3
October, 2026

A News 365Times Venture

3
Saturday
October, 2026

A News 365Times Venture

ಮತದಾರರ ಪಟ್ಟಿ ಮರು ಪರಿಶೀಲನೆಗೆ ಸೂಚನೆ; ಇದು ದೇಶದ ಮತದಾರರ ಹಕ್ಕಿಗೆ ಸಂದ ಜಯ: ಸಿಎಂ ಡಿಕೆಶಿ

Date:

ಬೆಂಗಳೂರು, ಅಕ್ಟೋಬರ್,2,2026 (www.justkannada.in): ವಿಶೇಷ ಅಭಿಯಾನದ ಮೂಲಕ ಎಸ್‌ ಐಆರ್‌ ನಂತರದ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ASDD) ಮತ್ತಿತರ  ಮತದಾರರ ಪಟ್ಟಿ ಮರುಪರಿಶೀಲನೆ ಹಾಗೂ ಮತದಾರರ ಪಟ್ಟಿ ಮರುಪರಿಶೀಲಿಸಿ, ಹೆಸರು ಬಿಟ್ಟು ಹೋದ ಅರ್ಹ ಮತದಾರರ ಹೆಸರನ್ನು ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣೆ ಅಧಿಕಾರಿಗಳಿಗೆ ಆದೇಶ ಕೊಟ್ಟಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

ವಿಧಾನಸೌಧದ ಬಳಿ  ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾವು ನಿನ್ನೆ ರಾಜ್ಯ ಚುನಾವಣಾ ಆಯೋಗದ ಎದಿರು ಧರಣಿ ನಡೆಸಿದ ಪರಿಣಾಮವಾಗಿ ಕೇಂದ್ರ ಚುನಾವಣೆ ಆಯೋಗವು ರಾತ್ರೋ ರಾತ್ರಿ ಹೋರಡಿಸಿರುವ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಗೆಲುವು ಮಾತ್ರವಲ್ಲ. ಇದು ಕರ್ನಾಟಕದ ಮತ್ತು ಇಡೀ ದೇಶದ ಮತದಾರರ ಗೆಲುವು. ಅರ್ಹ ಮತದಾರರ ಹಕ್ಕು ಕಸಿಯುವ ಸಂಚಿನ ವಿರುದ್ಧದ ಗೆಲುವು. ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಹೋರಾಟ ಮಾಡುತ್ತಾ ಬಂದಿದೆ. ಅದು ಮುಂದೆಯೂ ಮುಂದುವರೆಯಲಿದೆ” ಎಂದು ಹೇಳಿದರು.

“ನಾವು ಚುನಾವಣಾ ಆಯೋಗದ ಬಳಿ ಗುರುವಾರ ನಡೆಸಿದ ಪ್ರತಿಭಟನೆ ಫಲವಾಗಿ ಕೇಂದ್ರ ಚುನಾವಣೆ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದೆ. ಸಾಮೂಹಿಕವಾಗಿ ಹೆಸರು ತೆಗೆದು ಹಾಕಿರುವ ದೂರುಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಆದೇಶ ನೀಡಿದೆ” ಎಂದು ತಿಳಿಸಿದರು.

“ಫಾರ್ಮ್ 7 ರ ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡಬಾರದು ಎಂದು ತಿಳಿಸಿದ್ದಾರೆ. ಮೊದಲ ಬಾರಿಗೆ ಮತದಾರರಾಗುವ ಯುವಕರ ಹೆಸರು ಸೇರ್ಪಡೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು. ಅದರಂತೆ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ. ಬಿಎಲ್ ಒ (BLO) ಏನು ಮಾಡಬೇಕು, ಫಾರ್ಮ್ 6 ಮತ್ತು ಫಾರ್ಮ್ 7 ಹೇಗೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ” ಎಂದು ವಿವರಿಸಿದರು.

“ಅರ್ಜಿಗಳ ಸಲ್ಲಿಕೆಗೆ ಅನುಕೂಲವಾಗುವಂತೆ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಬೇಕು. ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಜನರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಿದ್ದಾರೆ” ಎಂದು ಮಾಹಿತಿ ನೀಡಿದರು.

ಸಮಾಜದ ದುರ್ಬಲ ವರ್ಗಗಳ ವೋಟ್‌  ಡಿಲೀಟ್ ಗೆ ಬಿಜೆಪಿ ಅರ್ಜಿ ; ನಾಚಿಕೆಗೇಡಿನ ಸಂಗತಿ

“ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದು ಹಾಕಲು ಬಿಜೆಪಿಯವರು ಅರ್ಜಿ ನೀಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ನಮ್ಮ ನಡುವಿನ ಇತರೇ ಸಮುದಾಯಗಳು, ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆಸುವುದೇ ಅವರ ಉದ್ದೇಶ. ಇಂತಹವರು ರಾಜಕೀಯದಲ್ಲಿರಲು ನಾಲಾಯಕ್ ಗಳು” ಎಂದು ಕಿಡಿಕಾರಿದರು.

ಚುನಾವಣಾ ಆಯೋಗದ ಬಳಿ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ಪ್ರತಿಭಟನೆ ನಡೆಸಲು ನಾಚಿಕೆಯಾಗಬೇಕು. ಸುಮಾರು 25,000 ಅರ್ಜಿಗಳನ್ನು ನೀಡಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಅವರು ಮಾಡಿರುವ ಅಪರಾಧ ಮತ್ತು ಷಡ್ಯಂತ್ರಗಳನ್ನು ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಚುನಾವಣೆ ಆಯೋಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ದೂರು ದಾಖಲಿಸಬೇಕು. ಈ ದಾಖಲೆಯನ್ನು ಯಾರು ಹಂಚಿಕೊಂಡಿದ್ದಾರೋ ಅವರು ಅದನ್ನು ಈಗಾಗಲೇ ಒಪ್ಪಿಕೊಂಡಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದರು

ಬಿಜೆಪಿ ಜನರ ಹೃದಯ ಗೆದ್ದು, ಚುನಾವಣೆ ಎದುರಿಸಬಹುದಿತ್ತು

ಬಿಜೆಪಿಯವರು ಜನರ ಹೃದಯ ಗೆದ್ದು ಚುನಾವಣೆ ಎದುರಿಸಬಹುದಿತ್ತು. ಮಹಾತ್ಮ ಗಾಂಧೀಜಿಯವರು ಒಮ್ಮೆ ಹೇಳಿದ್ದರು, ‘ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕಾದರೆ ಮೆದುಳನ್ನು ಬಳಸಿ, ಇತರರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಬಳಸಿ’ ಎಂದು. ಅವರು ಈ ದೇಶದ ಜನರ ಹೃದಯವನ್ನು ಗೆದ್ದು ಚುನಾವಣೆ ಎದುರಿಸಬಹುದಿತ್ತು. ಅದರ ಬದಲಾಗಿ, ಮತಗಳನ್ನು ತೆಗೆದು ಹಾಕುವ ಕ್ರಿಮಿನಲ್ ಕೆಲಸಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.

ಗುರುವಾರ ರಾತ್ರಿ 11 ಗಂಟೆಗೆ, ಚುನಾವಣೆ ಆಯೋಗ ನಮ್ಮ ಹೋರಾಟದ ಹಿಂದಿನ ವಿಚಾರಗಳ ಗಂಭೀರತೆ ಅರಿತುಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ಸಂವಿಧಾನಾತ್ಮಕ ಸಂಸ್ಥೆ. ನಮ್ಮ ವಿನಂತಿ, ಬೇಡಿಕೆ ಹಾಗೂ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಮನವರಿಕೆ ಮಾಡಿಕೊಟ್ಟ ನಂತರ, ಚುನಾವಣಾ ಆಯೋಗವು ಈ ನಿರ್ದೇಶನ ನೀಡಿದೆ. ಜೊತೆಗೆ ಪ್ರತಿಯೊಂದು ಪ್ರಕರಣಗಳನ್ನು ಆಳವಾಗಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ. ಇದು ಸ್ವಾಗತಾರ್ಹ. ಬಿಜೆಪಿಯವರು ಇದನ್ನು ಮೊದಲು ಅರಿತುಕೊಳ್ಳಬೇಕು” ಎಂದರು.

ನನಗೆ ಈ ಅಕ್ರಮದ ಬಗ್ಗೆ ತಿಳಿದಾಗ ಕಾಂಗ್ರೆಸ್ ಕಾರ್ಯಕರ್ತರ ಹೊರತಾಗಿ, ಒಂದು ವಿಶೇಷ ತಂಡವನ್ನು ನೇಮಿಸಿದೆ. ‘ಸಿಟಿಜನ್ಸ್ ಫೋರಂ’ ಮತ್ತು ಹೋರಾಟಗಾರರು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ದತ್ತಾಂಶ ಸಂಗ್ರಹಿಸಿ ವರದಿ ನೀಡಿದ್ದಾರೆ. ಅದನ್ನು ನನ್ನ ಸ್ವಂತ ಮೂಲಗಳಿಂದಲೂ ಪರಿಶೀಲಿಸಿದ್ದೇನೆ. ನಾನು ತಳಮಟ್ಟದ ರಾಜಕಾರಣಿ” ಎಂದು ಹೇಳಿದರು.

“ಮತದಾನದ ಹಕ್ಕು ಈ ದೇಶದ ಜನರ ಬದುಕುವ ಹಕ್ಕು. ಆದ್ದರಿಂದ ಇದು ಡಿ.ಕೆ. ಶಿವಕುಮಾರ್ ಅವರ ವಿಜಯವಲ್ಲ, ಇದು ಈ ದೇಶದ ಮತದಾರರ ವಿಜಯ. ರಾಹುಲ್ ಗಾಂಧಿಯವರು ಕೈಗೊಂಡ ದೊಡ್ಡ ಆಂದೋಲನದ ಫಲ, ಇದು ಅವರ ಗೆಲುವೂ ಆಗಿದೆ. ಅವರು ಕಾರ್ಯಕಾರಿ ಸಮಿತಿಯಲ್ಲಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಅವರು ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಬಂದು ಮತಗಳ್ಳತನದ ವಿರುದ್ದ ಹೋರಾಟ ಪ್ರಾರಂಭಿಸಿದರು” ಎಂದು ಹೇಳಿದರು.

ಜನರ ಮತದಾನದ ಹಕ್ಕು ಉಳಿಸುವುದು ನನ್ನ ಕರ್ತವ್ಯ

50 ಲಕ್ಷ ಮತಗಳನ್ನು ತೆಗದು ಹಾಕುವ ಸಂಚಿನ ಬಗ್ಗೆ ದಾಖಲೆ ನೀಡಬೇಕು ಇಲ್ಲದಿದ್ದರೆ ರಾಜಿನಾಮೆ ನೀಡಬೇಕು, ಮೂರು ಪಕ್ಷಗಳು ಸೇರಿ 25 ಸಾವಿರ ಅರ್ಜಿ ಸಲ್ಲಿಕೆ ಮಾಡಿವೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರುಗಳು ನನ್ನ ರಾಜೀನಾಮೆ ಕೇಳಲಿ. ಆದರೆ 25 ಸಾವಿರ ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರಲ್ಲ ಅದರ ಬಗ್ಗೆ ವಿಪಕ್ಷಗಳು ಮಾತನಾಡಲಿ. ಈ ಮತಗಳ್ಳತನದ ಪಿತಾಮಹರು ತಾವೇ ಎಂದು ಒಪ್ಪಿಕೊಂಡಿರುವುದಕ್ಕೆ ಅಶೋಕ್, ವಿಜಯೇಂದ್ರ ಅವರಿಗೆ ಅಭಿನಂದಿಸುವೆ. ಇದು ಕ್ರಿಮಿನಲ್ ಪಿತೂರಿಯ ತಪ್ಪೊಪ್ಪಿಗೆ. ಅದು ಅವರಿಗೆ ನಾಚಿಕೆಗೇಡಿನ ವಿಷಯವಲ್ಲವೇ? ಪೊಲೀಸರು ಅವರನ್ನು ಬಂಧಿಸಬೇಕು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಅವರು ಯಾವುದೇ ದೂರು ನೀಡಲಿ, ನಾನು ಅದನ್ನು ಸ್ವಾಗತಿಸುತ್ತೇನೆ. ಯಾವುದೇ ರೀತಿಯ ದೂರು ನೀಡಲು ಅವರಿಗೆ ಹಕ್ಕಿದೆ. ಒಂದು ವೇಳೆ ನನ್ನದೇ ತಪ್ಪಿದ್ದರೆ, ಚುನಾವಣೆ ಆಯೋಗ ಅಥವಾ ಯಾವುದೇ ಸಂಸ್ಥೆಗಳು ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಅದಕ್ಕೆ ನಾನು ಹೆದರುವುದಿಲ್ಲ. ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮತವನ್ನು ಹಾಗೂ ಸಂವಿಧಾನಾತ್ಮಕ ಸಂಸ್ಥೆಯನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ” ಎಂದು ಸವಾಲೆಸೆದರು.

“ಬಿಜೆಪಿಯವರ ತಂತ್ರ, ಕುತಂತ್ರ, ಮಂತ್ರವನ್ನು ನಾನು ಬಿಚ್ಚಿಟ್ಟಿದ್ದೇನೆ. ಚುನಾವಣಾ ಆಯೋಗದವರು ದಡ್ಡರಲ್ಲ. ಅವರಿಗೆ ನಾನು ಮನದಟ್ಟು ಮಾಡಿಕೊಟ್ಟಿದ್ದೇನೆ. ಐವತ್ತು ಲಕ್ಷ ಮತಗಳೋ, ಒಂದು ಮತವೋ ಒಟ್ಟಿನಲ್ಲಿ ಅವರ ಬಂಡವಾಳವನ್ನು ಬಿಚ್ಚಿಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಿಗೆ ಬರಲಿದೆ” ಎಂದರು.

“ಬಿಜೆಪಿಯವರ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಬಹಳ ಸಂತೋಷ, ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದುಕೊಂಡಿದ್ದಾರೆ. ಮಾಧ್ಯಮದವರು ಈ ದೇಶದ ಸಾಮಾನ್ಯ ಜನರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಈ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ಮಾಡಬೇಕು” ಎಂದು ಹೇಳಿದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ರದ್ದಿಗೆ ಆಗ್ರಹಿಸಿ ಪ್ರತಿಭಟನೆ; ಅಡ್ಡಂಡ ಕಾರ್ಯಪ್ಪ ಪೋಸ್ಟರ್‌ಗೆ ಬೆಂಕಿ

ಮೈಸೂರು, ಅಕ್ಟೋಬರ್,2,2026 (www.justkannada.in):  ಮೈಸೂರಿನ ಕಿರು ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಆಯೋಜಿಸಲಾಗಿರುವ ‘ಗಾಂಧಿ...

ಸಕಲ ಸಿದ್ಧತೆಗಳೊಂದಿಗೆ ದಸರಾಗೆ ಕಂಬಳ ಸಜ್ಜು – ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್, 2,2026 (www.justkannada.in): ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ...

ಮೈಸೂರು ದಸರಾ-2026 : ಈ ದಿನಗಳಲ್ಲಿ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ

ಮೈಸೂರು, ಅಕ್ಟೋಬರ್ ,2,2026 (www.justkannada.n):  ನಾಡಹಬ್ಬ ಮೈಸೂರು ದಸರಾ-2026 ಮಹೋತ್ಸವದ ಪ್ರಯುಕ್ತ...

ನಾಳೆ ಮೈಸೂರಿಗೆ ಸಿಎಂ ಡಿಕೆ ಶಿವಕುಮಾರ್

ಮೈಸೂರು,ಅಕ್ಟೋಬರ್, 2,2026 (www.justkannada.in): ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಕ್ಟೋಬರ್ 03(ನಾಳೆ)...