13
June, 2026

A News 365Times Venture

13
Saturday
June, 2026

A News 365Times Venture

ಮೈಸೂರಿನಲ್ಲಿ ಅಕ್ರಮ ಗಾಂಜಾ ಸಾಗಾಣೆ: ನಾಲ್ವರ ಬಂಧನ

Date:

ಮೈಸೂರು,ಜೂನ್,8,2026 (www.justkannada.in): ಮೈಸೂರು ನಗರ ಪೊಲೀಸರಿಂದ ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 1,40,00,000 ರೂ. ಮೌಲ್ಯದ 280 ಕೆ.ಜಿ. ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.

ಮಹಮ್ಮದ್ ಜುಬೇರ್, ಮುದಾಸಿರ್ ಅಹಮದ್, ಅಬುಬಕರ್ ಸಿದ್ದಿಕ್, ಸೈಯದ್ ಮಜಾರ್ ಬಂಧಿತ ಆರೋಪಿಗಳು. ಮೈಸೂರು ನಗರದ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದು ಮಳವಳ್ಳಿ-ಮೈಸೂರು ಮುಖ್ಯರಸ್ತೆಯ ಗ್ರೀನ್‌ಕೌಂಟಿ ಲೇಔಟ್‌ನಲ್ಲಿರುವ ಹಸಿರು ಗೂಡು ನರ್ಸರಿ ಗೇಟ್ ಮುಂಭಾಗ ರಸ್ತೆಯಲ್ಲಿ ದಾಳಿ ಮಾಡಿ ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಹಾಗೆಯೇ 1,40,00,000 ರೂ. ಮೌಲ್ಯದ 280 ಕೆ.ಜಿ ಗಾಂಜಾ ಹಾಗೂ ಗಾಂಜಾ ಸಾಗಾಣೆಗೆ ಬಳಕೆ ಮಾಡಿದ್ದ 1 ಈಚರ್ ಟ್ರಕ್ ಮತ್ತು 1 ಕಾರನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಈ ಪ್ರಕರಣ ಹೊರತು ಪಡಿಸಿ ಕಳೆದ 3 ತಿಂಗಳಲ್ಲಿ ಒಟ್ಟು 12 ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಿ 28 ಆರೋಪಿಗಳನ್ನು ದಸ್ತಗಿರಿ ಮಾಡಿ 43 ಕೆ.ಜಿ. ಗಾಂಜಾ ಹಾಗೂ 164 ಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಜೊತೆಗೆ 36 ಸೇವನೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

Key words: Four arrested, transporting, illegal, marijuana,  Mysore

The post ಮೈಸೂರಿನಲ್ಲಿ ಅಕ್ರಮ ಗಾಂಜಾ ಸಾಗಾಣೆ: ನಾಲ್ವರ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಾಧಿಕಾರದ ಪ್ರಥಮ ದರ್ಜೆ ನೌಕರನಿಗೆ ರೈತನಿಂದ ಚಪ್ಪಲಿಯೇಟು

ಬಾಗಲಕೋಟೆ,ಜೂನ್,13,2026 (www.justkannada.in): ಪರಿಹಾರ ವಿಚಾರದಲ್ಲಿ ತಾರತಮ್ಯ ತೋರಿದ್ದಾರೆಂದು ಆರೋಪಿಸಿ ಪ್ರಥಮದರ್ಜೆ ನೌಕರರೊಬ್ಬರಿಗೆ...

ಕೆ.ಅಣ್ಣಾಮಲೈ ಬಿಜೆಪಿ ತೊರೆದಿರುವುದು ಅದು ಅವರ ನಿರ್ಧಾರ- ರಾಧಾಮೋಹನ್ ದಾಸ್

ಮಂಗಳೂರು,ಜೂನ್,13 2026 (www.justkannada.in):  ಕೆ.ಅಣ್ಣಾಮಲೈ ಬಿಜೆಪಿ ಪಕ್ಷ ತೊರೆದಿರುವುದು ಅದು ಅವರ...

ಡಿಕೆಶಿ ಅವರೇ ಸಿದ್ದರಾಮಯ್ಯರಿಂದ ಹುಷಾರಾಗಿರಿ-MLC ಹೆಚ್.ವಿಶ್ವನಾಥ್

ಬೆಂಗಳೂರು,ಜೂನ್,13,2026 (www.justkannada.in): ಆಗಾಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿದ್ದ ಬಿಜೆಪಿ...

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಚರ್ಚಿಸಿದ ಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಜೂನ್,12,2026 (www.justkannada.in):  ದೆಹಲಿಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಷ್ಟ್ರಪತಿ...