11
September, 2026

A News 365Times Venture

11
Friday
September, 2026

A News 365Times Venture

 ಮೈಸೂರು: ವೃದ್ಧೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ

Date:

ಮೈಸೂರು, ಸೆಪ್ಟಂಬರ್,10, 2026 (www.justkannada.in):  ಮೈಸೂರಿನಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಸಿಯಲು ಕಿಡಿಗೇಡಿಗಳು ನಡೆಸಿದ ವಿಫಲ ಯತ್ನ ನಡೆದಿದೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಥುರಾ ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ.

ಮಥುರಾ ನಗರದ ನಿವಾಸಿ ಕಮಲಾಕ್ಷಮ್ಮ (85) ಅವರು ಹಾಲು ತರಲು ಮನೆಯಿಂದ ಹೊರಬಂದಿದ್ದ ವೇಳೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಕಸಿಯಲು ಯತ್ನಿಸಿದ್ದಾರೆ.

ಕಳ್ಳರು ಸರ ಎಳೆಯುತ್ತಿದ್ದಂತೆ ಕಮಲಾಕ್ಷಮ್ಮ ತೀವ್ರವಾಗಿ ಪ್ರತಿರೋಧಿಸಿ, ಎರಡೂ ಕೈಗಳಿಂದ ಸರವನ್ನು ಬಿಗಿಯಾಗಿ ಹಿಡಿದು ಕೂಗಾಡಿದ್ದಾರೆ. ಅವರ ಅರಚಾಟ ಕೇಳಿ ಸ್ಥಳೀಯರು ಧಾವಿಸುತ್ತಿದ್ದಂತೆ ಕಿಡಿಗೇಡಿಗಳು ಆಟೋದಲ್ಲಿ ಪರಾರಿಯಾಗಿದ್ದಾರೆ.

ಈ ವೇಳೆ ಸರ ಎರಡು ಭಾಗವಾಗಿದ್ದು, ಅದರ ಬಹುಪಾಲು ಕಮಲಾಕ್ಷಮ್ಮ ಅವರ ಕೈಯಲ್ಲೇ ಉಳಿದಿದೆ. ಹೀಗಾಗಿ ಖದೀಮರ ಸರ ಕಸಿಯುವ ಯತ್ನ ವಿಫಲವಾಗಿದೆ.

ಘಟನೆಯ ಮಾಹಿತಿ ತಿಳಿದು ಮೇಟಗಳ್ಳಿ ಠಾಣೆ ಇನ್ಸ್‌ ಪೆಕ್ಟರ್ ಅರುಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ವೃದ್ಧೆಯ ಧೈರ್ಯದಿಂದ ಚಿನ್ನದ ಸರ ಕಳ್ಳತನವಾಗುವುದು ತಪ್ಪಿದ್ದು, ಇದೀಗ ಆಟೋದಲ್ಲಿ ಬಂದ ಖದೀಮರಿಗಾಗಿ ಪೊಲೀಸರ ಶೋಧ ಮುಂದುವರಿದಿದೆ.

Key words: Mysuru, ChainSnatching, Police

The post  ಮೈಸೂರು: ವೃದ್ಧೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್, 10,2026 (www.justkannada.in):  ತನ್ನ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ...

ನಿವೇಶನ ರಹಿತರಿಗೆ ಸೈಟ್, ಉದ್ಯೋಗಸೃಷ್ಠಿ, ರೈತರಿಗೆ ನೇಗಿಲಯೋಗಿ ಯೋಜನೆ- ಸಿಎಂ ಡಿಕೆಶಿ ಘೋಷಣೆ

ಬೆಂಗಳೂರು,ಸೆಪ್ಟಂಬರ್,10,2026 (www.justkannada.in): ನಿವೇಶನ ರಹಿತ ಕುಟುಂಬಗಳಿಗೆ ಗೆ ಸೈಟ್ ನೀಡಲು ನಿರ್ಧರಿಸಿದ್ದೇವೆ....

ಫಲಾನುಭವಿಗಳ ಜೊತೆಯೇ ಸಿಎಂ ಡಿಕೆಶಿ ಭೋಜನ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ

ಬೆಂಗಳೂರು ಸೆಪ್ಟಂಬರ್.10,2026  (www.justkannada.in): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು...

ಪಾದಯಾತ್ರೆ ಯಶಸ್ವಿ: ಬಿಜೆಪಿಗೆ ಮುಸ್ಲೀಂ ಓಲೈಕೆ ಅವಶ್ಯಕತೆ ಇಲ್ಲ- ಶಾಸಕ ಜನಾರ್ದನ ರೆಡ್ಡಿ

ಬಳ್ಳಾರಿ,ಸೆಪ್ಟಂಬರ್,10,2026 (www.justkannada.in):  ರಾಜ್ಯಸರ್ಕಾರದ ವೈಪಲ್ಯ ಮತ್ತು ವಾಲ್ಮೀಕಿ ನಿಗಮದ ಅಕ್ರಮ ಖಂಡಿಸಿ...