2
July, 2026

A News 365Times Venture

2
Thursday
July, 2026

A News 365Times Venture

ರಾಜ್ಯದಲ್ಲಿ ತೀವ್ರ ಬರ: ಜಲಾಶಯಗಳು ತುಂಬುವವರೆಗೆ ರೈತರು ಬೆಳೆ ಬೆಳೆಯಬೇಡಿ- ಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಜುಲೈ,2,2026 (www.justkannda.in):  ರಾಜ್ಯದಲ್ಲಿ ತೀವ್ರ ಬರ ಇದೆ, ನೀರು ವಿದ್ಯುತ್ ಗೆ ಅಭಾವ ಇದೆ.  ಹೀಗಾಗಿ ರೈತರು ಮಳೆ ನೀರು ನಂಬಿಕೊಂಡು ಬೆಳೆ ಬೆಳೆಯಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ವಿದ್ಯುತ್ ಅಭಾವ ತಪ್ಪಿಸಲು ಪರ್ಯಾಯದತ್ತ ಗಮನಹರಿಸಬೇಕಿದೆ.  ಬರಪೀಡಿತ ಪ್ರದೇಶಗಳಿಗೆ ನಾನು ಭೇಟಿ ಕೊಡುತ್ತೇನೆ. ರಾಜ್ಯದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ. ನೀರಿಲ್ಲ ಹೀಗಾಗಿ  ರೈತರು ಮಳೆ ನೀರು ನಂಬಿಕೊಂಡು ಬೆಳೆ ಬೆಳೆಯಬೇಡಿ. ಜಲಾಶಯ ತುಂಬುವವರೆಗೆ ರೈತರು ಬೆಳೆ ಬೆಳೆಯಲು ಹೋಗಬೇಡಿ ಎಂದರು.

ಈ ಬಾರಿ ಇಡೀ ದೇಶದಲ್ಲಿಯೇ ಭೀಕರ ಬರಗಾಲ ಇದೆ. ಪ್ರಧಾನಿ ನರೇಂದ್ರ  ಮೋದಿ ಕೂಡ ಸೂಚನೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಗೆ 40% ರಾಜ್ಯದಿಂದ ಕೊಡಬೇಕು.  ರಾಜ್ಯದಿಂದ ಪ್ರತಿರೋಧವಿದೆ.  ಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದೇವೆ ಆದರೂ ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

Key words: Severe drought, Farmers, crops, CM, DK Shivakumar

The post ರಾಜ್ಯದಲ್ಲಿ ತೀವ್ರ ಬರ: ಜಲಾಶಯಗಳು ತುಂಬುವವರೆಗೆ ರೈತರು ಬೆಳೆ ಬೆಳೆಯಬೇಡಿ- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಂಡೆ ಕುಸಿದು 7 ಕಾರ್ಮಿಕರ ಸಾವು ಕೇಸ್: ಕ್ವಾರಿ ಮಾಲೀಕರ ವಿರುದ್ದ FIR

ಬೆಂಗಳೂರು ದಕ್ಷಿಣ,ಜುಲೈ,2,2026 (www.justkannada.in):   ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಂಡೆ...

ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್:  ಶೇ12.5 ರಷ್ಟು ವೇತನ ಹೆಚ್ಚಳ

ಬೆಂಗಳೂರು,ಜುಲೈ,2,2026 (www.justkannada.in):  ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು ವೇತನ...

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಸಚಿವಾಲಯದ ಕಚೇರಿ ಉದ್ಘಾಟನೆ

ಬೆಂಗಳೂರು, ಜುಲೈ,2,2026 (www.justkannada.in):  ನಗರಾಭಿವೃದ್ಧಿ ಸಚಿವ  ಡಾ. ಯತೀಂದ್ರ ಸಿದ್ದರಾಮಯ್ಯ ಅವರು...

52 ಕ್ರಿಮಿನಲ್ ಕೇಸ್ ಗಳನ್ನ ಹಿಂಪಡೆಯುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ

ಬೆಂಗಳೂರು,ಜುಲೈ,2,2026 (www.justkannada.in): 52 ಕ್ರಿಮಿನಲ್ ಪ್ರಕರಣಗಳನ್ನ ಹಿಂಪಡೆಯುವ  ರಾಜ್ಯ ಸರ್ಕಾರದ ಕ್ರಮಕ್ಕೆ...