31
August, 2025

A News 365Times Venture

31
Sunday
August, 2025

A News 365Times Venture

ಮೈಸೂರಲ್ಲಿ ಸಾಧನ ಸಮಾವೇಶ: ತವರಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ..!

Date:

ಮೈಸೂರು, ಜು.೧೯, ೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ “ ಗ್ಯಾರಂಟಿ ಯೋಜನೆ” ಗಳ ಯಶಸ್ವಿ ಜಾರಿ ಮೂಲಕ ಇದೀಗ ಸಾಧನ ಸಮಾವೇಶ ಆಯೋಜಿಸಿದೆ.

ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ತೋರಿಸಿ ವಿಪಕ್ಷಗಳಿಗೆ ಟಾಂಗ್ ಕೊಡುವುದರ ಜತೆಗೆ ಸ್ವ ಪಕ್ಷದಲ್ಲಿ ಹುಟ್ಟಿಕೊಂಡಿರುವ ಹಲವರ ವಿಭಿನ್ನ ಚರ್ಚೆಗೆ ಇತಿಶ್ರೀ ಹಾಡುವ ಪ್ಲಾನ್. ಸೆಪ್ಟೆಂಬರ್ ಕ್ರಾಂತಿ ಎಂಬ ಹಲವು ಕಾಂಗ್ರೆಸ್ ನಾಯಕರಿಗೂ ಆಮೂಲಕ ಸ್ಪಷ್ಟ ಸಂದೇಶ ರವಾನೆ.

ಯಾವುದೇ “ ಸೀಟ್‌ ಶೇರಿಂಗ್ “ ಮಾತುಕತೆ ಆಗಿಲ್ಲ ಎಂಬುದನ್ನ ತೋರಿಸುವ ವೇದಿಕೆಗೆ ಸಾಕ್ಷಿಯಾಗುವ ಸಮಾವೇಶ. ಐದು ವರ್ಷ ನಾನೇ ಸಿಎಂ ಎಂಬ ಘೋಷಣೆಗೆ ಪುನರುಚ್ಚಾರಕ್ಕೆ ಸೂಕ್ತ ವೇದಿಕೆ ಈ ಸಮಾವೇಶ.

ಸರ್ಕಾರದಲ್ಲಿ‌ ಹಣ ಇಲ್ಲ ಎಂಬ ವಿಪಕ್ಷಗಳಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ 2658 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ, ತವರು ನೆಲದಿಂದಲೇ ಸ್ಪಷ್ಟ ಸಂದೇಶ ರವಾನೆಗೆ ಸಿದ್ಧತೆ ನಡೆಸಿದ್ದಾರೆ. ಜತೆಗೆ ಸರ್ಕಾರ ಸುಭದ್ರವಾಗಿದೆ, ಸಿಎಂ ಸ್ಥಾನವೂ ಗಟ್ಟಿ ಇದೆ ಎಂದು ಬಿಂಬಿಸುವ ವೇದಿಕೆಯಾಗಲಿದೆ ಈ ಸಮಾವೇಶ.

ಎರಡು ವರ್ಷದ ಕಾಂಗ್ರೆಸ್ ಸಾಧನೆ ಜೊತೆಗೆ ಮೈಸೂರಿನಲ್ಲಿ 2658 ಕೋಟಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ. ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿರುವ ಸಮಾವೇಶ

ಕೃಷಿ, ಕೈಗಾರಿಕೆ, ನೀರಾವರಿ, ಸಣ್ಣ ಉದ್ಯಮ ಸೇರಿ ಬರೋಬ್ಬರಿ 28 ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಸಮಾವೇಶದ ಮೂಲಕ ಜಾರಿಗೆ. ಆ  ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೂ ನೆರವಾಗುವ ವೇದಿಕೆ.

ಸಿಎಂ ಖುರ್ಚಿ ಜಟಾಪಟಿ ಬೆನ್ನಲ್ಲೇ ಬೃಹತ್ ಕಾರ್ಯಕ್ರಮ ಆಯೋಜನೆ, 1 ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ. 60 ಸಾವಿರ ಆಸನದ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ. ಮೈಸೂರಿನಲ್ಲಿ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿಎಂ.

ಕಾರ್ಯಕ್ರಮಕ್ಕೆ ಬರುವಂತೆ ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಿರುವ ಸಿಎಂ. ಡಿಸಿಎಂ ಡಿಕೆಶಿ ಸೇರಿ ಭಾಗಿಯಗಲಿರುವ ಸಚಿವ ಸಂಪುಟ ಸಚಿವರು.

  • ವಿಭಿನ್ನ ರೀತಿಯಲ್ಲಿ ಸ್ಟೇಜ್ ನಿರ್ಮಾಣ

ಸಿದ್ದರಾಮಯ್ಯ ವೇದಿಕೆ ಮದ್ಯ ಭಾಗದಲ್ಲಿ ಜನರ ಮದ್ಯೆ ನಡೆದು ಬರುವಂತೆ ವೇದಿಕೆ ಸಜ್ಜು, ಡಿಕೆಶಿ ಎದುರೇ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧಗೊಂಡಿರುವ ಸಿಎಂ ಸಿದ್ದರಾಮಯ್ಯ . ಬೆಳಿಗ್ಗೆ ಬೆಂಗಳೂರಿನಿಂದ ನೇರವಾಗಿ ಕಾರ್ಯಕ್ರಮಕ್ಕೆ ಬರಲಿರುವ ಸಿಎಂ.

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಭಾಗಿ. ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ‌ ಖರ್ಗೆ ನೇತೃತ್ವದಲ್ಲಿ ಸಮಾವೇಶ.

key words:  Mysuru, CM Siddaramaiah, shows off his power

vtu

SUMMARY: 

Sadhana conference in Mysuru: CM Siddaramaiah shows off his power at home..!

After coming to power, the Congress government led by Chief Minister Siddaramaiah has now organized a Sadhana Samavesha with the successful implementation of the “Guarantee Scheme”.

The plan is to show strength through the Samavesha and give a thumbs up to the opposition parties, as well as to sing the different discussions that have arisen within the party. This will send a clear message to many Congress leaders called the September Revolution.

The post ಮೈಸೂರಲ್ಲಿ ಸಾಧನ ಸಮಾವೇಶ: ತವರಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...