25
May, 2026

A News 365Times Venture

25
Monday
May, 2026

A News 365Times Venture

ವಯನಾಡು ಕ್ಷೇತ್ರಕ್ಕೆ 10 ಕೋಟಿ ರೂ. ಅನುದಾನ: ಕೇರಳ ಸಿಎಂ ಸಿದ್ದರಾಮಯ್ಯ ಎಂದ ಆರ್.ಅಶೋಕ್

Date:

ಬೆಂಗಳೂರು,ಮಾರ್ಚ್,24,2026 (www.justkannada.in): ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳಂ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಹೆಚ್ಚುವರಿ ವಿಶೇಷ ಅನುದಾನ ನೀಡಿರುವ ಕೇರಳಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಕೇರಳಂ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಕ್ಕುತ್ತಿತ್ತು. ಆದರೆ ನತದೃಷ್ಟ ಕನ್ನಡಿಗರು ಕೇರಳಂನವರಷ್ಟು ಅದೃಷ್ಟವಂತರಲ್ಲ ಬಿಡಿ! ಎಂದು ಸಿಎಂ ಸಿದ್ದರಾಮಯ್ಯಗೆ ಕುಟುಕಿದ್ದಾರೆ.

2025-26ನೇ ಹಣಕಾಸು ವರ್ಷದಲ್ಲಿ ಬಜೆಟ್ ಹೊರತಾಗಿ ವೆಚ್ಚ ಮಾಡಿರುವ ಮತ್ತು ಮಾಡಲಾಗುವ 14,767 ಕೋಟಿ ರೂ. ಮೊತ್ತದ 3ನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜಿನಲ್ಲಿ ವಯನಾಡಿನ ಮುಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ 10 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ.

ಒಂದು ಕಡೆ ನಮ್ಮದೇ ರಾಜ್ಯದಲ್ಲಿ ಕಸ ವಿಲೇವಾರಿ ಮಾಡುವ ಸಂಸ್ಥೆಗಳಿಗೆ, ಸರ್ಕಾರಿ ನೌಕರರ ಸಂಬಳಕ್ಕೆ, ಗುತ್ತಿದೆಗಾರರ ಬಾಕಿ ಪಾವತಿ ಮಾಡಲು ಹಣವಿಲ್ಲ. ಸರ್ಕಾರಿ ಶಾಲೆಗಳ ದುರಸ್ತಿಗೆ, ಸರಿಯಾದ ಸಮಯಕ್ಕೆ ಮಕ್ಕಳ ಪಠ್ಯಪುಸ್ತಕ, ಯುನಿಫಾರ್ಮ್, ಶೂ, ಸಾಕ್ಸ್ ನೀಡಲು ದುಡ್ಡಿಲ್ಲ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳ ಬಿಲ್ ಪಾವತಿಗೆ ಹಣವಿಲ್ಲ. ಶಾಸಕರಿಗೆ ಅನುದಾನವಿಲ್ಲ.

ರಾಜ್ಯದ ಹಣಕಾಸು ಪರಿಸ್ಥಿತಿಯೇ ಇಷ್ಟು ಚಿಂತಾಜನಕವಾಗಿರುವಾಗ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ, ನೆರೆ ರಾಜ್ಯಕ್ಕೆ 10 ಕೋಟಿ ಹೆಚ್ಚುವರಿ ನೆರವು ನೀಡಿರುವ ಸಿಎಂ  ಸಿದ್ದರಾಮಯ್ಯನವರ ನಿರ್ಲಜ್ಜತೆ, ಭಂಡತನಕ್ಕೆ ಅವರೇ ಸಾಟಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Key words: grant, Wayanad constituency, Kerala CM, Siddaramaiah, R. Ashok

The post ವಯನಾಡು ಕ್ಷೇತ್ರಕ್ಕೆ 10 ಕೋಟಿ ರೂ. ಅನುದಾನ: ಕೇರಳ ಸಿಎಂ ಸಿದ್ದರಾಮಯ್ಯ ಎಂದ ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇಂಧನ ಬೆಲೆ ಏರಿಕೆ: ಪ್ರಧಾನಿ ಮೋದಿಯಿಂಧ ಜನಸಾಮಾನ್ಯರ ಲೂಟಿ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ, 25,2026 (www.justkannada.in):  ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ...

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ, 25,2026 (www.justkannada.in):  ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ...

ಬಿಐಎಎಲ್ ನಲ್ಲಿ ಕೆಎಸ್ ಐಐಡಿಸಿಗೆ 16.49 ಕೋಟಿ ರೂ. ಲಾಭಾಂಶ: ಹಸ್ತಾಂತರ

ಬೆಂಗಳೂರು,ಮೇ,25,2026 (www.justkannada.in):  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್) ತನ್ನಲ್ಲಿ...

ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪನೆ: ಟ್ರಾನ್ಸ್‌ ಫಾರ್ಮರ್‌ ಗಳ ತುರ್ತು ನಿರ್ವಹಣೆಗೆ ‘ಸೆಸ್ಕ್‌’ ಸಜ್ಜು

ಮೈಸೂರು, ಮೇ, 25, 2026 (www.justkannada.in):  ಗ್ರಾಹಕರಿಗೆ ಅಡಚಣೆರಹಿತ ವಿದ್ಯುತ್‌ ಪೂರೈಕೆ...