26
September, 2026

A News 365Times Venture

26
Saturday
September, 2026

A News 365Times Venture

ರಾಜ್ಯಪಾಲರಿಂದ ಪ್ರೊ. ಜಿ. ಹೇಮಂತ ಕುಮಾರ್ ಅವರ ಎರಡು ಕೃತಿಗಳ ಲೋಕಾರ್ಪಣೆ

Date:

 

ಮೈಸೂರು,SEP.25,2026: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್ ಅವರ ಕುರಿತ ಎರಡು ಕೃತಿಗಳನ್ನು ಕರ್ನಾಟಕದ ರಾಜ್ಯಪಾಲರು ಲೋಕಾರ್ಪಣೆ ಮಾಡಿದರು.

‘ಜ್ಞಾನ ದೇಗುಲದಲ್ಲಿ’ ಹಾಗೂ ‘ಹೇಮಂತ’ ಎಂಬ ಎರಡು ಕೃತಿಗಳು ಇದೀಗ ಓದುಗರ ಕೈ ಸೇರಿವೆ.

‘ಜ್ಞಾನ ದೇಗುಲದಲ್ಲಿ’ ಕೃತಿಯು ಪ್ರೊ. ಹೇಮಂತ ಕುಮಾರ್ ಅವರು ವಿವಿಧ ಸಂದರ್ಭಗಳಲ್ಲಿ ನೀಡಿದ ಭಾಷಣಗಳ ಸಂಕಲನವಾಗಿದ್ದು, ಉನ್ನತ ಶಿಕ್ಷಣ, ವಿಶ್ವವಿದ್ಯಾನಿಲಯಗಳ ಜವಾಬ್ದಾರಿ, ಸಂಶೋಧನೆ, ಜ್ಞಾನ, ವಿದ್ಯಾರ್ಥಿಗಳು ಮತ್ತು ಯುವಜನತೆ ಸೇರಿದಂತೆ ಹಲವು ವಿಷಯಗಳ ಕುರಿತ ಅವರ ಚಿಂತನೆಗಳನ್ನು ಒಳಗೊಂಡಿದೆ.

ವಿಶ್ವವಿದ್ಯಾನಿಲಯಗಳು ಕೇವಲ ಪದವಿ ನೀಡುವ ಸಂಸ್ಥೆಗಳಾಗದೆ, ಜ್ಞಾನ ಸೃಷ್ಟಿ, ಸಂಶೋಧನೆ ಹಾಗೂ ಸಮಾಜಮುಖಿ ಚಿಂತನೆಗೆ ವೇದಿಕೆಯಾಗಬೇಕು ಎಂಬ ಅವರ ಆಶಯಗಳು ಕೃತಿಯಲ್ಲಿ ಪ್ರತಿಬಿಂಬಿಸಿವೆ.

ಇನ್ನು ‘ಹೇಮಂತ’ ಕೃತಿಯು ಪ್ರೊ. ಹೇಮಂತ ಕುಮಾರ್ ಅವರೊಂದಿಗೆ ಒಡನಾಡಿದ ಗಣ್ಯರು, ಶಿಕ್ಷಣ ತಜ್ಞರು, ಸಹೋದ್ಯೋಗಿಗಳು ಹಾಗೂ ಆತ್ಮೀಯರು ಬರೆದಿರುವ ಲೇಖನಗಳು ಮತ್ತು ಅನುಭವಗಳ ಸಂಕಲನವಾಗಿದೆ. ಒಂದು ಕೃತಿಯಲ್ಲಿ ಪ್ರೊ. ಹೇಮಂತ ಕುಮಾರ್ ಅವರ ಸ್ವಂತ ಚಿಂತನೆಗಳು ಮತ್ತು ವಿಚಾರಧಾರೆ ದಾಖಲಾಗಿದ್ದರೆ, ಮತ್ತೊಂದು ಕೃತಿಯಲ್ಲಿ ಅವರೊಂದಿಗೆ ಒಡನಾಡಿದವರ ಅನುಭವಗಳು ಮತ್ತು ನೆನಪುಗಳ ಮೂಲಕ ವ್ಯಕ್ತಿತ್ವ ಪರಿಚಯ ಮಾಡಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿರುವ ಪ್ರೊ. ಜಿ. ಹೇಮಂತ ಕುಮಾರ್ ಅವರ ದೀರ್ಘಕಾಲದ ಶೈಕ್ಷಣಿಕ ಬದುಕಿನ ಹಲವು ಆಯಾಮಗಳನ್ನು ಈ ಎರಡು ಕೃತಿಗಳು ದಾಖಲಿಸಿವೆ.

ಒಂದರಲ್ಲಿ ಅವರ ಮಾತುಗಳು… ಮತ್ತೊಂದರಲ್ಲಿ ಅವರೊಂದಿಗೆ ಒಡನಾಡಿದವರ ಮಾತುಗಳು. ಈ ವಿಭಿನ್ನ ಸ್ವರೂಪದ ಎರಡು ಕೃತಿಗಳ ಲೋಕಾರ್ಪಣೆ ಪ್ರೊ. ಹೇಮಂತ ಕುಮಾರ್ ಅವರ ಶೈಕ್ಷಣಿಕ ಬದುಕಿನ ಪ್ರಮುಖ ದಾಖಲೆಯಾಗಿ ಗಮನ ಸೆಳೆದಿದೆ.

ಕಾರ್ಯಕ್ರಮದಲ್ಲಿ ಡಾ. ಚೇತನ್‌ ಹೆಚ್.ಕೆ, ಜಂಟಿ ಕಾರ್ಯದರ್ಶಿ, ಎಂ.ಐ.ಟಿ, ಮೈಸೂರು,  ಡಾ. ಸತೀಶ್ ಚೆಟ್ಟಿ, ಪ್ರಾಧ್ಯಾಪಕರು, ಮ್ಯಾನೇಜ್‌ಮೆಂಟ್ ವಿಭಾಗ, ದೇವಿ ಅಹಲ್ಯ ವಿಶ್ವವಿದ್ಯಾಲಯ, ಇಂದೋರ್, ಮಧ್ಯ ಪ್ರದೇಶ; ಡಾ. ಸಿ. ನಾಗಣ್ಣ, ವಿಶ್ರಾಂತ ಪ್ರಾಧ್ಯಾಪಕರು, ಕನ್ನಡ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು; ನಾಡೋಜ ಡಾ. ಭಾಶ್ಯಂ ಸ್ವಾಮೀಜಿ, ಸಂಸ್ಥಾಪಕರು, ಯೋಗನರಸಿಂಹಸ್ವಾಮಿ ದೇವಸ್ಥಾನ, ಮೈಸೂರು; ಹಾಗೂ ಡಾ. ಶ್ರೀನಿವಾಸ್, ಸಹ-ಸಂಸ್ಥಾಪಕರು, ಯೋಗನರಸಿಂಹಸ್ವಾಮಿ ದೇವಸ್ಥಾನ, ಮೈಸೂರು ಉಪಸ್ಥಿತರಿದ್ದರು.

KEY WORDS:

Prof. G. Hemanth Kumar, Mysuru University, Former Vice-Chancellor, Karnataka Governor, Jnana DeguladalLi, book, Mysuru University, Higher Education, University Education, Mysuru News

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

CPC ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆಗಳು ಆರಂಭ.

​ಬೆಂಗಳೂರು, ಸೆಪ್ಟೆಂಬರ್, 25,2026 (www.justkannada.in):  ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್...

ಮಹೇಂದ್ರ ಬಾಹುಬಲಿ” ಅಂಬಾರಿ ತಾಲೀಮಿಗೆ ವರುಣನ ಅಡ್ಡಿ

ಮೈಸೂರು, ಸೆಪ್ಟಂಬರ್‌,25, 2026 (www.justkannada.in) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಗಜಪಡೆಗೆ...

ದಸರಾಗೆ ಈ ಬಾರಿ ‘ಕೋಣಗಳ ಪಯಣ’!

ಮೈಸೂರು, ಸೆಪ್ಟಂಬರ್‌,25, 2026(www.justkannada.in) ಮೈಸೂರು ದಸರಾ ಎಂದರೆ ಗಜಪಡೆಗಳ ಗಜಪಯಣ, ಅಂಬಾರಿ...

ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆ 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ- ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್‌,.25,2026 (www.justkannada.in) ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರ...