20
August, 2026

A News 365Times Venture

20
Thursday
August, 2026

A News 365Times Venture

ವಂಚನೆ ಪ್ರಕರಣ: ಚಿನ್ನತಂಬಿ ವಿರುದ್ಧ ಮತ್ತೊಂದು FIR

Date:

ಮೈಸೂರು,ಆಗಸ್ಟ್,19,2026 (www.justkannada.in):  ಚಿನ್ನತಂಬಿ @ ಸೌಂದರ್ಯರಾಜು ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ರಾಜಾಜಿನಗರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಯತೀಂದ್ರ ಅವರ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಗೆ ಲೈಂಗಿಕ ಕಿರುಕುಳ ನೀಡುವುದು, ಕೊಲೆ ಬೆದರಿಕೆ ಹಾಕುವುದು, ಆಕೆಯ ಚಿನ್ನವನ್ನು ಕರಗಿಸಿ ಅಕ್ರಮವಾಗಿ ವಶಪಡಿಸಿಕೊಳ್ಳುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಮಹಿಳೆ ಹಾಗೂ ಆಕೆಯ ಅಣ್ಣನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ.

ರೌಡಿಗಳ ಮೂಲಕ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಲಾಗಿದೆ ಹಾಗೂ ಒಂದು ರಾತ್ರಿ ಆರೋಪಿಗಳು ಸೂಚಿಸಿದ ವ್ಯಕ್ತಿಗಳೊಂದಿಗೆ ಕಳೆಯುವಂತೆ ಧಮ್ಕಿ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಆರೋಪಗಳ ಹಿನ್ನೆಲೆಯಲ್ಲಿ ನೊಂದ ಮಹಿಳೆ ನಜರ್ಬಾದ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆರೋಪಗಳು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ, ಮತ್ತಷ್ಟು ಆರೋಪಗಳು ಬೆಳಕಿಗೆ ಬರಲಿವೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Key words: Fraud case,  Another, FIR, against, Chinnathambi

The post ವಂಚನೆ ಪ್ರಕರಣ: ಚಿನ್ನತಂಬಿ ವಿರುದ್ಧ ಮತ್ತೊಂದು FIR appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯಾರ್ಥಿಗಳಿಂದಲೇ ಶಾಲಾ ಪ್ರಿನ್ಸಿಪಾಲ್ ಹತ್ಯೆ

ನಲ್ಗೊಂಡ,ಆಗಸ್ಟ್,20,2026 (www.justkannada.in): ತಂದೆ ತಾಯಿ ಮತ್ತು ಶಿಕ್ಷಕರನ್ನ ದೇವರ ಸಮಾನ ಎಂದು...

ಮುಡಾ ಹಗರಣ: ಎಲ್ಲಾ‌ ಸೈಟ್ ಗಳನ್ನ ರದ್ದು ಮಾಡಿ ದಿಟ್ಟತನ ತೋರಿಸಿ- ಸಾ.ರಾ ಮಹೇಶ್

ಮೈಸೂರು,ಆಗಸ್ಟ್,20,2026 (www.justkannada.in): ಮುಡಾ 50:50 ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ನಗರಾಭಿವೃದ್ಧಿ ಸಚಿವ...

ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ

ಮಹಾಬಲಿಪುರಂ, ಆಗಸ್ಟ್, 20,2026 (www.justkannada.in): “ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು...

KMF ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣ: ನಾಲ್ವರು ಹಿರಿಯ ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು,ಆಗಸ್ಟ್,20,2026 (www.justkannada.in): ಕೆಎಂಎಫ್ ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ...