22
April, 2026

A News 365Times Venture

22
Wednesday
April, 2026

A News 365Times Venture

ಮಾತಿನ ತಕ್ಕಡಿ ಸತ್ಯದ ಕಡೆಗೇ ವಾಲಬೇಕು- ಪತ್ರಕರ್ತ ರಮಾಕಾಂತ್

Date:

ಬೆಂಗಳೂರು, ಫೆಬ್ರವರಿ,18,2026 (www.justkannada.in): ಪತ್ರಕರ್ತರು ಜನರನ್ನು ಸೆಳೆಯಲು ಮಾತ್ರ ಸುದ್ದಿಗೊಂದು ಗುದ್ದು ಕೊಡಬೇಕೆ ಹೊರತು ಸುಳ್ಳುಗಳನ್ನು ವೈಭವೀಕರಿಸಬಾರದು. ಏನೇ ಸಂದರ್ಭ ಬಂದರೂ ನಮ್ಮ ಮಾತಿನ ತಕ್ಕಡಿ ಸತ್ಯದ ಕಡೆಗೆ ವಾಲಬೇಕು” ಎಂದು ಪತ್ರಕರ್ತ ರಮಾಕಾಂತ್ ಅಭಿಪ್ರಾಯಪಟ್ಟರು.

ಜಯನಗರ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ “ಬದಲಾಗುತ್ತಿರುವ ಮಾಧ್ಯಮಗಳು ಮತ್ತು ಸುದ್ದಿ ಪ್ರಸ್ತುತಿ” ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ರಮಾಕಾಂತ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಹೊಸ ತಂತ್ರಜ್ಞಾನಗಳ ಆಗಮನ ಮಾಧ್ಯಮಕ್ಕೆ ಪೂರಕವೇ ಹೊರತು ಮಾರಕವಲ್ಲ, ಅವುಗಳನ್ನು ಅಳವಡಿಸಿಕೊಂಡು ಹೊಸ ಬದಲಾವಣೆಗೆ ಪತ್ರಕರ್ತರು ಸಜ್ಜಾಗಬೇಕು” ಎಂದು ಕರೆ ನೀಡಿದರು.

ಇದೇ ವೇಳೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ಕ್ಯಾಂಪಸ್ ಪತ್ರಿಕೆ, ‘ದಿ ಎನ್. ಸಿ.ಜೆ ಟೈಮ್ಸ್’  ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಎನ್ ಇ ಎಸ್ ಆಫ್ ಕರ್ನಾಟಕದ ಚೇರ್ಮನ್ ಡಾ. ವೆಂಕಟರಾಮರೆಡ್ಡಿ , ಪ್ರಾಂಶುಪಾಲೆ ಡಾ. ಸಿ. ವಿಜಯಲಕ್ಷ್ಮಿ, ಡಾ. ಜಯದೇವಪ್ಪ, ಪ್ರೊ. ಚೆಲುವಪ್ಪ, ಪ್ರೊ. ಮಮತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ವೈಶಾಲಿ ಎಚ್.ಬಿ., ಪ್ರೊ. ರಂಗನಾಥ್ ಜಿ.ಎನ್ , ಅಧ್ಯಾಪಕರು ಉಪಸ್ಥಿತರಿದ್ದರು.

Key words: speech, truth, Journalist, Ramakanth

The post ಮಾತಿನ ತಕ್ಕಡಿ ಸತ್ಯದ ಕಡೆಗೇ ವಾಲಬೇಕು- ಪತ್ರಕರ್ತ ರಮಾಕಾಂತ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಹಲ್ಗಾಮ್ ದಾಳಿಗೆ ವರ್ಷ :  ಕಣಿವೆ ದುಃಖದಲ್ಲಿ, ಹೊಂದಾಣಿಕೆ ಮತ್ತು ಹೆಚ್ಚಿದ ಭದ್ರತೆ.!

  ಶ್ರೀನಗರ, ಏ.೨೧,೨೦೨೬: ಕಾಶ್ಮೀರದ ಶ್ರೀನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅಶಾಂತಿಯ ನಿಶ್ಶಬ್ದತೆ...

ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆ ಆಗುತ್ತೆ- ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,21,2026 (www.justkannada.in):  ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯಾಗುತ್ತದೆ ಎಂದು ಮಾಜಿ...

ಬಿಜೆಪಿಯಿಂದ ಸುಳ್ಳು: ನಾವು ಯಾವಾಗಲೂ ಮಹಿಳಾ ಮೀಸಲಾತಿ ಪರ- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,21,2026 (www.justkannada.in):  ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದೆವು ಎಂದು ಬಿಜೆಪಿಯುವರು ಸುಳ್ಳೂ...

ದಿ ಆಕ್ಮಿ ಸ್ಕೂಲ್ ವೆಬ್‌ ಸೈಟ್ ಬಿಡುಗಡೆ

ಮೈಸೂರು, ಏಪ್ರಿಲ್, 21, 2026 (www.justkannada.in): ಶೈಕ್ಷಣಿಕ ಕ್ಷೇತ್ರದಲ್ಲಿ ನವೀನತೆ ಮತ್ತು...