24
June, 2026

A News 365Times Venture

24
Wednesday
June, 2026

A News 365Times Venture

ಶಾಸಕ ಪ್ರದೀಪ್ ಈಶ್ವರ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ: ಹೈಕೋರ್ಟ್ ಯಥಾಸ್ಥಿತಿ ಆದೇಶ

Date:

 

ಬೆಂಗಳೂರು, ಜೂ.24: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸೇರಿದ ಪರಿಶ್ರಮ ಎಜುಕೇಶನ್ ಟ್ರಸ್ಟ್‌ಗೆ ಮೂರು ನಾಗರಿಕ ಬಳಕೆಯ (ಸಿಎ) ನಿವೇಶನಗಳನ್ನು ಹಂಚಿಕೆ ಮಾಡಿದ ವಿಚಾರದಲ್ಲಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ (ಸಿಯುಡಿಎ) ಕೈಗೊಂಡ ಹಂಚಿಕೆ ನಿರ್ಣಯವನ್ನು ಪ್ರಶ್ನಿಸಿ ಪದ್ಮ ವಿಜಯ ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠವು ಸರ್ಕಾರ, ಸಿಯುಡಿಎ, ಜಿಲ್ಲಾಧಿಕಾರಿ ಹಾಗೂ ಪರಿಶ್ರಮ ಎಜುಕೇಶನ್ ಟ್ರಸ್ಟ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರ ಪರ ವಕೀಲರು, ಸಿಎ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದ್ದು, ಸ್ಥಳೀಯ ಶಾಸಕರ ಪ್ರಭಾವದಿಂದ ಏಕಪಕ್ಷೀಯವಾಗಿ ಟ್ರಸ್ಟ್‌ಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು. ಈ ಹಿನ್ನಲೆಯಲ್ಲಿ ಹಂಚಿಕೆ ರದ್ದುಪಡಿಸಿ, ಮಧ್ಯಂತರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ಗಮನಾರ್ಹವಾಗಿ, ಸಿಯುಡಿಎ 2026ರ ಜನವರಿ 14ರಂದು ನಂದಿ ಹೋಬಳಿಯ ಬೀಡಗಾನಹಳ್ಳಿ ಗ್ರಾಮದಲ್ಲಿರುವ 2,484 ಚದರ ಮೀಟರ್ ವಿಸ್ತೀರ್ಣದ ಮೂರು ನಿವೇಶನಗಳನ್ನು ಪರಿಶ್ರಮ ಎಜುಕೇಶನ್ ಟ್ರಸ್ಟ್‌ಗೆ ಹಂಚಿಕೆ ಮಾಡುವ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Key words: Karnataka, High Court, Pradeep Eshwar, Chikkaballapur , CUDA, Legal News

SUMMARY:

HC Orders Status Quo on Site Allotment to MLA Pradeep Eshwar’s Trust

Bengaluru, June 24: The Karnataka High Court has ordered maintenance of status quo on the allotment of three civic amenity (CA) sites to the Parikrama Education Trust linked to Chikkaballapur MLA Pradeep Eshwar.

Hearing a petition filed by Padma Vijaya Foundation challenging the decision of the Chikkaballapur Urban Development Authority (CUDA), the court issued notices to the State Government, CUDA, the Deputy Commissioner, and the Trust, seeking their responses. The matter has been posted for further hearing on August 14.

The petitioner alleged that the allotment was made illegally and influenced by the local MLA. The disputed sites, measuring 2,484 sq. metres in total, were allotted to the Trust in January 2026.

#Karnataka #HighCourt #PradeepEshwar #Chikkaballapur #CUDA #LegalNews

The post ಶಾಸಕ ಪ್ರದೀಪ್ ಈಶ್ವರ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ: ಹೈಕೋರ್ಟ್ ಯಥಾಸ್ಥಿತಿ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಎಂ.ಎನ್. ಅನುಚೇತ್ ನೇಮಕ

  ಬೆಂಗಳೂರು, ಜೂನ್ 24: ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್....

OC ವಿನಾಯಿತಿ: ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ  ಅರ್ಜಿ ಸಲ್ಲಿಸಲು  ಜುಲೈ 6 ಗಡುವು

ಬೆಂಗಳೂರು,ಜೂನ್,24,2026 (www.justkannada.in):   ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ ( +ಶೇ....

KPMA ಅಡಿ ನೋಂದಣಿಯಾಗದ ಡಿ-ಅಡಿಕ್ಷನ್ ಕೇಂದ್ರಗಳ ವಿರುದ್ಧ ಕ್ರಮ: ಮೈಸೂರು ಡಿ.ಸಿ ಲಕ್ಷ್ಮಿಕಾಂತ್ ರೆಡ್ಡಿ

ಮೈಸೂರು,ಜೂನ್,24,2026 (www.justkannada.in): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವ್ಯಸನ ವಿಮುಕ್ತ ಕೇಂದ್ರಗಳು (De-addiction...

ಅನಿತಾ ಕುಮಾರಸ್ವಾಮಿ ಜಮೀನು ಬಗ್ಗೆ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,24,2026 (www.justkannada.in):  ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಬಳಿ 100...