22
May, 2026

A News 365Times Venture

22
Friday
May, 2026

A News 365Times Venture

ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್

Date:

ಮೈಸೂರು,ಮೇ,21,2026 (www.justkannada.in): ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಇಂಪ್ರೆಷನ್ 2026 ಮಾಧ್ಯಮಹಬ್ಬದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಉತ್ಸವದಲ್ಲಿ ರಾಜ್ಯಾದ್ಯಂತ ಸುಮಾರು 15 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ 300 ಕ್ಕೂ ಹೆಚ್ಚು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಚರ್ಚಾಸ್ಪರ್ಧೆಯಲ್ಲಿ ಬಸವರಾಜ್ ಬಿಂಗಿ ಮತ್ತು ಹಿತೇಶ್ ಪ್ರಥಮ ಸ್ಥಾನ, ರೇಡಿಯೋ ಜಾಕಿ ರೂಪ ದ್ವಿತೀಯ ಸ್ಥಾನ, ಫೋಟೋಗ್ರಫಿ ಹಿತೇಶ್ ಮತ್ತು ರಕ್ಷಿತಾ ಪ್ರಥಮ ಸ್ಥಾನ, ಪುಟ್ಟಕಥೆ ಮತ್ತು ಪಿ.ಟಿ.ಸಿ ಯಲ್ಲಿ ಇಂಚರ, ಗುಂಪು ಸ್ಪರ್ಧೆ ಮ್ಯಾಡ್ ಆಡ್ ನಲ್ಲಿ ಸ್ಪಂದನಾ, ರಮೇಶ್, ಶಶಿ, ರಾಹುಲ್, ಚರಣ್ ಪ್ರಥಮ ಸ್ಥಾನ ಪಡೆದು ಒಟ್ಟಾರೆಯಾಗಿ ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಸಂಯೋಜಕರಾದ ಡಾ.ಸಂಜಯ್ .ಬಿ.ಸಿ, ಸಂಶೋಧಕ ಅಭಿಷೇಕ್ ಪಾಳ್ಯಗಾರ್ ಅವರನ್ನು ವಿಭಾಗದ ಮುಖ್ಯಸ್ಥ  ಪ್ರೊ.ಎನ್ ಮಮತ ,ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್ ಸಪ್ನ ಅಭಿನಂದಿಸಿದರು.

Key words: State-level. Impression, Media Festival, Mysore University, students

The post ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾಧ್ಯಮ‌ ಸಲಹೆಗಾರ ಹೊಣೆಗಾರಿಕೆ ಹೂವಿನ‌ ಹಾದಿ ಅಲ್ಲ, ಮುಳ್ಳಿನ ಹಾಸಿಗೆ-ಕೆ.ವಿ.ಪ್ರಭಾಕರ್

ಬೆಂಗಳೂರು,ಮೇ,22,2026 (www.justkannada.in): ಮಾಧ್ಯಮ‌ ಸಲಹೆಗಾರ ಹೊಣೆಗಾರಿಕೆ ಹೂವಿನ‌ ಹಾದಿ ಅಲ್ಲ, ಮುಳ್ಳಿನ...

‘ಲಾ ಗೈಡ್‌’ ವತಿಯಿಂದ ವಿದ್ಯಾರ್ಥಿಗಳ ದತ್ತಿ ಪ್ರಶಸ್ತಿಗಾಗಿ 1 ಲಕ್ಷ ರೂ. ಕೊಡುಗೆ

ಮೈಸೂರು,ಮೇ,22,2026 (www.justkannada.in): ಪ್ರೊ ಸಿ.ಕೆ.ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ...

ರಾಜ್ಯದಲ್ಲಿ SIR ಪ್ರಕ್ರಿಯೆ: ಮತದಾರರ ಹಕ್ಕು ತಡೆಯಲು ಸಂಚು- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮೇ,22,2026 (www.justkannada.in):  ರಾಜ್ಯದಲ್ಲಿ ಜೂನ್ 30ರಿಂದ ಎಸ್ ಐಆರ್ ಪ್ರಕ್ರಿಯೆ ನಡೆಯಲಿದ್ದು...

MDA ಮಧ್ಯವರ್ತಿಗಳ ಅಡ್ಡ: RTI ಕಾರ್ಯಕರ್ತರು–ಸಿಬ್ಬಂದಿ ಶಾಮೀಲು ಆರೋಪಕ್ಕೆ ಗಂಗರಾಜು ಪ್ರಕರಣವೇ ಸಾಕ್ಷಿಯೇ.?

  ಮೈಸೂರು, ಮೇ.೨೨,೨೦೨೬ : ಮೈಸೂರು ಅಭಿವೃದ್ಧಿ ಪ್ರಾಧಿಕಾರ ( Mysore  Development...