27
July, 2026

A News 365Times Venture

27
Monday
July, 2026

A News 365Times Venture

“ವಿಜಯವಾಣಿ” ಪತ್ರಿಕೆಯ ಈ ಸುದ್ದಿ ಸಂಪೂರ್ಣ ಸುಳ್ಳು: ಡಿಸಿಎಂ ಮಾಧ್ಯಮ ಸಲಹೆಗಾರ

Date:

ಬೆಂಗಳೂರು, ಆ.೧೨,೨೦೨೫: “ಗಣೇಶ ವಿಗ್ರಹ ತಂದದ್ದು ಬಿಜೆಪಿ ಶಾಸಕ, ಪ್ರಧಾನಿಗೆ ಕೊಟ್ಟದ್ದು ಡಿಸಿಎಂ ಡಿ ಕೆ ಶಿವಕುಮಾರ್” ಎಂಬ ಸಾರಾಂಶ ಹೊತ್ತು “ವಿಜಯವಾಣಿ” ಪತ್ರಿಕೆಯಲ್ಲಿ ಪ್ರಕಟವಾಗಿರೋ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಡಿಸಿಎಂ ಮಾಧ್ಯಮ ಸಲಹೆಗಾರ ತ್ಯಾಗರಾಜ್‌ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ತ್ಯಾಗರಾಜ್‌ ಹೇಳಿರುವುದು ಹೀಗೆ….

ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಟ್ರೋಲ್ ಆಗಿದೆ. ಸತ್ಯ, ಅಸತ್ಯ ನೋಡದೇ, ತಲೆಬುಡ ಸೋಸದೇ “ಡಿಸಿಎಂ ಗುರಿ”ಕಾರರು ಈ ಸುದ್ದಿಯನ್ನು ಯದ್ವಾ-ತದ್ವಾ ಹಂಚಿಕೊಂಡಿದ್ದಾರೆ. ಬಾಯಿಗೆ ಬಂದಂತೆ ಟೀಕೆ ಮಾಡಿದ್ದಾರೆ!

ಆದರೆ ವಾಸ್ತವವಾಗಿ ಡಿಸಿಎಂ ಅವರೇ ಈ ಬೆಳ್ಳಿ ಗಣಪತಿ ವಿಗ್ರಹವನ್ನು ಅವರ ಮನೆಯಿಂದ ತೆಗೆದುಕೊಂಡು ಬಂದದ್ದು, ಅವರ ಕಚೇರಿ ಸಿಬ್ಬಂದಿಯೇ ಪ್ರಧಾನಿ ಭದ್ರತೆ ಹೊಣೆ ಹೊತ್ತ ಎಸ್ಪಿಜಿಯವರಿಗೆ ಕೊಟ್ಟು ತಪಾಸಣೆ ನಡೆಸಿದ್ದು, ಎಸ್ಪಿಜಿ ಸಿಬ್ಬಂದಿಯೇ ಈ ವಿಗ್ರಹವನ್ನು ಪ್ರಧಾನಿ ಅವರಿಗೆ ಡಿಸಿಎಂ ಅವರು ನೀಡಲು ನೆರವಾದದ್ದು!!

ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರನಾಗಿ ಈ ಎಲ್ಲಕ್ಕೂ ನಾನು ಪ್ರತ್ಯಕ್ಷ ಸಾಕ್ಷಿ.

ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರೇ ನನಗೆ ದೂರವಾಣಿ ಕರೆ ಮಾಡಿ, “ಪೇಪರ್ ನಲ್ಲಿ ಸುಳ್ಳು ಸುದ್ದಿ ಹಾಕಿದ್ದಾರೆ. ನಾನು ಯಾರಿಗೂ ಈ ರೀತಿ ಹೇಳಿಲ್ಲ. ನಾನು ಸ್ಟೇಜ್ ಮೇಲೆ ಹೋಗೋಕೇ ಅವಕಾಶ ಇರಲಿಲ್ಲ. ಇನ್ನು ಪ್ರಧಾನಿಗೆ ಗಣೇಶ ವಿಗ್ರಹ ಹೇಗೆ ಕೊಡಲಿ? ಈ ಬಗ್ಗೆ ಪತ್ರಿಕೆಯವರಿಗೆ ಸ್ಪಷ್ಟನೆ ಕೊಡ್ತೇನೆ” ಅಂತ ಹೇಳಿದ್ರು.

ಹಾಗಾದರೆ ಈ ಸುದ್ದಿ ಸೃಷ್ಟಿಯಾದದ್ದು ಹೇಗೆ? ವರದಿ ಬರೆದ ಬೃಹಸ್ಪತಿಗೆ ಈ ಸುದ್ದಿ ಕೊಟ್ಟವರು ಯಾರು? ಸುದ್ದಿ ಕೆತ್ತುವ ಮುನ್ನ ಖಚಿತ ಮಾಡಿಕೊಳ್ಳಬೇಕು ಎನ್ನುವ ಸಾಮಾನ್ಯ ಪರಿಜ್ಞಾನ ಬೇಡವೇ?!

“ಸುದ್ದಿ ಸಣ್ಣದು, ಸುಳ್ಳು ದೊಡ್ಡದು, ಪ್ರಭಾವ ಕೆಟ್ಟದ್ದು”. ಪತ್ರಿಕೆಯವರಿಗೆ ಸ್ಪಷ್ಟನೆ ನೀಡಬಹುದು. ಆದರೆ ಸಾಮಾಜಿಕ ಜಾಲತಾಣದವರಿಗೆ?

ಹೀಗಾಗಿ ಈ ಪೋಸ್ಟ್..!

key words:  “Vijayavani” newspaper, completely false, DCM, media advisor

vtu

This news from “Vijayavani” newspaper is completely false: DCM’s media advisor

The post “ವಿಜಯವಾಣಿ” ಪತ್ರಿಕೆಯ ಈ ಸುದ್ದಿ ಸಂಪೂರ್ಣ ಸುಳ್ಳು: ಡಿಸಿಎಂ ಮಾಧ್ಯಮ ಸಲಹೆಗಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ರಾಜಿ ಇಲ್ಲ- ಸಿಜೆಪಿ ವಕ್ತಾರ

ನವದೆಹಲಿ,ಜುಲೈ,25,2026 (www.justkannada.in):  ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ...

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

ಕೋಲಾರ,ಜುಲೈ25,2026 (www.justkannada.in):  ತಾಯಿ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆಗೆ...

ಧರ್ಮೇಂದ್ರ ಪ್ರಧಾನ್ ಗೆ ಬೇರೆ ಇಲಾಖೆ ಕೊಟ್ರೆ ಸಹಿಸಲ್ಲ: ಸಚಿವ ಸ್ಥಾನದಿಂದ ವಜಾ ಮಾಡಿ- ರಾಹುಲ್ ಗಾಂಧಿ

ನವದೆಹಲಿ,ಜುಲೈ,25,2026 (www.justkannada.in):  ಧರ್ಮೇಂದ್ರ ಪ್ರಧಾನ್ ಗೆ ಬೇರೆ ಇಲಾಖೆ ಕೊಟ್ಟರೇ ಸಹಿಸುವುದಿಲ್ಲ...

ಕನ್ನಡದಲ್ಲೊಂದು ವಿಶಿಷ್ಟ ಪ್ರಯತ್ನ: 15 ದಿನಗಳಲ್ಲೇ  ಮಕ್ಕಳ ರಾಮಾಯಣ ಕೃತಿ ರಚಿಸಿದ 11 ವರ್ಷದ ಬಾಲಕಿ

ಮೈಸೂರು,ಜುಲೈ,25,2026 (www.justkannada.in):  ದೇಶದ ಮಹೋನ್ನತ ಮಹಾಕಾವ್ಯ ರಾಮಾಯಣವನ್ನು ಇಷ್ಟ ಪಡದವರು ಯಾರು...