21
August, 2026

A News 365Times Venture

21
Friday
August, 2026

A News 365Times Venture

ಮೈಸೂರು ದಸರಾ ಜಂಬೂಸವಾರಿ: ಅಂಬಾರಿ ಸಾರಥಿ ಅಭಿಮನ್ಯುಗೆ ಕೊಕ್!

Date:

ಮೈಸೂರು,ಆಗಸ್ಟ್,18,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗೆ ಈ ಬಾರಿ ಮಹತ್ವದ ಬದಲಾವಣೆ! ಕಳೆದ ಹಲವು ವರ್ಷಗಳಿಂದ ಚಿನ್ನದ ಅಂಬಾರಿಯ ಸಾರಥಿಯಾಗಿ ಮೆರೆಯುತ್ತಿದ್ದ ಕ್ಯಾಪ್ಟನ್ ಅಭಿಮನ್ಯು 2026ರ ದಸರಾ ಗಜಪಡೆಯ ಪಟ್ಟಿಯಿಂದ ಹೊರಗುಳಿದಿದ್ದಾನೆ.

ಅಭಿಮನ್ಯುವಿಗೆ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರವಾದ ದಸರಾ ಜವಾಬ್ದಾರಿಯಿಂದ ದೂರವಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಕಳೆದ ದಸರೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯುವಿಗೆ ಇದು ಭಾವುಕ ವಿದಾಯವಾಗಲಿದೆ.

ಅಭಿಮನ್ಯು ಸ್ಥಾನಕ್ಕೆ ಯಾರು?

ಅಭಿಮನ್ಯು ಹೊರಗುಳಿದಿರುವ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರುವ ನೂತನ ಗಜಸಾರಥಿ ಯಾರು? ಎಂಬ ಕುತೂಹಲ ಮೈಸೂರು ಜನರಲ್ಲಿ ಮೂಡಿದೆ.

ಈ ಬಾರಿ ಆಯ್ಕೆಯಾಗಿರುವ ಗಜಪಡೆಯಲ್ಲಿ ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ, ರೂಪ, ಚೈತ್ರ ಹಾಗೂ ಶ್ರೀಕಂಠ ಸೇರಿದ್ದಾರೆ. ತುರ್ತು ಸಂದರ್ಭಕ್ಕಾಗಿ ಭೀಮ ಮತ್ತು ಹರ್ಷನನ್ನು ಮೀಸಲು ಪಡೆಯಾಗಿ ಇರಿಸಲಾಗಿದೆ.

ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಧನಂಜಯ, ಮಹೇಂದ್ರ ಹಾಗೂ ಪ್ರಶಾಂತ ಹೆಸರುಗಳು ಮುಂಚೂಣಿಯಲ್ಲಿದ್ದವು ಎಂಬ ವರದಿಗಳೂ ಈ ಹಿಂದೆ ಪ್ರಕಟವಾಗಿದ್ದವು.

ಅಭಿಮನ್ಯು ಯುಗಕ್ಕೆ ತೆರೆ?

2020ರಿಂದ ಸತತವಾಗಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು, ಮೈಸೂರು ದಸರಾದ ಗಜಪಡೆಯ ಅತ್ಯಂತ ಪರಿಚಿತ ಮುಖವಾಗಿದ್ದಾನೆ. ಆರು ಬಾರಿ ಅಂಬಾರಿ ಹೊತ್ತಿರುವ ಈ ಗಜಸಾರಥಿಯ ಸ್ಥಾನವನ್ನು ತುಂಬುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಹಾಗಾದರೆ ಈ ಬಾರಿಯ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆ ಗಜರಾಜ ಯಾರು? ಅಭಿಮನ್ಯುವಿನ ಬಳಿಕ ಮೈಸೂರು ದಸರಾ ಗಜಪಡೆಯ ಹೊಸ ಕ್ಯಾಪ್ಟನ್ ಯಾರು ಎಂಬುದೇ ಇದೀಗ ದಸರಾ ವಲಯದ ಹಾಟ್‌ ಟಾಪಿಕ್!

Key words: Mysore Dasara, Jambu Savari, Ambari, Abhimanyu, Off the list

The post ಮೈಸೂರು ದಸರಾ ಜಂಬೂಸವಾರಿ: ಅಂಬಾರಿ ಸಾರಥಿ ಅಭಿಮನ್ಯುಗೆ ಕೊಕ್! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಂಡ್ಯ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಹುದ್ದೆಗೆ ತೃತೀಯ ಲಿಂಗಿ ಆಯ್ಕೆ

ಮಂಡ್ಯ,ಆಗಸ್ಟ್, 21,2026 (www.justkannada.in): ತೃತೀಯ ಲಿಂಗಿ ಮೈನಾ ಹೆಚ್. ಅವರು ಮಂಡ್ಯ...

15 ಸಾವಿರ ಶಿಕ್ಷಕರ ನೇಮಕಾತಿ: ಅಭ್ಯರ್ಥಿಗಳ ಗೊಂದಲ ನಿವಾರಣೆಗೆ FAQ ಪ್ರಕಟ

ಬೆಂಗಳೂರು, ಆಗಸ್ಟ್,20,2026 (www.justkannada.in): ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 15 ಸಾವಿರ...

ಕೆಪಿಎಸ್ ಸಿ ಮಾಜಿ ಅಧ್ಯಕ್ಷರ ಮರುನೇಮಕಕ್ಕೆ ಆದೇಶ ವಿಚಾರ: ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಆಗಸ್ಟ್,21,2026 (www.justkannada.in): ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಅವರನ್ನು 7ದಿನದೊಳಗೆ...

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ:  ಕಪ್ಪು ಟೀ ಶರ್ಟ್ ಧರಿಸಿ BJP-JDS ಶಾಸಕರ ಪ್ರತಿಭಟನೆ

ಬೆಂಗಳೂರು,ಆಗಸ್ಟ್,21,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು ಕಪ್ಪು...