ಮಂಗಳೂರು,ಸೆಪ್ಟಂಬರ್,18,2026 (www.justkannada.in): ಕರಾವಳಿ ಭಾಗದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಈ ಕುರಿತು ಆರೋಗ್ಯ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್, ಮೊದಲ ಬಾರಿಗೆ ಸಂಪುಟ ಸಭೆ ಆಗುತ್ತಿದೆ. ನಾವೆಲ್ಲರೂ ಸಕಾರಾತ್ಮಕ ನಿಲುವಿನಲ್ಲಿದ್ದೇವೆ ಇಲ್ಲಿಗೆ ಬೇಕಾದ ಯೋಜನೆಗಳು ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ. ಕಾನೂನಾತ್ಮಕವಾಗಿ ಇರುವ ಯೋಜನೆಗಳೂ ಅನುಷ್ಟಾನಗೊಳ್ಳಲಿವೆ. ಎಲ್ಲದಕ್ಕೂ ಅನುದಾನ ಸಿಗುತ್ತೆ ಅಂತಾ ಹೇಳುವುದಿಲ್ಲ. ಅಭಿವೃದ್ದಿ ಆಗದ ಕಡೆಗೆ ಕಲ್ಯಾಣ ಕರ್ನಾಟಕ ಅಂತಾ ಇರೋದು. ಅಭಿವೃದ್ದಿ ಆಗುತ್ತಿರುವುದಕ್ಕೆ ನಂಜುಂಡಪ್ಪ ವರದಿ ಆದ್ಯತೆ ಇದೆ, ನಾವು ಅಭಿವೃದ್ದಿ ಆಗಿದೆ ಎಂದು ಗುರುತಿಸಿಕೊಂಡಿದ್ದೇವೆ. ಹಾಗಾಗಿ ನಮಗೆ ಹೆಚ್ಚು ಅನುದಾನ ಸಿಗುತ್ತಿಲ್ಲ ಎಂದರು.
ಸಮತೋಲನ ಕಾಪಾಡಿಕೊಂಡು ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಭವಿಷ್ಯದ ದೃಷ್ಠಿಯಿಂದ ಪ್ರವಾಸೋದ್ಯಮ ಅಭಿವೃದ್ದಿಯಾಗಬೇಕು. ತುಳು ಈ ಭಾಗದ ಸಂಸ್ಕೃತಿ ಪರಂಪರೆ ಭಾಷೆ ಉಳಿಯಲೇಬೇಕು. ಭಾಷೆ ಉಳಿದರೇ ಸಂಸ್ಕೃತಿಯೂ ಉಳಿಯುತ್ತದೆ ಎಂದು ಸಚಿವ ಯುಟಿ ಖಾದರ್ ತಿಳಿಸಿದರು.




