17
May, 2026

A News 365Times Venture

17
Sunday
May, 2026

A News 365Times Venture

ಬಿಡದಿ ಟೌನ್ ಶಿಪ್ ನಿರ್ಮಾಣ: ರೈತರ ಜಮೀನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ- ಮಾಜಿ ಪ್ರಧಾನಿ ಹೆಚ್.ಡಿಡಿ ಗುಡುಗು

Date:

ಬೆಂಗಳೂರು,ಮೇ,16,2026 (www.justkannada.in): ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದು, ರೈತರ ಜಮೀನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಬಿಡದಿ ಬಳಿ ಹೋಗೋಣ ನಾನು ಬರುತ್ತೇನೆ. ಸಿಎಂ ಸಿದ್ದರಾಮಯ್ಯ ನೀವು ಬನ್ನಿ.ಇದುವರೆವಿಗೂ ಸ್ಥಳೀಯ ಶಾಸಕರು, ತಹಶೀಲ್ದಾರ್ ಜನರ ಸಮಸ್ಯೆಯನ್ನು ಕೇಳಿಲ್ಲ. ಸಿಎಂ ಸಿದ್ದರಾಮಯ್ಯ ನನ್ನ ಹಳೆಯ ಸ್ನೇಹಿತರು.  ಇದೊಂದು ದಂಧೆ.  ರೈತರ ಜಮೀನನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಪಡಿಸಿಕೊಂಡಿದ್ದಾರೆಂಬ ಮಾಹಿತಿ ಇದೆ ಎಂದು  ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸ್ಥಳಕ್ಕೆ ಹೋಗುತ್ತೇನೆ.  ರೈತರು ಹೊಡೆದರೂ ಹೊಡೆಸಿಕೊಳ್ಳುತ್ತೇನೆಂಬ ಡಿಕೆ ಶಿವ ಕುಮಾರ್ ಹೇಳಿಕೆಗೆ ಕೌಂಟರ್ ಕೊಟ್ಟ ಹೆಚ್ ಡಿ ದೇವೇಗೌಡರು, ಅವರು ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ  ಅ ಮೇಲೆ ಮಾತನಾಡುತ್ತೇನೆ ಎಂದರು.

Key words:  Bidadi Township, farmers’ land, Former PM HD Devegowda

The post ಬಿಡದಿ ಟೌನ್ ಶಿಪ್ ನಿರ್ಮಾಣ: ರೈತರ ಜಮೀನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ- ಮಾಜಿ ಪ್ರಧಾನಿ ಹೆಚ್.ಡಿಡಿ ಗುಡುಗು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಕ್ಕೆ  ಹೆಚ್ಚುವರಿ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ- ಸಚಿವ ಡಾ. ಶರಣಪ್ರಕಾಶ ಪಾಟೀಲ್‌

ಬೆಂಗಳೂರು, ಮೇ, 16,2026 (www.justkannada.in): ರಾಜ್ಯದಲ್ಲಿ ಮೆಡಿಕಲ್‌ ಸೀಟು ಲಭ್ಯತೆ ಹೆಚ್ಚಾಗಿದ್ದು,...

ಮುಂಗಾರು ಎದುರಿಸಲು ಸೆಸ್ಕ್ ಸನ್ನದ್ಧವಾಗಿರಲಿ- ಪ್ರಭಾರ ಎಂಡಿ ನಿತೇಶ್ ಪಾಟೀಲ್ ಸೂಚನೆ

ಮೈಸೂರು, ಮೇ, 16, 2026 (www.justkannada.in):  ಮುಂಗಾರು ಅವಧಿಯಲ್ಲಿ ಉಂಟಾಗಬಹುದಾದ ವಿದ್ಯುತ್...

ನೀಟ್ ಪರೀಕ್ಷೆ ರದ್ದತಿಗೆ ವಿಶೇಷ  ಅಧಿವೇಶನಕ್ಕೆ KPCC ವಕ್ತಾರ ಎಚ್ಎ ವೆಂಕಟೇಶ್ ಒತ್ತಾಯ

ಮೈಸೂರು,ಮೇ,16,2026 (www.justkannada.in): ವೃತ್ತಿಪರ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಾಗಿರುವ ನೀಟ್ ಈಗ...

ನುಡಿದಂತೆ ನಡೆದಿರುವುದಕ್ಕೆ ಸಾಧನಾ ಸಮಾವೇಶ- ಸಚಿವ ಡಾ. ಶರಣಪ್ರಕಾಶ ಪಾಟೀಲ್‌

ಬೆಂಗಳೂರು, ಮೇ, 16,2026 (www.justkannada.in):  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೂರು...