ನವದೆಹಲಿ,ಜುಲೈ,29,2026 (www.justkannada.in): ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಸಿಎಂ ಡಿಕೆ ಶಿವಕುಮಾರ್ ಒತ್ತಡ ಹಾಕುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಮೇಕೆದಾಟು ಡ್ಯಾಂ ನಿರ್ಮಾಣ ವಿಚಾರದಲ್ಲಿ ಕರ್ನಾಟಕದಲ್ಲಿ ತೊಂದರೆ ಇಲ್ಲ ಅಂತಾ ಹೇಳಿದೆ. ಸಿಡಬ್ಲ್ಯುಎಂಎ ಯವರು ಯೋಜನೆಗೆ ಅನುಮತಿ ಕೊಡಬೇಕು. ಅದನ್ನು ಕೊಡುವುದು ಕೇಂದ್ರ ಸರ್ಕಾರ. ಮೇಕೆದಾಟು ಯೋಜನೆಗೆ ನಾವು ಬದ್ಧರಾಗಿದ್ದೇವೆ ಅದಕ್ಕಾಗಿ ಸಿಎಂ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಟ್ಟಿದ್ದೇವೆ ಎಂದರು.
ಮೊನ್ನೆ ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಸಂಸದರ ಸಭೆ ಮಾಡಿದರು. ಕೇಂದ್ರದ ಮೇಲೆ ಒತ್ತಡ ತರುವಂತೆ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವಂತೆ ಕೇಳಿದ್ದಾರೆ. ಅನುಮತಿ ಕೊಟ್ಟರೇ 30 ದಿನದಲ್ಲಿ ಯೋಜನೆಗೆ ಚಾಲನೆ ಸಿಗುತ್ತೆ ಏನಾಗಲಿದೆಯೋ ಮುಂದೇ ನೋಡೋಣ ಎಂದು ಡಿ.ಕೆ ಸುರೇಶ್ ತಿಳಿಸಿದರು.
Key words: Mekedatu project, CM, pressure, Central Government, D.K. Suresh
The post ಮೇಕೆದಾಟು ಯೋಜನೆಗೆ ನಾವು ಬದ‍್ಧ: ಕೇಂದ್ರಕ್ಕೆ ಸಿಎಂ ಒತ್ತಡ ಹಾಕುತ್ತಿದ್ದಾರೆ-ಡಿ.ಕೆ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




