25
June, 2026

A News 365Times Venture

25
Thursday
June, 2026

A News 365Times Venture

ಬಿಜೆಪಿ ಆಂತರಿಕ ಕಲಹದಿಂದ ಅಡ್ಡ ಮತದಾನ: ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ- ಗುಡುಗಿದ ಎಸ್.ಟಿ ಸೋಮಶೇಖರ್

Date:

ಬೆಂಗಳೂರು,ಜೂನ್,25,2026 (www.justkannada.in):  ಬಿಜೆಪಿ ಆಂತರಿಕ ಕಲಹದಿಂದ ಅಡ್ಡ ಮತದಾನವಾಗಿದೆ. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯೇ ಕಾರಣ ಎಂದು ಶಾಸಕ ಎಸ್.ಟಿ ಸೋಮಶೇಖರ್ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್, ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ. ವಿಜಯೇಂದ್ರ ಕಡೆಯವರನ್ನ ಅಶೋಕ್ ಸೋಲಿಸಬೇಕು ಅಶೋಕ್ ಕಡೆಯವರನ್ನ ವಿಜಯೇಂದ್ರ ಸೋಲಿಸಬೇಕು ಅಂತಾ ಅಡ್ಡ ಮತದಾನ ಮಾಡಿಸಿರಬೇಕು.  ಅವರಿಬ್ಬರು ಮೊದಲು ಧರ್ಮಸ್ಥಳದಲ್ಲಿ ಆಣೆ ಮಾಡಲಿ ಬೇರೆ ಯಾರೂ ಪ್ರಮಾಣ ಮಾಡೋದು ಬೇಕಿಲ್ಲ. ಅವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದರು.

ಬಿಜೆಪಿಗೆ ಸೋಮಶೇಖರ್, ಹೆಬ್ಬಾರ್ ರಾಜೀನಾಮೆ ನೀಡಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಅವರಿಗೆ ತಿರುಗೇಟು ನೀಡಿದ ಎಸ್.ಟಿ ಸೋಮಶೇಖರ್, ಇಷ್ಟೆಲ್ಲಾ ಅವಾಂತರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಣ. ಶೋಭಾ ಕರಂದ್ಲಾಜೆ ಅವರಿಗೆ ಅಶೋಕ್ ಕಂಡರೆ ಆಗಲ್ಲ.  ವಿಜಯೇಂದ್ರ ಕಂಡರೂ ಆಗಲ್ಲ. ಬಿಜೆಪಿಯಲ್ಲಿ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ  ಶೋಭಾ ಕರಂದ್ಲಾಜೆ ಕಾರಣ. ಮೊದಲು ಈ ಕರಂದ್ಲಾಜೆಯನ್ನ ಧರ್ಮಸ್ಥಳದಲ್ಲಿ ಹೋಗಿ ನಿಲ್ಲಿಸಲಿ ಎಂದು ಹರಿಹಾಯ್ದರು.

ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ.  ನಾವು ಅವರಿಗೆ ಮತ ಹಾಕಿದ್ದೇವೆ. ನಾವು ಓಪನ್ ಆಗಿಯೇ ಮತ ಹಾಕಿದ್ದೇವೆ ಎಂದು ಹೇಳಿದ್ದೇವೆ.  ಬಿಜೆಪಿಯಲ್ಲಿ ಅಡ್ಡ ಮತದಾನ ಹಾಕಿದವರು ಯಾರು ಅಂತಾ ಪತ್ತೆ ಹಚ್ಚಲಿ. ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡುತ್ತೇವೆ  ಎಂದು ಟಾಂಗ್ ಕೊಟ್ಟರು.

Key words: BJP, internal strife, cross-voting, S.T. Somashekhar

The post ಬಿಜೆಪಿ ಆಂತರಿಕ ಕಲಹದಿಂದ ಅಡ್ಡ ಮತದಾನ: ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ- ಗುಡುಗಿದ ಎಸ್.ಟಿ ಸೋಮಶೇಖರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

NCERT 6ನೇ ಕ್ಲಾಸ್‌ ಕನ್ನಡ ಪುಸ್ತಕಕ್ಕೆ ಕೃಷ್ಣ ಹೆಸರು: ಕೇಂದ್ರದ ವಿರುದ್ದ ಮಧು ಬಂಗಾರಪ್ಪ ಆಕ್ರೋಶ

ಬೆಂಗಳೂರು,ಜೂನ್,25,2026 (www.justkannada.in): ಎನ್ ಸಿಇಆರ್ ಟಿಯ ಆರನೇ ತರಗತಿ ಕನ್ನಡ ಪುಸ್ತಕಕ್ಕೆ...

ಇಡಿ ದಾಳಿ ರಾಜಕೀಯ ಪ್ರೇರಿತ: ಮುಂದೆ ನಮ್ಮ ಮೇಲೂ ಆಗಬಹುದು-ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,24,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಬೆಳಗಾವಿ...

ಜೂ.28ರಿಂದ ಪಲ್ಸ್ ಪೋಲಿಯೋ ಅಭಿಯಾನ: ಪ್ರತಿ ಮಗುವಿಗೂ ಲಸಿಕೆ ಹಾಕಿಸಿ- ಡಿಸಿ ಲಕ್ಷ್ಮೀಕಾಂತ ರೆಡ್ಡಿ

ಮೈಸೂರು, ಜೂನ್, 24,2026 (www.justkannada.in): 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್...

BSNL ಮೈಸೂರು ವಲಯದಿಂದ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಸ್ವಯಂ ಉದ್ಯೋಗ ಅಭಿಯಾನ

​ಮೈಸೂರು,ಜೂನ್,24,2026 (www.justkannada.in): ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ...