17
June, 2026

A News 365Times Venture

17
Wednesday
June, 2026

A News 365Times Venture

ಮೈಸೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಅಬಕಾರಿ ಅಧಿಕಾರಿಗಳು ಸಸ್ಪೆಂಡ್

Date:

ಮೈಸೂರು,ಜೂನ್,17,2026 (www.justkannada.in): ಮೈಸೂರು ನಗರದ ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆದ ಅಗ್ನಿ ಅವಘಡದ ಸಂಬಂಧ ಕರ್ತವ್ಯ ಲೋಪವೆಸಗಿದ ಅಬಕಾರಿ ಅಧಿಕಾರಿಗಳನ್ನು  ಅಮಾನತು ಮಾಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸದರಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಟ್ಟಡದ ರೂಪ್ ಟಾಪ್ ನಲ್ಲಿ ಅನುಮತಿ ಪಡೆಯದೆ ಒಣ ಹುಲ್ಲು ಮತ್ತು ಗರಿಗಳಿಂದ ನಿರ್ಮಿಸಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದು, ಈ ಸಂಬಂಧ ಪರಿಶೀಲಿಸದೆ ಕರ್ತವ್ಯ ಲೋಪವೆಸಗಲಾಗಿದೆ ಎಂದು ಅಬಕಾರಿ ಆಯುಕ್ತರು ಅಮಾನತು ಮಾಡಿದ್ದಾರೆ.

ಮೈಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ಮೈಸೂರು ವಲಯ-3 ರ ಅಬಕಾರಿ ನಿರೀಕ್ಷಕರು, ಅಬಕಾರಿ ಉಪನಿರೀಕ್ಷಕರು-1, ಅಬಕಾರಿ ಉಪನಿರೀಕ್ಷಕರು-2,  ಹಾಗೂ ಒಬ್ಬ ಅಬಕಾರಿ ಪೇದೆ (ಬೀಟ್ ಕಾನ್ಸಟೇಬಲ್) ಸೇರಿದಂತೆ ಒಟ್ಟು 5 ಜನರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Key words: Mysore, Bar and restaurant, fire, Excise officials, suspended

The post ಮೈಸೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಅಬಕಾರಿ ಅಧಿಕಾರಿಗಳು ಸಸ್ಪೆಂಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾತಿಗೂ ಡೋಂಟ್ ಕೇರ್..? ಅಬಕಾರಿ ಡಿಸಿ ಸೇಫ್, ಕಿರಿಯ ಅಧಿಕಾರಿಗಳ ಅಮಾನತು

. ಮೈಸೂರು, ಜೂ.೧೭,೨೦೨೬: ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ್ದ ಅಗ್ನಿ...

ಜಯದೇವ ರೋಗಿಗಳ ಸಾವು ಕೇಸ್: ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ- ಸಚಿವ ಡಾ ಶರಣ ಪ್ರಕಾಶ್ ಪಾಟೀಲ್

ಮೈಸೂರು,ಜೂನ್,17,2026 (www.justkannada.in):  ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು ಪ್ರಕರಣ...

ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರ: ಜಯದೇವ ಸಂಸ್ಥೆಗೆ ಮಸಿ ಬಳಿಯುವ ಕೆಲಸ ಬೇಡ- ಡಾ.ದಿನೇಶ್ 

ಮೈಸೂರು,ಜೂನ್,17,2026 (www.justkannada.in):  ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವಿಗೆ ವೈದ್ಯರಿಲ್ಲದಿರುವುದೇ...

ನಾನು ಸಚಿವ ಸ್ಥಾನ ಕೇಳಿಲ್ಲ: ಆದ್ರೆ ಡಿಸಿಎಂ ಸ್ಥಾನ ನೀಡಲೆಂದು ಅಭಿಮಾನಿಗಳಿಂದ ಪ್ರತಿಭಟನೆ- ಎಸ್.ಎಸ್ ಮಲ್ಲಿಕಾರ್ಜುನ್

ದಾವಣಗೆರೆ,ಜೂನ್,17,2026 (www.justkannada.in):  ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ಕಾಂಗ್ರೆಸ್ ನಲ್ಲಿ...