7
May, 2026

A News 365Times Venture

7
Thursday
May, 2026

A News 365Times Venture

ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕ್ ಹಣಕಾಸು ಸಂಸ್ಥೆಗಳಲ್ಲಿರುವ ಸಮಸ್ಯೆ ಬಗೆಹರಿಸಿ- ಕುರುಬೂರು ಶಾಂತಕುಮಾರ್

Date:

ಬೆಂಗಳೂರು,ಮೇ,7,2026 (www.justkannada.in): ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕುಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಹಲವಾರು ಸಮಸ್ಯೆಗಳು ಬಂದಿದ್ದು ಇವುಗಳನ್ನ ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದು  ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಮನವಿ ಮಾಡಿದರು.

ಆರ್ ಬಿಐ ಬೆಂಗಳೂರು ವಲಯದ ಡೆಪ್ಯುಟಿ ಮ್ಯಾನೇಜರ್   ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ರಿಸರ್ವ್ ಬ್ಯಾಂಕ್ ನಿಯಮ ರೈತರನ್ನು  ಬಡವರನ್ನು ಬ್ಯಾಂಕಿನಿಂದ ದೂರ ತಳ್ಳುವ ಕ್ರಮವಾಗಿದೆ . ಸಂಕಷ್ಟ ಕಾಲದಲ್ಲಿ ಕೃಷಿ ಚಟುವಟಿಕೆ. ಮಕ್ಕಳ ವಿದ್ಯಾಭ್ಯಾಸ .ಮದುವೆ. ಆಸ್ಪತ್ರೆ ವೆಚ್ಚ ಮುಂತಾದ ತುರ್ತು ಅಗತ್ಯಗಳಿಗಾಗಿ  ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವ ನಿಯಮಗಳ ಬದಲಾವಣೆ ಮಾಡಿರುವುದು ಖಾಸಗಿ ಫೈನಾನ್ಸ್ ಗಳ ಹಾಗೂ ಮನಿಲೆಂಡರ್ಸಗೆ ಅನುಕೂಲ ಕಲ್ಪಿಸಲಾಗಿದೆ.   ಇದೇ ಏಪ್ರಿಲ್ ಒಂದರಿಂದ ಜಾರಿ ತಂದಿರುವ ರಿಸರ್ವ್ ಬ್ಯಾಂಕ್ ನಿಯಮ ಪಾಲನೆಯಿಂದ ಬ್ಯಾಂಕುಗಳು ರೈತರನ್ನ ಸಂಕಷ್ಟಕ್ಕೀಡು ಮಾಡಿದೆ ಎಂದರು.

ಹೀಗಾಗಿ ಖಾಸಗಿ ಫೈನಾನ್ಸ್ ಗಳು ಸಾಲ ನೀಡಿ ಒಂದೆರಡು ಕಂತಿನ ಹಣ ಪಾವತಿ ನಂತರ 15  ವರ್ಷಗಳ ಸಾಲವನ್ನು 25 ವರ್ಷಗಳ ವಾಯಿದೇ ನವೀಕರಿಸಿಕೊಂಡು ಸಾಲ ನೀಡಿದ್ದೇವೆ ಎಂದು ಗ್ರಾಹಕರಿಗೆ ರೈತರಿಗೆ ಮೋಸ ಮಾಡುತ್ತಿವೆ ಈ ರೀತಿಯ ವಂಚನೆ ನಿಲ್ಲಬೇಕು. ರೈತರಿಗೆ ನೀಡುವ ಎಲ್ಲಾ ಬೆಳೆ ಸಾಲಗಳಿಗೆ ದೀರ್ಘಾವಧಿಯಾಗಿರಬೇಕು.  ರೈತರ ಮಕ್ಕಳು/ಕುಟುಂಬ ಸದಸ್ಯರಿಗೆ ಶೈಕ್ಷಣಿಕ ಸಾಲ ನೀಡುವಾಗ ಯಾವುದೇ ಸಿಬಿಲ್ ಸ್ಕೋರ್ ಪರಿಗಣಿಸಬಾರದು .ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಈಗಾಗಲೇ ಇರುವ ಆರೋಗ್ಯ ವಿಮೆ ಕೃಷಿ ವಿಮೆ ಪರಿಣಾಮಕಾರಿಯಾಗಿ ನಿರ್ವಹಿಸಲು ಸೂಕ್ತ ಯೋಜನೆ ರೂಪಿಸಬೇಕು.  ಸರ್ಕಾರದ ಯೋಜನೆಗಳಿಂದ ಬರುವ ಹಣವನ್ನು ನೈಜ ಫಲಾನುಭವಿಗಳಿಗೆ ನೀಡಬೇಕು ಎಂದು ಕೋರಿದರು.

ಯಾವುದೇ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳಬಾರದು. ಇದನ್ನು ಉಲ್ಲಂಘನೆ ಮಾಡುವಂತಹ ಶಾಖಾ ವ್ಯವಸ್ಥಾಪಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು. ರೈತರಿಗೆ ನೀಡುವ ಬೆಳೆ ಸಾಲ ಹಾಗೂ ಚಿನ್ನಾಭರಣಗಳ ಬೆಲೆ ನೀಡುವ ಸಾಲಕ್ಕೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಬಾರದು. ಎಲ್ಲಾ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಲ್ಲಿ ರೈತರಿಗೆ ನೀಡುವ ಸಾಲವನ್ನು ಫಾರ್ಮರ್ಸ್ ಲೋನ್ ಎಂದು ನಮೂದಿಸಬೇಕು ಎಂದರು.

Key words: problem,  farmers’ financial management, banks, Kuruburu Shanthakumar

The post ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕ್ ಹಣಕಾಸು ಸಂಸ್ಥೆಗಳಲ್ಲಿರುವ ಸಮಸ್ಯೆ ಬಗೆಹರಿಸಿ- ಕುರುಬೂರು ಶಾಂತಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆಧಾರ ರಹಿತ ಆರೋಪ: ಟಿ.ಆರ್ ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ

ಮೈಸೂರು,ಮೇ,5,2026 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ, ಟೆಂಡರ್ ಪ್ರಕ್ರಿಯೆ ಮತ್ತು ಆರ್ಥಿಕ...

ಮಮತಾ ಬ್ಯಾನರ್ಜಿಯಿಂದ ಸಂವಿಧಾನಕ್ಕೆ ಅಗೌರವ: ಸಮಸ್ಯೆ ಇದ್ದರೆ ಕೋರ್ಟ್‌ ಮೊರೆ ಹೋಗಲಿ- ಆರ್‌.ಅಶೋಕ್

ಬೆಂಗಳೂರು, ಮೇ, 7,2026 (www.justkannada.in): ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲ್ಲ ಎನ್ನುವ...

ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆ

ಚೆನ್ನೈ,ಮೇ,7,2026 (www.justkannada.in):  ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆದ್ದು ಬಹುದೊಡ್ಡ...

ಮೋದಿ – ವಿಜಯ್ ಸಾಮ್ಯತೆ: ಸೋಷಿಯಲ್ ಮೀಡಿಯಾ ಶಕ್ತಿಯನ್ನೇ ನಂಬಿದ ಇಬ್ಬರು ನಾಯಕರು!

  ಮೈಸೂರು, ಮೇ.೦೬,೨೦೨೬: ಇತ್ತೀಚಿನ ರಾಜಕೀಯದಲ್ಲಿ ಚುನಾವಣಾ ಪ್ರಚಾರದ ಶೈಲಿ ಸಂಪೂರ್ಣ ಬದಲಾಗಿದೆ....