5
May, 2026

A News 365Times Venture

5
Tuesday
May, 2026

A News 365Times Venture

ಮೈಸೂರು GRS ಫ್ಯಾಂಟಸಿ ಪಾರ್ಕ್ ನಲ್ಲಿ  20ಕ್ಕೂ ಹೆಚ್ಚು ಥೀಮ್ಡ್ ಸೆಟ್ ಸೆಲ್ಫಿ ಫ್ಯಾಕ್ಟರಿ ಆರಂಭ

Date:

ಮೈಸೂರು,ಮೇ,4,2026 (www.justkannada.in): ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮೈಸೂರಿನಲ್ಲಿ 20ಕ್ಕೂ ಹೆಚ್ಚು ಥೀಮ್ಡ್ ಸೆಟ್‌ಗಳನ್ನು ಹೊಂದಿರುವ 4,000 ಚದರ ಅಡಿ ವಿಸ್ತೀರ್ಣದ ಫೋಟೋ ಆಕರ್ಷಣೆಯಾದ ಜಿಆರ್‌ಎಸ್ ಸೆಲ್ಫಿ ಫ್ಯಾಕ್ಟರಿಯನ್ನು ಆರಂಭಿಸಿದೆ.

ಈ ಸೌಲಭ್ಯವನ್ನು ಏ. 1ರಂದು ಸಾಫ್ಟ್ ಲಾಂಚ್ ಮಾಡಲಾಗಿದ್ದು, 14ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಸ್ಥಳೀಯ ಇನ್‌ಫ್ಲುಯೆನ್ಸರ್‌ ಗಳು ಭಾಗವಹಿಸಿದ್ದರು.

ಈ ಆಕರ್ಷಣೆ ಜಿಆರ್‌ ಎಸ್ ಸ್ನೋ ಪಾರ್ಕ್‌ಸಮೀಪದ ಸಂಕೀರ್ಣದ ನೆಲಮಹಡಿಯಲ್ಲಿ ತೆರೆಯಲಾಗಿದ್ದು, ಅಮ್ಯೂಸ್‌ ಮೆಂಟ್ ಮತ್ತು ವಾಟರ್‌ ಪಾರ್ಕ್‌ಗಳಿಂದ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಹೊಂದಿದೆ. ಭೇಟಿ ನೀಡುವವರು ಫ್ಯಾಂಟಸಿ ಪಾರ್ಕ್‌ ಗೆ ಪ್ರವೇಶಿಸದೆ ಇದನ್ನು ಉಪಯೋಗಿಸಬಹುದು.

ಇಲ್ಲಿ ಇರುವ 20ಕ್ಕೂ ಹೆಚ್ಚು ಸೆಟ್‌ ಗಳಲ್ಲಿ ನಿಯಾನ್ ಡ್ರೀಮ್ಸ್, ಟ್ರಾಪಿಕಲ್ ಪ್ಯಾರಡೈಸ್, ಮಿಸ್ಟಿಕ್ ಲೈಟ್ಸ್ ಮತ್ತು ವಿಂಟೇಜ್ ವೈಬ್ಸ್ ಮೊದಲಾದವು ಸೇರಿವೆ. ಪ್ರತಿಯೊಂದು ಸೆಟ್‌ ಪ್ರತ್ಯೇಕ ಹಿನ್ನೆಲೆಯೊಂದಿಗೆ ವಿನ್ಯಾಸ ಗೊಳಿಸಲಾಗಿದೆ. ಅದೇ ಸ್ಥಳದಲ್ಲಿ ವಿಂಟೇಜ್ ವೋಕ್ಸ್‌ ವ್ಯಾಗನ್ ವ್ಯಾನ್ ಒಳಗೆ ನಿರ್ಮಿಸಲಾದ ಇನ್ ಹೌಸ್ ಕಾಫೆ ಕೂಡ ಕಾರ್ಯನಿರ್ವಹಿಸುತ್ತದೆ. ಈ ಸ್ಥಳದಲ್ಲಿ ಪ್ರತಿ ಗಂಟೆಗೆ ಸುಮಾರು 100 ಮಂದಿ ಭೇಟಿ ನೀಡಬಹುದು. ಈ ಸೌಲಭ್ಯಕ್ಕಾಗಿ ವಿಶೇಷವಾಗಿ 10 ಮಂದಿ ಸಿಬ್ಬಂದಿ ನೇಮಿಸಲಾಗಿದೆ. ಇದು ವಾರದ ದಿನಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 7ರವರೆಗೆ ಮತ್ತು ವಾರಾಂತ್ಯದಲ್ಲಿ ರಾತ್ರಿ 8 ರವರೆಗೆ ತೆರೆದಿರುತ್ತದೆ. ಆರಂಭದಲ್ಲಿ 199 ರೂ. ದರದಲ್ಲಿ ಟಿಕೆಟ್‌ನೀಡಲಾಗುತ್ತಿತ್ತು, ಆದರೆ ಕೆಲವು ವಾರಗಳ ನಂತರ 299 ರೂ.ಗೆ ಪರಿಷ್ಕರಿಸಲಾಗಿದೆ.

ಮೈಸೂರಿನ ಜನರು ಹಾಗೂ ಪ್ರವಾಸಿಗರಿಗೆ ನೆನಪು ಗಳನ್ನು ಸೃಷ್ಟಿಸಲು ವಿಶೇಷ ಸ್ಥಳ ಒದಗಿಸುವ ಉದ್ದೇಶದಿಂದ ನಾವು ಸುಮಾರು 1 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇದರ ಹೆಸರು ಜಿಆರ್‌ಎಸ್ ಸೆಲ್ಫಿ ಫ್ಯಾಕ್ಟರಿ ಆಗಿದ್ದರೂ, ನಾವು ನಿರ್ಮಿಸಿರುವುದು ಕೇವಲ ಒಬ್ಬರ ಫೋಟೋಗಳಿಗೆ ಮಾತ್ರವಲ್ಲ, ಕುಟುಂಬಗಳಿಗೂ ಹೊಂದುವಂತಹ ಸ್ಥಳ. ಮೊದಲ ಮೂರು ವಾರಗಳಲ್ಲಿ ಮದುವೆ ಫೋಟೋಶೂಟ್ ಹಾಗೂ ಶಿಶು ಫೋಟೋಶೂಟ್‌ ಗಳಿಗಾಗಿ ಈಗಾಗಲೇ ಬುಕಿಂಗ್ ಪಡೆದಿರುವುದಾಗಿ ಸಂಸ್ಥೆ ತಿಳಿಸಿದೆ. ಪ್ರತಿಯೊಂದು ಆಕರ್ಷಣೆಗೂ ಪ್ರತ್ಯೇಕ ಟಿಕೆಟ್ ವ್ಯವಸ್ಥೆಯಿದ್ದು, ಹಲವು ಆಕರ್ಷಣೆಗಳನ್ನು ಒಳಗೊಂಡ ಕಡಿತ ದರದ ಕಾಂಬೋ ಟಿಕೆಟ್‌ಗಳು https://grs.fun/ ನಲ್ಲಿ ಲಭ್ಯವಿವೆ.

Key words: Selfie Factory, GRS Fantasy Park, Mysore

 

The post ಮೈಸೂರು GRS ಫ್ಯಾಂಟಸಿ ಪಾರ್ಕ್ ನಲ್ಲಿ  20ಕ್ಕೂ ಹೆಚ್ಚು ಥೀಮ್ಡ್ ಸೆಟ್ ಸೆಲ್ಫಿ ಫ್ಯಾಕ್ಟರಿ ಆರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಜಯಭೇರಿ

ದಾವಣಗೆರೆ,ಮೇ,4,2026 (www.justkannada.in): ಬಹಳ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ...

ಅಂಚೆ ಮತ ಮರು ಎಣಿಕೆ : ಶಾಸಕ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿಯ ಡಿ.ಎನ್‌ ಜೀವರಾಜ್

ಚಿಕ್ಕಮಗಳೂರು,ಮೇ,4,2026 (www.justkannada.in):  ಹೈಕೋರ್ಟ್‌ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ...

ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಮೇ,4,2026 (www.justkannnada.in): ದುರಾಡಳಿತ, ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಗಾಂಧಿ ಕುಟುಂಬಕ್ಕೆ ಒತ್ತು...

ಮೈಸೂರು: ಮೇ 8ರಿಂದ ಚರಕದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ

ಮೈಸೂರು,ಮೇ,4,2026 (www.justkannada.in): ಇಲ್ಲಿನ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ರಸ್ತೆಯಲ್ಲಿನ ಜಗನ್ನಾಥ್...