20
August, 2026

A News 365Times Venture

20
Thursday
August, 2026

A News 365Times Venture

ರೇಣುಕಾಸ್ವಾಮಿ ಕೊಲೆ ಕೇಸ್: ಸತ್ಯಸಂಗತಿ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಒಪ್ಪಿಕೊಂಡ ಆರೋಪಿ

Date:

ಬೆಂಗಳೂರು,ಆಗಸ್ಟ್.20,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯವಾದ ಸಂಗತಿಯನ್ನ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು  ಆರೋಪಿ 14 ಪ್ರದೋಷ್ 59ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.

ಪ್ರಕರಣ ಸಂಬಂಧ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಸಾಕ್ಷ್ಯ ವಿಚಾರಣೆ ಮುಂದುವರಿದಿದ್ದು, ಈ ವೇಳೆ ಎ14 ಆರೋಪಿ ಪ್ರದೋಷ್ ತಾನು ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪಅರ್ಜಿಯ ಗಂಭೀರತೆ ಹಾಗೂ ಅದರಲ್ಲಿರುವ ವಿಷಯಗಳ ಬಗ್ಗೆ ಪ್ರಶ್ನಿಸಿದರು, ‘ಅರ್ಜಿಯಲ್ಲಿ ಏನಿದೆ ಎಂಬುದನ್ನು ಸಂಪೂರ್ಣವಾಗಿ ಓದಿ ಸಹಿ ಮಾಡಿದ್ದೇನೆ. ರೇಣುಕಾಸ್ವಾಮಿ ಹತ್ಯೆ ನಡೆದಾಗ ಅದರಲ್ಲಿ ನನ್ನ ಪಾತ್ರವೇನು ಹಾಗೂ ಇತರೆ ಆರೋಪಿಗಳ ಪಾತ್ರವೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದೇನ  ಎಂದು ಪ್ರದೋಷ್ ಉತ್ತರಿಸಿದ್ದಾರೆ.

ಪ್ರದೋಷ್ ವಿದ್ಯಾಭ್ಯಾಸದ ಬಗ್ಗೆ  ನ್ಯಾಯಾಧೀಶೆ ಸುಜಾತಾ ಅವರ ಪ್ರಶ್ನೆಗೆ ಉತ್ತರಿಸಿದ ಪ್ರದೋಷ್,  ‘ನಾನು ಎಂಬಿಎ ಫೈನಾನ್ಸ್ ಓದಿದ್ದು, ಇಂಗ್ಲಿಷ್ ಓದಲು ಮತ್ತು ಬರೆಯಲು ಬರುತ್ತದೆ. ಘಟನೆಗೂ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.

ಯಾರದ್ದಾದರೂ ಪ್ರಭಾವ ಇದೆಯೇ ಹಾಗೂ ಸತ್ಯವನ್ನು ಹೇಳುತ್ತೀರಾ’ ಎಂದು ಜಡ್ಜ್ ಕೇಳಿದ ಪ್ರಶ್ನೆಗೆ, ‘ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೇ ಈ ಅರ್ಜಿ ಸಲ್ಲಿಸುತ್ತಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ ಸತ್ಯವಾದ ಸಂಗತಿಗಳನ್ನು ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಪ್ರದೋಷ್  ತಿಳಿಸಿದರು. ಪ್ರದೋಷ್ ನೀಡಿದ ಎಲ್ಲಾ ವಿವರಣೆಗಳನ್ನು ದಾಖಲಿಸಿಕೊಂಡ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು, ಪ್ರಕರಣದ ಮುಂದಿನ ಸಾಕ್ಷ್ಯ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿಕೆ ಮಾಡಿದರು.

Key words: Renukaswamy, murder case, Accused, 100% truth, Court

The post ರೇಣುಕಾಸ್ವಾಮಿ ಕೊಲೆ ಕೇಸ್: ಸತ್ಯಸಂಗತಿ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಒಪ್ಪಿಕೊಂಡ ಆರೋಪಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಸಹಾಯ ಮಾಡುವೆ: ಸಚಿವ ಮಧು ಬಂಗಾರಪ್ಪ ಭರವಸೆ

ಬೆಂಗಳೂರು, ಆಗಸ್ಟ್,20,2026 (www.justkannada.in): ರಾಜ್ಯದ ಬಿಸಿಯೂಟ ನೌಕರರ ಪರವಾಗಿ ಎಂದಿಗೂ ನಾನು...

ಆ.26 ರಂದು ಕೆಆರ್ ಎಸ್ ಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ

ಮಂಡ್ಯ,ಆಗಸ್ಟ್,20,2026 (www.justkannada.in):  ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ...

ರಾಜೀವ್‌ ಗಾಂಧಿ, ದೇವರಾಜ ಅರಸು ಅವರ ಆದರ್ಶಗಳನ್ನು ಯುವಜನತೆಗೆ ಹೆಚ್ಚೆಚ್ಚು ಪರಿಚಯಿಸಬೇಕು-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್, 20,2026 (www.justkannada.in):  ಮುತ್ಸದ್ದಿ ನಾಯಕರಾದ ರಾಜೀವ್‌ ಗಾಂಧಿ ಮತ್ತು...

ಒಬಿಸಿ ಆಯೋಗಗಳ ವರದಿ ಜಾರಿಯಲ್ಲಿ ವಿಳಂಬ: ಸಾಮಾಜಿಕ ನ್ಯಾಯಕ್ಕೆ ಎದುರಾಗಿರುವ ಸಂವಿಧಾನಾತ್ಮಕ ಸವಾಲು

ಮೈಸೂರು,ಆಗಸ್ಟ್,20,2026 (www.justkannada.in): ಮಧುಸೂದನ್ ನಾಯಕ್ ವರದಿಯು ಕರ್ನಾಟಕದ ವಿವಿಧ ಹಿಂದುಳಿದ ಸಮುದಾಯಗಳ...