಣ

ಬೆಂಗಳೂರು ಗ್ರಾಮಾಂತರ,ಆಗಸ್ಟ್,31,2026 (www.justkannada.in):  ರೈಲು ಡಿಕ್ಕಿಯಾಗಿ ವೃದ್ಧೆ ಮೊಮ್ಮಕ್ಕಳು ಸಾವನ್ನಲ್ಲಿರುವ ಘಟನೆ...