ಬೆಂಗಳೂರು,ಮೇ,28,2026 (www.justkannada.in): ಮುಖ್ಯಮಂತ್ರಿ ಸ್ಥಾನ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ವಿದಾಯದ ಮಾತುಗಳನ್ನಾಡಿದ ಸಿದ್ದರಾಮಯ್ಯ ಈ ವೇಳೆ ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ ಆದಾಯದ ಕೊರತೆಗೆ ಕೇಂದ್ರ ಸರ್ಕಾರ ಕಾರಣ. ರಾಜ್ಯದ ಹಣಕಾಸು ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ. ರಾಜ್ಯದ ಅಭಿವೃದ್ದಿ ಬಗ್ಗೆ ಕೇಂದ್ರ ನುಡಿದಂತೆ ನಡೆದಿಲ್ಲ. 15 ಹಣಕಾಸು ಆಯೋಗದ ಪ್ರಕಾರ ಕೇಂದ್ರ ಹಣ ನೀಡುತ್ತಿಲ್ಲ. ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ ಸಂಕಷ್ಟ ಉಂಟಾಗಿದೆ ಎಂದರು. ಹಾಗೆಯೇ ನಾನು ಹಣಕಾಸು ನಿಯಮದ ಅನುಸಾರವೇ ಸಾಲ ಮಾಡಿದ್ದೇನೆ ತಿಳಿಸಿದರು.
ಗ್ಯಾರಂಟಿ ಘೋಷಿಸಿದಾಗ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಲು ಆಗಲ್ಲ ಎಂದು ಹೇಳಿದ್ದರು. ಅಭಿವೃದ್ದಿಗೆ ದುಡ್ಡು ಇರಲ್ಲಅಭಿವೃದ್ದಿ ಕೆಲಸ ಆಗಲ್ಲ. ರಾಜ್ಯ ದಿವಾಳಿಯಾಗುತ್ತೆ ಎಂದು ಟೀಕಿಸಿದ್ದರು. ಆದರೆ ಗ್ಯಾರಂಟಿ ಜಾರಿ ಮಾಡಿದ ಮೇಲೆ ತಲಾ ಆದಾಯದಲ್ಲಿ ನಾವು ನಂ.1. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಬಿಜೆಪಿಗೆ ಚಾಟಿ ಬೀಸಿದರು.
Key words: Central government, state, revenue, Siddaramaiah
The post ರಾಜ್ಯದ ಆದಾಯದ ಕೊರತೆಗೆ ಕೇಂದ್ರವೇ ಕಾರಣ- ವಿದಾಯದ ಮಾತುಗಳನ್ನಾಡುತ್ತಲೇ ಸಿದ್ದರಾಮಯ್ಯ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




