29
August, 2026

A News 365Times Venture

29
Saturday
August, 2026

A News 365Times Venture

ರಾಜ್ಯದ 101 ತಾಲ್ಲೂಕುಗಳು ಬರಪೀಡಿತ – ಡಿಸಿಎಂ ಪರಮೇಶ್ವರ್ ಘೋಷಣೆ

Date:

ಬೆಂಗಳೂರು,ಆಗಸ್ಟ್,27,2026 (www.justkannada.in): ರಾಜ್ಯದ 101 ತಾಲ್ಲೂಕುಗಳು ಬರಪೀಡಿತ ಎಂದು ಕಂದಾಯ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಘೋಷಣೆ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಡಿಸಿಎಂ ಪರಮೇಶ್ವರ್, ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ.  ಜೂನ್ 1 ರಿಂದ ಈವರೆಗೆ 666 ಮೀ.ಮೀ ಮಳೆಯಾಗಬೇಕಿತ್ತು . ಈಗ ಆಗಿರುವುದು 464 ಮಿ.ಮೀ ಮಳೆ ಮಾತ್ರ. ಒಳನಾಡು ಕರ್ನಾಟಕದಲ್ಲಿಶೇ. 33 ರಷ್ಟು ಮಳೆ ಕಡಿಮೆ ಆಗಿದೆ.  ದಕ್ಷಿಣ ಒಳನಾಡಿನಲ್ಲಿ 41%  ಕರವಳಿಯಲ್ಲಿ 24% ಮಳೆ ಕೊರತೆಯಾಗಿದೆ.  190 ತಾಲ್ಲೂಕಗಳಲ್ಲಿ ಮಳೆ ಕೊರತೆಯಾಗಿದೆ. 13 ತಾಲ್ಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದರು.

ರಾಜ್ಯದ 101 ತಾಲ್ಲೂಕು ಬರಪೀಡಿತ ಎಂದು ಗುರುತಿಸಲಾಗಿದೆ.  ಡಿಸಿಗಳ ವರದಿ ಅನ್ವಯ 101 ತಾಲ್ಲೂಕು ಗುರುತಿಸಲಾಗಿದೆ.  134 ತಾಲ್ಲೂಕುಗಳಲ್ಲೂ ಬರ ಎಂದು ಘೋಷಿಸಲು ಪೂರಕ ಅಂಶಗಳಿವೆ.  134 ತಾಲ್ಲೂಕುಗಳಿಗೂ ಟೀಮ್ ಕಳುಹಿಸಲಾಗಿತ್ತು.  89 ತಾಲ್ಲೂಕುಗಳಲ್ಲಿ ತೀವ್ರ ಬರ, 12 ತಾಲ್ಲೂಕುಗಳಲ್ಲಿ ಸ್ವಲ್ಪ ಬರ ಇದೆ ಎಂದು ಪರಮೇಶ್ವರ್ ತಿಳಿಸಿದರು.

ಬರ ಪರಿಹಾಕ್ಕಾಗಿ ಕೇಂದ್ರದ ಮೊರ ಹೋಗಲಿದ್ದೇವೆ. ಕೇಂದ್ರ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

Key words:  101 taluks, state, drought-affected, DCM, Parameshwar

The post ರಾಜ್ಯದ 101 ತಾಲ್ಲೂಕುಗಳು ಬರಪೀಡಿತ – ಡಿಸಿಎಂ ಪರಮೇಶ್ವರ್ ಘೋಷಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾನವ–ಆನೆ ಸಂಘರ್ಷ, ಕಸ್ತೂರಿ ರಂಗನ್ ವರದಿ ಅನುಷ್ಠಾನ: ಸಮಗ್ರ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್

ಬೆಂಗಳೂರು/ಮೈಸೂರು, ಆಗಸ್ಟ್, 28, 2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ...

ಶಿಕ್ಷಕರ ದಿನಾಚರಣೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆ: ಅಧಿಕಾರಿಗಳಿಗೆ ಅಗತ್ಯ ಸೂಚನೆ

ಬೆಂಗಳೂರು, ಆಗಸ್ಟ್,28,2026 (www.justkannada.in):   ಸೆಪ್ಟೆಂಬರ್ 5ರಂದು ಆಯೋಜಿಸಲಾಗಿರುವ ರಾಜ್ಯ ಮಟ್ಟದ ಶಿಕ್ಷಕರ...

ನನ್ನಿಂದ ಪಕ್ಷಕ್ಕೆ ಮುಜುಗರವಾದ್ರೆ ರಾಜೀನಾಮೆ ಕೊಡ್ತೀನಿ- ಸಚಿವ ಬಿ. ನಾಗೇಂದ್ರ

ಬೆಂಗಳೂರು,ಆಗಸ್ಟ್,28,2026 (www.justkannada.in): ನನ್ನಿಂದ ಪಕ್ಷಕ್ಕೆ ಮುಜುಗರವಾದರೆ ರಾಜೀನಾಮೆ ಕೊಡುತ್ತೇನೆ ಎಂದು ಸಚಿವ...

ಮಂಡ್ಯಕ್ಕೆ ಜಪಾನ್‌ ನಿಯೋಗ ಭೇಟಿ: HPV, TT ಲಸಿಕಾ ಅಭಿಯಾನಕ್ಕೆ ಮೆಚ್ಚುಗೆ.

  ಕೆ.ಶೆಟ್ಟಿಹಳ್ಳಿ ಆರೋಗ್ಯ ಕೇಂದ್ರದ ಕಾರ್ಯವೈಖರಿಗೆ ಜಪಾನ್‌ ತಂಡ ಮೆಚ್ಚುಗೆ — ಹೊಸ...