19
July, 2026

A News 365Times Venture

19
Sunday
July, 2026

A News 365Times Venture

ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ

Date:

ಬೆಂಗಳೂರು,ಜುಲೈ,18,2026 (www.justkannada.in): ಬಿಡದಿ ಟೌನ್‌ ಶಿಪ್‌  ಯೋಜನೆ ವಿರೋಧಿಸಿ  ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಪ್ರತ್ಯೇಕ ಪಾದಯಾತ್ರೆಗೆ ಮುಂದಾಗಿವೆ.

ಬಿಡದಿ ಟೌನ್‌ಶಿಪ್ ಯೋಜನೆಯ ವಿರುದ್ಧ ನಿನ್ನೆ ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿತ್ತು. ಈ ಬೆನ್ನಲ್ಲೆ ಇದೀಗ ಜೆಡಿಎಸ್ ಮೂರು ದಿನಗಳ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ. ಬಿಡದಿಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಈ ಪಾದಯಾತ್ರೆ ನಡೆಯಲಿದೆ. ಜುಲೈ 30, 31 ಮತ್ತು ಆಗಸ್ಟ್ 1 ರಂದು  ಪಾದಯಾತ್ರೆ ನಡೆಯಲಿದೆ ಎಂದು ಘೋಷಣೆ ಮಾಡಿದೆ.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣ ರೆಡ್ಡಿ, ಸುದ್ದಿಗೋಷ್ಠಿ ನಡೆಸಿ ಈ ಪಾದಯಾತ್ರೆ ಬಗ್ಗೆ ಘೋಷಣೆ ಮಾಡಿದ್ದಾರೆ. ಪಾದಯಾತ್ರೆಗೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದು,  ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಯ ನೇತೃತ್ವ ವಹಿಸುತ್ತಾರೆ ಎಂದಿದ್ದಾರೆ.

‘ಬಿಡದಿ ಟೌನ್‌ಶಿಪ್ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತೇವೆ. ಸರ್ಕಾರ ಉನ್ನತ ಮಟ್ಟದ ಕಮಿಟಿ ರಚಿಸುವುದಾಗಿ ಹೇಳಿತ್ತು. ಅದರೆ  ಫೈನಲ್ ನೋಟಿಫಿಕೇಷನ್ ಹೊರಡಿಸಿದೆ. ಇದಕ್ಕೆ ವಿರೋಧಿಸಿ ಪಾದಯಾತ್ರೆಗೆ ಮುಂದಾಗಿದ್ದೇವೆ ಎಂದರು.

Key words: JDS, Padayatre, July 30, against, Bidadi Township

The post ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣವಾದ್ರೆ ಸಂತೋಷ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಜುಲೈ,18,2026 (www.justkannada.in): ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಿ ಎಂದು ಬಿಜೆಪಿ...

ಆಂಧ್ರದಲ್ಲಿ ಕೋವಿಡ್:  ಹೈ ಅಲರ್ಟ್ ಘೋಷಣೆ.

ಆಂಧ್ರಪ್ರದೇಶ,ಜುಲೈ,18,2026 (www.justkannada.in): ಕೊನೆಯ ಕೋವಿಡ್ ಅಲೆಯ ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ...

ಬಿಡದಿ ಟೌನ್ ಶಿಪ್ ವಿರುದ್ದ ಬಿಜೆಪಿಯವರದ್ದು ಪ್ರಾಯಶ್ಚಿತ ಯಾತ್ರೆ: ಶಾಸಕ ಹೆಚ್. ಸಿ ಬಾಲಕೃಷ್ಣ

ಬೆಂಗಳೂರು, ಜುಲೈ,18,2026 (www.justkannada.in):  ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಬಿಜೆಪಿ...

ಬೆಳಗಾವಿಗೆ ಇನ್ನೊಂದು ಮಂತ್ರಿ ಸ್ಥಾನ ಕೇಳಿದ್ದೇವೆ; ಎರಡು ಸ್ಥಾನ ಕೊಟ್ರೆ OK- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜುಲೈ,18,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿಗೆ ಇನ್ನೊಂದು ಸ್ಥಾನ...