ಬೆಂಗಳೂರು,ಜುಲೈ,30,2026 (www.justkannada.in): ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) 15 ದಿನಗಳವರೆಗೆ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿದ ಬೆನ್ನಲ್ಲೆ ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದೆ. ಈ ನಡುವೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತುರ್ತು ಸಭೆಯನ್ನು ಕರೆದಿದೆ.
ಇಂದು ಮಧ್ಯಾಹ್ನ2.30ಕ್ಕೆ ಸಿಡಬ್ಲ್ಯುಎಂಎ ಸಭೆ ನಡೆಯಲಿದ್ದು,ಸಭೆಯಲ್ಲಿ ಸಿಡಬ್ಲ್ಯುಆರ್ ಸಿ ಆದೇಶ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನಕ್ಕೆ ವ್ಯತಿರಿಕ್ತವಾದ ಸೂಚನೆ ಬರುತ್ತಾ? ಅಥವಾ ಸಿಡಬ್ಯುಆರ್ಸಿ ನಿರ್ದೇಶನವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂಗೀಕರಿಸುತ್ತಾ? ಎಂದು ಕಾದು ನೋಡಬೇಕಿದೆ.
ಒಂದು ವೇಳೆ ಸಿಡಬ್ಲ್ಯುಎಂಎ ಸಭೆಯಲ್ಲಿ ಆದೇಶ ವ್ಯತಿರಿಕ್ತವಾದರೇ ರಾಜ್ಯದಲ್ಲಿ ಬೃಹತ್ ಹೋರಾಟ ನಡೆಯಲಿದೆ. ಮಂಡ್ಯ ಶ್ರೀರಂಗಪಟ್ಟಣದಲ್ಲಿ ಪ್ರತ್ಯೇಕ ಸಭೆಗೆ ರೈತಮುಖಂಡರು ಮುಂದಾಗಿದ್ದಾರೆ.
Key words: CWMA, meeting, today: good news, state
The post ಭುಗಿಲೆದ್ದ ಕಾವೇರಿ ಕಿಚ್ಚು: ಇಂದು CWMA ಸಭೆ :ರಾಜ್ಯಕ್ಕೆ ಸಿಗುತ್ತಾ ಗುಡ್ ನ್ಯೂಸ್? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




