5
October, 2026

A News 365Times Venture

5
Monday
October, 2026

A News 365Times Venture

ಮೈಸೂರಿನಲ್ಲಿ ಬರ ಪರಿಸ್ಥಿತಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ

Date:

ಮೈಸೂರು, ಅಕ್ಟೋಬರ್,5,2026(www.justkannada.in): ಮೈಸೂರಿನಲ್ಲಿ ಬರ ಪರಿಸ್ಥಿತಿಯ ಬಗ್ಗೆ  ಕೇಂದ್ರ ಬರ ಅಧ್ಯಯನ ತಂಡವು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.

ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ  ಉಪ ಆಯುಕ್ತ ಸುಧಾಮ್ ಬೇಗ್,  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ (MNCFC)ದ ಉಪನಿರ್ದೇಶಕ ಕರಣ್ ಚೌಧರಿ ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ    ಜಿಲ್ಲೆಯಲ್ಲಿ  ಬರ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂಬಂಧ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ ಅವರು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೀವ್ರತರ ಬರ ಪರಿಸ್ಥಿತಿ ಎದುರಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿರುತ್ತದೆ ಹಾಗೂ ಶೇ 59 ರಷ್ಟು ಮಳೆ ಕೊರತೆಯಾಗಿರುತ್ತದೆ ಎಂದರು.

ಕೆ.ಆರ್.ಎಸ್, ಕಬಿನಿ ಹಾಗೂ‌‌ ಹಾರಂಗಿ ಮುಖ್ಯವಾಗಿ 3 ಜಲಾಶಯಗಳಿದ್ದು  ಕೆ.ಆರ್.ಎಸ್ ಜಲಾಶಯದಲ್ಲಿ ಈ ಬಾರಿ ಲೈವ್ ಕ್ಯಪಾಸಿಟಿ 17.86  ಟಿಎಂಸಿ ಇದ್ದು, ಕಳೆದ ಬಾರಿ 21.83 ಟಿಎಂಸಿ ಇತ್ತು. 5ಟಿಎಂಸಿ ಕೊರತೆಯಾಗಿದೆ. ಇದೇ ರೀತಿ ಕಬಿನಿ ಜಲಾಶಯದಲ್ಲಿ ಈ ಬಾರಿ ಲೈವ್ ಕ್ಯಪಾಸಿಟಿ 1.31 ಟಿಎಂಸಿ ಇದ್ದು, ಕಳೆದ ಬಾರಿ 8.71ಟಿಎಂಸಿ ಇರುತ್ತದೆ. 7 ಟಿಎಂಸಿ ಕೊರತೆಯಾಗಿರುತ್ತದೆ. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗಾಗಿ ಹಾಗೂ ಕೆರೆ ತುಂಬಿಸಲು ಮಾತ್ರ ಬಳಸಲಾಗುತ್ತಿದೆ.ಮಳೆಯ ಅಭಾವ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿಗೂ ಸಹ ತೀವ್ರ ತೊಂದರೆ ಎದುರಾಗುವ ಪರಿಸ್ಥಿತಿ ಇರುತ್ತದೆ ಎಂದು ವಿವರಿಸಿದರು.

ಜಂಟಿ ಕೃಷಿ ನಿರ್ದೇಶಕ‌ಕೆ.ಹೆಚ್ ರವಿ ಅವರು ಮಾತನಾಡಿ ಜಿಲ್ಲೆಯಲ್ಲಿ ಬರದಿಂದ ಸುಮಾರು 143308 ನಷ್ಟು ಬೆಳೆ ನಾಶವಾಗಿದ್ದು, ಎಸ್.ಡಿ.ಆರ್ ಎಫ್ ನಿಯಮದ ಪ್ರಕಾರ ಸುಮಾರು 122.34 ಕೋಟಿ ರೂ ಹಣ ನಷ್ಠವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯಾ ಆರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ : KUWJ ಖಂಡನೆ

ಬೆಂಗಳೂರು,ಅಕ್ಟೋಬರ್,5,2026 (www.justkannada.in): ದೆಹಲಿಯ ಜಂತರ್ ಮಂತರ್‌ ನಲ್ಲಿ ಪ್ರತಿಭಟನೆಯ ವರದಿಗೆ ತೆರಳಿದ್ದ...

MYSORE PALACE: ನಟಿ ಕಾಜಲ್ ಅಗರ್ವಾಲ್ ಭೇಟಿ; ಅರಮನೆ ವೈಭವಕ್ಕೆ ಮನಸೋತ ನಟಿ

  ಮೈಸೂರು, ಅ.5: ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಕಾಜಲ್ ಅಗರ್ವಾಲ್ ಮೈಸೂರಿನ...

ಧರ್ಮ ಮತ್ತು ಜಾತಿ ಈ ದೇಶದ ದುರಂತ: ಕಫೀಲ್ ಖಾನ್

  Bangalore, oct.05,2026: ಧರ್ಮ ಮತ್ತು ಜಾತಿ ಈ ದೇಶವನ್ನು ನುಂಗಿಹಾಕುತ್ತಿದೆ ಎಂದು...

ಫಾರ್ಮ್​-7 ದುರ್ಬಳಕೆ: ಸ್ಪಷ್ಟನೆ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ಬೆಂಗಳೂರು, ಅಕ್ಟೋಬರ್,​​ 5,2026 (www.justkannada.in):  ರಾಜ್ಯದಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ...