7
June, 2026

A News 365Times Venture

7
Sunday
June, 2026

A News 365Times Venture

ಬ್ರೇಕಿಂಗ್ ನ್ಯೂಸ್: ಆನೆ ತುಳಿತಕ್ಕೆ ಮತ್ತೊಂದು ಬಲಿ

Date:

ಕೊಡಗು,ಜೂನ್,5,2026 (www.justkannada.in): ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮತ್ತೊಂದು ಜೀವ ಬಲಿ ತೆಗೆದುಕೊಂಡಿದೆ. ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (51) ಅವರು ಕಾಡಾನೆ ದಾಳಿಯಲ್ಲಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ತಿತಿಮತಿ ಸಮೀಪದ ಕೋಣನಕಟ್ಟೆಯಲ್ಲಿರುವ ಕಾಫಿ ತೋಟವನ್ನು ವೀಕ್ಷಿಸಲು ಇಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆ ಸಂಧ್ಯಾ ಅವರು ತೆರಳಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಸಂಧ್ಯಾ ಅವರೊಂದಿಗೆ ಇದ್ದ ಇಬ್ಬರು ಕಾರ್ಮಿಕರು ಆನೆಯನ್ನು ಕಂಡ ತಕ್ಷಣ ಸ್ಥಳದಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸಂಧ್ಯಾ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಗೋಣಿಕೊಪ್ಪಲಿನ ಲೋಪಾಮುದ್ರಾ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಾದ ACF ಲಕ್ಷ್ಮಿಕಾಂತ್, RFO ದೇವರಾಜ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಹಾಜರಾಗಿದ್ದರು. ಕಾಡಾನೆ ದಾಳಿಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಘಟನೆಯ ಕುರಿತು ತಿತಿಮತಿ ಅರಣ್ಯ ವಲಯದ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ENGLISH SUMMARY…

BREAKING NEWS: Woman Killed in Wild Elephant Attack

A 51-year-old woman was killed in a wild elephant attack near Titimati in Karnataka’s Kodagu district on Friday.

The deceased has been identified as Sandhya (51), wife of Retired IGP Annalamada Sunil Achayya. The incident occurred at a coffee plantation in Konanakatte near Titimati, where she had gone for an inspection around 9 a.m.

According to reports, a wild elephant suddenly charged at the group. Two workers accompanying Sandhya managed to escape after spotting the elephant and ran to safety. However, Sandhya was attacked and sustained severe injuries.

She was immediately rushed to Lopamudra Hospital in Gonikoppal for treatment. Unfortunately, she succumbed to her injuries while being transported to the hospital.

Upon receiving information about the incident, Forest Department officials, including ACF Lakshmikanth and his team, rushed to the spot and initiated an investigation.

The incident has triggered concern among local residents, who have urged authorities to take immediate measures to control the increasing menace of wild elephants in the region.

#BreakingNews #Kodagu #ElephantAttack #WildElephant #Karnataka #Gonikoppal #Titimati #CoffeeEstate #ForestDepartment #SandhyaAchayya

Key words: Kodagu, Woman, Death, Wild Elephant, Attack

The post ಬ್ರೇಕಿಂಗ್ ನ್ಯೂಸ್: ಆನೆ ತುಳಿತಕ್ಕೆ ಮತ್ತೊಂದು ಬಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನನ್ನ ತೀರ್ಮಾನದಲ್ಲಿ ಬದಲಾವಣೆ ಇಲ್ಲ: ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತಿದ್ದೇನೆ- ರಾಮಲಿಂಗರೆಡ್ಡಿ

ಬೆಂಗಳೂರು,ಜೂನ್,6,2026 (www.justkannada.in): ರಾಜೀನಾಮೆ ವಾಪಸ್ ತೆಗೆದುಕೊಳ್ಳುವಂತೆ ಸಿಎಂ ಡಿಕೆ ಶಿವಕುಮಾರ್ ,...

ಕಂದಾಯ ಇಲಾಖೆಯಲ್ಲಿ ಕೃಷ್ಣೇಬೈರೇಗೌಡ ಒಳ್ಳೇ ಕೆಲಸ ಮಾಡಿ ಬದಲಾವಣೆ ತಂದಿದ್ದಾರೆ- ಸಚಿವ ಪರಮೇಶ್ವರ್

ಬೆಂಗಳೂರು,ಜೂನ್,6,2026 (www.justkannada.in): ಕಂದಾಯ ಇಲಾಖೆಯಲ್ಲಿ ಕೃಷ್ಣೇಬೈರೇಗೌಡರು ಒಳ್ಳೇ ಕೆಲಸ ಮಾಡಿ ಬದಲಾವಣೆ...

ರಾಜೀನಾಮೆ ವಾಪಸ್ ಪಡೆಯಲು ರಾಮಲಿಂಗರೆಡ್ಡಿ ಒಪ್ಪಿದ್ದಾರೆ- ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಜೂನ್,6,2026 (www.justkannada.in):  ರಾಮಲಿಂಗರೆಡ್ಡಿ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್...

ಕೊಡಗಿನಲ್ಲಿ ಬಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ

ಕೊಡಗು,ಜೂನ್,6,2026 (www.justkannada.in): ಕೊಡಗಿನಲ್ಲಿ ಮುಂಗಾರು ಮಳೆ ಆರಂಭ ಹಿನ್ನೆಲೆಯಲ್ಲಿ ಬಾರೀ ವಾಹನಗಳ...