24
June, 2026

A News 365Times Venture

24
Wednesday
June, 2026

A News 365Times Venture

ಲೆಕ್ಕ ಕೇಳಿದ್ದಕ್ಕೆ ಷಡ್ಯಂತ್ರ ಮಾಡಿ ಉಚ್ಛಾಟಿಸಿದ್ದಾರೆ: ವಚನಾನಂದ ಸ್ವಾಮೀಜಿ

Date:

ದಾವಣಗೆರೆ,ಏಪ್ರಿಲ್,13,2026 (www.justkannada.in):  ಟ್ರಸ್ಟಿಗಳಿಗೆ ಲೆಕ್ಕ ಕೇಳಿದ್ದಕ್ಕೆ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ ಎಂದು ವಚನಾನಂದ  ಸ್ವಾಮೀಜಿ ಕಿಡಿ ಕಾರಿದ್ದಾರೆ.

ಹರಿಹರ ಪಂಚಮಸಾಲಿ ಪೀಠದ ವಚನಾನಂದ  ಸ್ವಾಮೀಜಿಗಳನ್ನು ಉಚ್ಛಾಟನೆ ಮಾಡಲಾಗಿದ್ದು, ಶ್ರೀಗಳ ಉಚ್ಛಾಟನೆಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ವಚನಾನಂದ ಸ್ವಾಮೀಜಿ, ನನ್ನ ಉಚ್ಛಾಟನೆ ಹಾಸ್ಯಾಸ್ಪದ. ಟ್ರಸ್ಟ್ ​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದರು.

ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಪೀಠಾಧ್ಯಕ್ಷರಾದ ಬಳಿಕ ಪೂರ್ವಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಟ್ರಸ್ಟ್​ನ ಸದಸ್ಯರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ತಮ್ಮ ಅವ್ಯವಹಾರ ಮುಚ್ಚಿ ಹಾಕಿಕೊಳ್ಳಲು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. 2008ರಿಂದಲೂ ಪಂಚಮಸಾಲಿ ಗುರುಪೀಠದ ಲೆಕ್ಕವನ್ನು ಕೊಟ್ಟಿಲ್ಲ. ಲೆಕ್ಕ ಕೇಳಿದ್ದಕ್ಕೆ ಈಗ ಷಡ್ಯಂತ್ರ ನಡೆಸಿ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಎಲ್ಲ ತೀರ್ಮಾನವನ್ನು ಭಕ್ತರಿಗೆ ಬಿಡುತ್ತೇನೆ  ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.

Key words: Conspiracy, Expulsion, Vachananananda Swamiji

The post ಲೆಕ್ಕ ಕೇಳಿದ್ದಕ್ಕೆ ಷಡ್ಯಂತ್ರ ಮಾಡಿ ಉಚ್ಛಾಟಿಸಿದ್ದಾರೆ: ವಚನಾನಂದ ಸ್ವಾಮೀಜಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

OC ವಿನಾಯಿತಿ: ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ  ಅರ್ಜಿ ಸಲ್ಲಿಸಲು  ಜುಲೈ 6 ಗಡುವು

ಬೆಂಗಳೂರು,ಜೂನ್,24,2026 (www.justkannada.in):   ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ ( +ಶೇ....

KPMA ಅಡಿ ನೋಂದಣಿಯಾಗದ ಡಿ-ಅಡಿಕ್ಷನ್ ಕೇಂದ್ರಗಳ ವಿರುದ್ಧ ಕ್ರಮ: ಮೈಸೂರು ಡಿ.ಸಿ ಲಕ್ಷ್ಮಿಕಾಂತ್ ರೆಡ್ಡಿ

ಮೈಸೂರು,ಜೂನ್,24,2026 (www.justkannada.in): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವ್ಯಸನ ವಿಮುಕ್ತ ಕೇಂದ್ರಗಳು (De-addiction...

ಅನಿತಾ ಕುಮಾರಸ್ವಾಮಿ ಜಮೀನು ಬಗ್ಗೆ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,24,2026 (www.justkannada.in):  ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಬಳಿ 100...

ಸಂಬಂಧಿ ಮೇಲೆ ಇಡಿ ದಾಳಿ ವಿಚಾರ: ನಾಳೆ ಮಾತನಾಡುತ್ತೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,24,2026 (www.justkannada.in): ತಮ್ಮ ಸಂಬಂಧಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ...