ಬೆಂಗಳೂರು,ಏಪ್ರಿಲ್,13,2026 (www.justkannada.in): ಕಾಂಗ್ರೆಸ್ ನ ಹಿರಿಯ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳು ವಿಚಾರ ಸಂಬಂಧ, ಸಂದರ್ಭ ಬಂದರೆ ನಾನು ದೆಹಲಿಗೆ ಹೋಗುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾವಾಗ ಹೋಗಬೇಕೋ ಅಗ ದೆಹಲಿಗೆ ಹೋಗುತ್ತೇನೆ ದೆಹಲಿಗೆ ಏನು ಬೀಗ ಹಾಕಿದ್ದಾರಾ ಎಂದು ಪ್ರಶ್ನಿಸಿದರು.
ಸಂಪುಟ ಪುನಾರಚನೆ ಬಗ್ಗೆ ಹೈಕಮಾಡ್ ತೀರ್ಮಾನ ಮಾಡಿದರೆ ಅದಕ್ಕೆ ನಾವು ಒಪ್ಪಲೇಬೇಕು ಒಪ್ಪುವುದಿಲ್ಲ ಅನ್ನೋ ಪ್ರಶ್ನೆಯೇ ಬರಲ್ಲ. ನಾನು ರಾಮಲಿಂಗರೆಡ್ಡಿ ಕೆಜೆಜಾರ್ಜ್ ಸಿನಿಯರ್ಸ್ ಇದ್ದೇವೆ ಅವರು ತೀರ್ಮಾನ ಮಾಡಿದರೆ ಆಗ ನಾವು ಪ್ರಶ್ನೆ ಮಾಡಲು ಆಗಲ್ಲ ಎಂದರು.
ಸಚಿವ ಸ್ಥಾನ ನೀಡೋದು ಹೈಕಮಾಂಡ್ ಎರಡ್ಮೂರು ಬಾರಿ ಗೆದ್ದಿರೋರು ಸಚಿವ ಸ್ಥಾನ ಕೇಳಿದರೆ ತಪ್ಪಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
Key words: opportunity I will, Delhi, Home Minister, Dr. G. Parameshwar
The post ಸಂದರ್ಭ ಬಂದ್ರೆ ನಾನೂ ದೆಹಲಿಗೆ ಹೋಗ್ತೇನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




