ಮೈಸೂರು,ಜುಲೈ,7,2026 (www.justkannada.in): ರಾಜ್ಯ ಸರ್ಕಾರ ಎಸ್ ಐಆರ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ-ಜೆಡಿಎಸ್ ನಾಯಕರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಯತೀಂ ದ್ರ ಸಿದ್ದರಾಮಯ್ಯ, ಎಸ್ ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕೇಂದ್ರ ಸರ್ಕಾರ. ಅವರು ಪ್ರತಿಯೊಂದನ್ನ ಸೂಪರ್ ವೈಸ್ ಮಾಡುತ್ತಾರೆ. ಆದರೂ ಕೂಡ ಸುಖಾ ಸುಮ್ಮನೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಜೆಡಿಎಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ದೂರುಗಳಿಗೆ ರಾಜ್ಯ ಚುನಾವಣೆ ಆಯೋಗ ಬೆಲೆ ಕೊಡಲ್ಲ ಎಂದು ತಿರುಗೇಟು ನೀಡಿದರು.
ನಗರಾಭಿವೃದ್ಧಿ ಸಚಿವ ಸ್ಥಾನದಿಂದ ಯತೀಂದ್ರ ಸಿದ್ದರಾಯ್ಯ ಕೈ ಬಿಡಬೇಕೆಂದು ಸಿಎಂಗೆ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಮುಡಾ ಕೇಸ್ ಲೋಕಾಯುಕ್ತದಿಂದ ಸಂಪೂರ್ಣ ತನಿಖೆ ಆಗಿದೆ. ತನಿಖೆ ರಿಪೋರ್ಟ್ ಕೂಡ ಸಲ್ಲಿಸಲಾಗಿದೆ. ಜನಪ್ರತಿನಿಧಿನಗಳ ನ್ಯಾಯಾಲಯವು ಇದನ್ನ ಒಪ್ಪಿದೆ. ಹೀಗಿದ್ದರೂ ಹೈಯರ್ ಅಪಿಲ್ ಹೋಗಿದ್ದಾರೆ. ತನಿಖೆ ಪೂರ್ಣಗೊಂಡಿರುವುದರಿಂದ ನಾವು ಪ್ರಭಾವ ಬೀರಲು ಸಾಧ್ಯವಿಲ್ಲ. ಇವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ಸಿದ್ದರಾಮಯ್ಯರನ್ನ ಕಡೆಗಣಿಸುವ ಪ್ರಶ್ನೆ ಇಲ್ಲ
ಪಕ್ಷದಲ್ಲಿ ಸಿದ್ದರಾಮಯ್ಯ ಕಡೆಗಣನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯರನ್ನ ಕಡೆಗಣಿಸುವ ಪ್ರಶ್ನೆ ಇಲ್ಲ. ಬ್ಯಾನರ್ ಹಾಕಿಲ್ಲ ಪೋಸ್ಟರ್ ಹಾಕಿಲ್ಲ ಅನ್ನೋ ವಿಚಾರಕ್ಕೆ ನಮ್ಮ ತಂದೆ ತಲೆ ಕೆಡಿಸಿಕೊಳ್ಳೋರಲ್ಲ ಎಂದರು.
Key words: SIR, BJP, JDS, Election Commission, Minister, Yathindra Siddaramaiah
The post ರಾಜಕೀಯ ಪ್ರೇರಿತ ದೂರುಗಳಿಗೆ ಚು.ಆಯೋಗ ಬೆಲೆ ಕೊಡಲ್ಲ-ಸಚಿವ ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




