ನವದೆಹಲಿ,ಆಗಸ್ಟ್,27,2026 (www.justkannada.in): ಸಚಿವ ಬಿ. ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಸಚಿವ ಬಿ.ನಾಗೇಂದ್ರ ರಾಜೀನಾಮೆ ಬಗ್ಗೆ ಚರ್ಚೆ ವಿಚಾರವಾಗಿ ನವದೆಹಲಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಸಚಿವ ನಾಗೇಂದ್ರ ಪಕ್ಷದ ನಿಷ್ಟಾವಂತ ನಾಯಕ. ಅವರು ಪಕ್ಷಕ್ಕೆ ಆಸ್ತಿ. ನಾಗೇಂದ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹೈಕಮಾಂಡ್ ನಾಯಕರ ಮುಂದೆ ವಾಸ್ತವಾಂಶ ಹೇಳಿದ್ದೇನೆ. ಹೈಕಮಾಂಡ್ ನಾಯಕರು ನಿರ್ಧಾರ ತೆಗದುಕೊಳ್ಳಲಿದ್ದಾರೆ ವಿಪಕ್ಷಗಳ ಒತ್ತಡಕ್ಕೆ ಮಣಿಯುವ ಸಮಯ ಬಂದಿಲ್ಲ. ಕೇಂದ್ರ ಸಚಿವರ ಮೇಲೆ ಕೇಸ್ ಇಲ್ವಾ? ಎಂದು ಪ್ರಶ್ನಿಸಿದರು.
ಸಚಿವ ನಾಗೇಂದ್ರ ವಿರುದ್ದ ಯಾವುದೇ ಸಾಕ್ಷ್ಯಗಳಿಲ್ಲ. ಹೆಚ್ಚು ಎಸ್ ಟಿ ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಹೆಚ್ಚು ಎಸ್ ಟಿ ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಹೀಗೆ ಮಾಡುತ್ತಿದೆ. ಪಾದಯಾತ್ರೆ ಮಾಡುವವರನ್ನ ತಡೆಯಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಬಿಜೆಪಿಗರು ಮಾತನಾಡಲು ತಯಾರಿರಲಿಲ್ಲ ಸುಮ್ಮನೇ ಮಾತನಾಡುತ್ತಾರೆ. ಚರ್ಚೆಗೆ ಬಿಜೆಪಿ ಸಿದ್ದ ಇಲ್ಲ. ಬಿಜೆಪಿಯವರ ವಿರುದ್ದ ಹಲವು ಹಗರಣವಿತ್ತು. ಹೀಗಾಗಿ ಭಯದಲ್ಲಿ ಸದನದಲ್ಲಿ ಚರ್ಚಿಸಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.
Key words: B. Nagandra, ready , sacrifice, party, CM DK Shivakumar
The post ಬಿ.ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ- ಸಿಎಂ ಡಿಕೆಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




